ಪುಟ:ಚಂದ್ರಶೇಖರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ. - ಬ4 : - ಪ್ರ ತಾ ಸ . IN/ಸುಂದರಿಯು ಬಹಳ ಖತಿಗೊಂಡು ರೈವಲಿನಿಯ ಹಡಗಿನಿಂದ ಇಳಿದು ಬಂದು ದಾರಿಯು ಉದ್ದಕ್ಕೂ ತನ್ನ ಸ್ವಾಮಿಯು ಸಂಗಡ ಕೈವಲಿನಿ ಯನ್ನು ಬೈದುತ್ತ ಹೋಗುತ್ತಿದ್ದಳು. ಒಂದೊಂದು ಸಲ ಅಭಾಗಿನಿ ಬೆಂದೂ, ಒಂದುಸಲ ಕೆಟ್ಟಮೋರೆಯವಳೆಂದೂ, ಒಂದುಸಲ ಹಾಳಾದವಳೆಂದೂ ಹೀಗೆಲ್ಲಾ ಪ್ರಿಯಸಂಬೋಧನಗಳಿಂದ ಅವಳನ್ನು ಕುರಿತು ಹೇಳುತ್ತ ಸ್ವಾಮಿಯ ಕೌತುಕವನ್ನು ಹೆಚ್ಚು ಮಾಡುತ್ತ ಹೋಗುತ್ತಿದ್ದಳು. ಮನೆಗೆ ಬಂದಮೇಲೆ ಬಹಳ ಅತ್ತಳು, ಅನಂತರ ಚಂದ್ರಶೇಖರನು ಒಂದುಕಡೆಗೆ ದೇಶತ್ಯಾಗಿಯಾಗಿ ಹೊರಟುಹೋದನು. ಅನಂತರ ಕೆಲವುದಿನ ಹಾಗೆಯೇ ಕಳೆಯಿತು. ಕೈವಲನಿದು ವಿಚಾರವಾಗಲಿ ಚಂದ್ರಖರನ ವಿಚಾರವಾಗಲಿ ಏನೊಂದು ಸಮಾಚಾರವೂ ಗೊತ್ತಾಗಲಿಲ್ಲ. ಅನಂತರ ಸುಂದರಿದು ಒಳೊಳ್ಳೆ ಸೊಗಸದ ಸೀರೆಗಳನ್ನು ಟ್ಟು ನಗ ಗಳನ್ನು ತೊಟ್ಟಳು. ಸುಂದರಿಯು ಚಂದ್ರ ಶೇಖರನ ನೆರೆಯವನ ವುಗಳೆಂದೂ ಸಂಬಂಧದಲ್ಲಿ ಅವನಿಗೆ ಸೋದರಿಯಾಗಬೇಕೆಂದೂ ಮೊದಲೆ ಹೇಳಿದೈವಶ್ನೆ, ಅವಳ ತಂದೆಯು ದರಿದ)ನಾ ಗಿರಲಿಲ್ಲ. ಅದು ಕಾರಣ ಅವಳು ತರುಮನೆಯಲ್ಲಿಯೇ ಇರುತ್ತಿದ್ದಳು. ಅವಳ ಗಂಡ ಶ್ರೀನಾಥ, ಅವನು ಕೇವಲ ಮನೆಯು ಅತಿಯೆದೆಯನಾದ ಅಯನಾಗದಿದ್ದರೂ ಆಗಾಗ್ಗೆ ಬಂದು ಅತ್ತೆಯ ಮನೆಯಲ್ಲಿ ಇರುತಲಿದ್ದನು. ಕೈವಲಿನಿಗೆ ವಿಪತ್ತುಂಟಾಗಿದ್ದಾಗ ಅವನು ವೇದಗಾ ನದಲ್ಲಿದ್ದನೆಂದು ಹೇಳಿದ್ದೇವೆ, ಸುಂದರಿಯೇ ತೌರುಮನೆಯಲ್ಲಿ ಯಜಮಾನಿಯಾಗಿದ್ದಳು. ಅವಳ ತಾಯಿಯ ದೀರ್ಘಾಲಸ್ಯದಿಂದ ಹಾಸಿಗೆಯನ್ನು ಹಿಡಿದಿದ್ದಳು, ಸುಂದರಿಗೆ ಮತ್ತೊಬ್ಬ ತಂಗಿ ಇದ್ದಳು. ಅವಳ ಹೆಸರು ರೂಪಸಿ. ರೂಸಸಿಯು ಗಂಡನ ಮನೆಯಲ್ಲಿರುವಳು. ಸುಂದರಿಯು ಹೊಸ ಸೀರೆಯನ್ನುಟ್ಟು ಆಭರಣಗಳ ನ್ನೆಲ್ಲಾ ತೊಟ್ಟು ಅಲಂಕೃತೆಯಾಗಿ ತಂದೆಯ ಬಳಿಗೆ ಹೋಗಿ, ನಾನು ರೂಪಸಿಯನ್ನು ನೋಡಿಕೊಂಡು ಬರಬೇಕು. ಅವಳ ವಿಚಾರವಾಗಿ ಏನೇನೋ ದುಸ್ಸಪ್ಪ ವನ್ನು ಕಂಡೆನು. ಹೇಗೆ ಇದ್ದಾಳೆ, ಏನೋ, ಹೋಗಿ ನಾಲ್ಕು ದಿನವಿದ್ದು ನೋಡಿಕೊಂಡು ಬರುವೆನೆಂದಳು, ಸುಂದರಿಯ ತಂದೆ ಕೃಷ್ಣಕವುಲ ಚಕ್ರವರ್ತಿಯು ವುಗಳ ಮಾತಿಗೆ ವಿಾರದವನು. ಮೊದಲು