ಪುಟ:ಚಂದ್ರಶೇಖರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನೆಯ ಚಾಗೆ. ಅ ಪುಣ್ಯಸ್ಪರ್ತ. ಮೊದಲನೆಯ ಪರಿಚ್ಛೇದ. ->?e೯]</- ರಮಾನಂದ ಸ್ವಾಮಿ. ••••• ಮಾಂ ಗೀರೆಂಬ ಊರಿನಲ್ಲಿ ಒಂದು ವರ. ಅಲ್ಲಿ ಒಬ್ಬ ಪರಮಹಂಸನು ಕೆಲವು ದಿನಗಳಿಂದ ವನಿಸುತಲಿದ್ದನು. ಅವನ ಹೆಸರು ರಮಾ ನಂದಸ್ವಾಮಿ, ಆ ಎಹ್ಮಚಾರಿಯು ರಮಾನಂದ ಸ್ವಾಮಿ ಯ ಸಂಗಡ ಮಾತನಾಡುತಲಿದ್ದನು. ರಮಾನಂದಸ್ವಾಮಿದು ಸಿದ್ಧ ಪುರುಷನೆಂದು ಅನೇಕರಿಗೆ ಗೊತ್ತು, ಆತನು ಅದ್ವಿತೀ ಯ ಜ್ಞಾನಿ ಯೆಂಬುದಕ್ಕೆ ಅನುಮಾನವೇ ಇಲ್ಲ, ಆತನು ಭಾರತವರ್ಷದಲ್ಲಿ ಲುಪ್ತವಾಗಿ ಹೋಗಿರುವ ದಶ ನ ವಿಜ್ಞಾನ ಶಾಸ್ತ್ರಗಳನ್ನೆಲ್ಲಾ ತಿಳಿದಿದ್ದ ನೆಂತಲೂ ಪವಾದವಿತ್ತು. ಆತನು ಹೇಳುತ್ತಿದ್ದುದೇನೆಂದರೆ:- ಕೇಳು, ವತ್ಥ ಚಂದ್ರಶೇಖರ ! ನೀನು ಉಪಾರ್ಜನೆಮಾಡಿರುವ ಸಕಲಶಾಸ್ತ್ರಗಳನ್ನೂ ಸಾವಧಾನವಾಗಿ ಪ್ರಯೋಗಿಸಬೇಕು. ಸಂತಾಪಕ್ಕೆ ಹೃದಯದಲ್ಲಿ ಸ್ವಲ್ಪವೂ ಸ್ಥಳವನ್ನು ಕೊಡಬೇಡ. - ಹೀಗೆಂದು ಹೇಳಿ ರವಾನಂದ ಸ್ವಾಮಿಯು ಮೊದಲು, ಯಯಾತಿ, ಹರಿಶ್ಚಂದ), ದಶರಥ ಮುಂತಾದ ಪ್ರಾಚೀನ ರಾಜರಗಳ ಪ್ರಸಂಗವನ್ನೆ ತಿ, ಶ್ರೀರಾಮಚಂದ್ರ, ಯುಧಿ ಪೈರ, ನಳ ಮುಂತಾದವರ ಹೆಸರುಗಳನ್ನು ಉಲ್ಲೇಖಮಾಡಿ, ಸಾರ್ವಭ ವ ಪುಣ್ಯಾ ತ್ಮರಾದ ರಾಜರೂ ಚಿರದುಃಖಿಗಳಾಗಿ ಕದಾಚಿ ಸುಖಿಗಳಾಗಿದ್ದರೆಂದು ಉದಹರಿಸಿ ಹೇಳಿ ದನು, ಅನಂತರ ವತಿ, ವಿಶ್ವಾಮಿತ್ರ ಮುಂತಾದವರ ವಿಚಾರವನ್ನು ತಿಳಿಸಿ, ಅವರೂ ದುಃಖಿಗಳಾಗಿದ್ದರೆಂದು ತೋರಿಸಿದನು. ದಾನವರಿಂದ ಪೀಡಿತರಾದ ಇಂದ್ರಾದಿ ದೇವತೆಗಳನ್ನು ಉದಹರಿಸಿ, ಸುರಲೋಕವೂ ದುಃಖಸರಿಪೂರ್ಣವಾದುದೆಂದು ತಿಳಿದು ಹೇಳಿದನು. ಕಡೆಗೆ