ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મ. ಎರಡನೆಯ ಭಾಗ. ಕೊಠಡಿಯಿಂದ ಹೊರಗೆ ಬಂದು ನಿಂತು ನೋಡಿದಳು. ಏನೂ ಗೊತ್ತಾಗಲಿಲ್ಲ. ಒಳಗೆ ಬಳಕು ಉರಿಯುತಲಿತ್ತು. ಪಾರ್ವತಿಯು ಎದ್ದಿದ್ದಳು. ರೈವಲಿನಿಯು ಸಾರ್ವತಿ ದುನ್ನು ಕುರಿತು, ಏನಾಯಿತು ? ಏನಾದರೂ ಗೊತ್ತುಂಟೆ ? ಎಂದಳು. ಪಾರ್ವತಿ- ಏನೂ ಗೊತ್ತಾಗಲಿಲ್ಲ. ಎಲ್ಲರೂ ಹಡಗಿಗೆ ಕಳ್ಳರು ಬಿದ್ದರನ್ನು ತ್ತಾರೆ. ಸಾಹೆಬನನ್ನು ಹೊಡೆದುಹಾಕಿದರಂತೆ. ಇದೆಲ್ಲಾ ನಮ್ಮ ಪಾಪದ ಫಲ ! ಕೈವಲಿನಿ-ಸಾಹೆಬನನ್ನು ಹೊಡೆದು ಹಾಕಿದ್ದುದು ನಮ್ಮ ಪಾಪದ ಫಲವಾದ ಬಗೆ ಹೇಗೆ ? ಅದು ಸಾಹೆಬನ ಪಾಪದ ಫಲವೇ ಆಯಿತು. ಪಾರ್ವತಿ.-ಕಳ್ಳರು ಬಿದ್ದುದು ನಮ್ಮ ವಾಸದ ಫಲ. ನನಗೆ ವಿಪತ್ತುಂಟಾ ಯಿತು. - ಶೈವಲಿನಿ-ನಿಸತ್ತೇನು ? ಒಬ್ಬ ಡಕಾಯಿತನ ಸಂಗಡ ಇದ್ದೆವು. ಅದು ತಪ್ಪಿ ಮತ್ತೊಬ್ಬ ಡಕಾಯಿತನ ಸಂಗಡ ಹೋಗುವೆವು, ಕೆಂಪುಮುಖದ ಡಕಾಯಿತನ ಕೈ ಮಿಂದ ತಪ್ಪಿಸಿಕೊಂಡು ಕಪ್ಪು ಡಕಾಯಿತನ ಕೈಗೆ ಬಿದ್ದ ಹಾಗಾಯಿತು. ಅದರಿಂದ ಕೇಡೇನು ? - ಹೀಗೆಂದು ಹೇಳಿ ಶಿವಲಿನಿಯು ತನ್ನ ಸಣ್ಣದಾದ ತಲೆಯಿಂದ ಬೆನ್ನಿನ ಮೇಲೆ ಹರಿದಾ ಡುತಲಿದ್ದ ವೇಣಿಯನ್ನು ತೂಗಲಾಡಿಸುತ್ತ ಸ್ವಲ್ಪ ನಕ್ಕ, ಹೋಗಿ ಬಂದು ಸಣ್ಣದಾದ ವಂಡದಮೇಲೆ ಕುಳಿತುಕೊಂಡಳ ೨, ಆಗ ಪಾರ್ವತಿದು, ಇಂತಹ ಸಮಯದಲ್ಲಿ ನಿನ್ನ ನಗುವನ್ನು ನೋಡಿದರೆ ನನಗೆ ಸಹ್ಯವಾಗುವುದಿಲ್ಲವೆಂದಳು. - ವಲಿನಿ-ಅಸಹ್ಯವಾದರೆ ಗಂಗಾಜಲವಿಗೆ ಬಿದ್ದು ಪ್ರಾಣವನ್ನು ಬಿಡು, ನಾನು ನಗುವುದಕ್ಕೆ ಇದೇ ಸಮಯವು ಒದಗಿ ಬಂದಿದೆ. ನಾನು ನಗುವೆನು, ಬಂದಿ ರುವ ಡಕಾಯಿತರಲ್ಲಿ ಒಬ್ಬನನ್ನು ತರಲಾರೆಯಾ ? ಸ್ವಲ್ಪ ವಿಚಾರಿಸಿ ನೋಡುವೆನು. ಪಾರ್ವತಿಯು ಕೋಪಗೊಂಡು, ಕರೆದುಬೇಕಾದುದಿಲ್ಲ, ಅವರೆ ಬರುವರೆಂದಳು. ಆದರೆ ನಾಲ್ಕು ಗಂಟೆ ಹೊತ್ತಾಯಿತು, ಆದರೂ ಒಬ್ಬ ಡಕಾಯಿತನೂ ಬರಲಿಲ್ಲ. ಆಗ ಶೈವಲಿನಿಯು ದುಃಖಿತೆಯಾಗಿ, ನಮ್ಮ ಅದೃಷ್ಟ್ಯವು ಇನ್ನು ಎಂತಹವುದೊ ! ಡಕಾ ಯಿತಿ ಕಳ್ಳರೂ ಕರೆಯಿಸಿ ಕೇಳಲಿಲ್ಲವಲ್ಲ ! ಎಂದಂದುಕೊಂಡಳು. ಸರ್ವತಿಯು ಅಳು ತಿದ್ದಳು. - ಬಹಳ ಹೊತ್ತಿನಮೇಲೆ ಹಡಗು ಎಂದು ಬಂದು ದಡಕ್ಕೆ ತಗಲಿತು, ಹಡಗು ಸ್ವಲ್ಪ ಹೊತ್ತು ಅಲ್ಲಿಯೇ ಇತ್ತು, ಅನಂತರ ಅಲ್ಲಿಗೆ ಕೆಲವು ಮಂದಿ ಮೊಣ್ಣೆ ಹಿಡಿದಿಟ್ಟವರು ಬಂದು ಪಲ್ಲಕ್ಕಿಯನ್ನು ತಂದರು. ಅದರ ಮುಂದುಗಡೆ ರಾಮಚರಣ ! CJಲಿಗಳು ಪಲ್ಲಕ್ಕಿಯನ್ನು ದಡದಲ್ಲಿಳಿಸಿದರು. ರಾಮಚರಣನು ಹಡಗನ್ನು ಹತ್ತಿ ಪ್ರತಾಪನ ಹತ್ತಿರ ಹೋದನು. ಅವನ ಅಪ್ಪಣೆಯನ್ನು ಪಡೆದು ರಾಮಚರಣನು ಕೊಠಡಿಯೊಳಗೆ ಪ್ರವೇಶ ಮಾಡಿದನು. ಒಳಗೆ ಬಂದು ಮೊದಲು ಪಾರ್ವತಿಯ ಮುಖ ಎ.