ಪುಟ:ಚಂದ್ರಶೇಖರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆದು ಭಾಗ. 0 ಇ ಕೈವಲಿನಿಯು ಇದುವರೆಗೂ ನಿಜವನ್ನು ಹೇಳುತ್ತಿದ್ದವಳು ಈಗ ಸುಳ್ಳುಹೇಳುವು ದಕ್ಕೆ ಪ್ರಾರಂಭಿಸಿದಳು. ನಬಾಬನ ಪ್ರಶ್ನೆಗೆ, ಇಲ್ಲವೆಂದುತ್ತರವನ್ನು ಕೊಟ್ಟಳು. ನಬಾಬ-ಪ್ರತಾಪ ಯಾರು ? ಅವನ ಮನೆಯೆಲ್ಲಿ ? ಶೈವಲಿನಿಯು ಪ್ರತಾಪನ ನಿಜವಾದ ಪರಿಚಯವನ್ನು ಹೇಳಿದಳು. ನಬಾಬ-ಅವನು ಇಲ್ಲಿಗೆ ಏತಕ್ಕೆ ಬಂದಿದ್ದನು. ಶೈವಲಿನೀ-ಸರ್ಕಾರದಲ್ಲಿ ಚಾಕರಿ ಮಾಡಬೇಕೆಂದು. ನಬಾಬ-ಅವನು ನಿನಗೇನಾಗಬೇಕು ? ಕೈವಲಿನಿ-ನನ್ನ ಸ್ವಾಮಿ. ನಬಾಬ - ನಿನ್ನ ಹೆಸರೇನು ? ಶೈವಲಿನೀ-ರೂಸನೀ. ಶೈವಲಿನಿಯು ಅನಾಯಾಸವಾಗಿ ಈ ಉತ್ತರವನ್ನು ಹೇಳಿದಳು, ಸಾಸಿವೆ ಯು ಈ ಮಾತನ್ನು ಹೇಳುವುದಕ್ಕೋಸ್ಕರವೆ ಬಂದಿದ್ದಳು. ನಬಾಬ ಒಳ್ಳೆಯದು-ಈಗ ನೀನು ಮನೆಗೆ ಹೋಗು. ಕೈವಲಿನೀ - ನನಗೆ ಮನೆಯಲ್ಲಿದೆ ? ಎಲ್ಲಿಗೆ ಹೋಗಲಿ ? ನಬಾಬನು ನಿಸ್ತಬ್ಬನಾದನು. ಅನಂತರ ಉತ್ತರಕ್ಷಣದಲ್ಲಿಯೇ, ಹಾಗಾದರೆ, ನೀನು ಎಲ್ಲಿಗೆ ಹೋಗುವೆ ? ಎಂದನು. - ಶೈವಲಿನೀ-ನನ್ನ ಸ್ವಾಮಿಯ ಬಳಿಗೆ--ನನ್ನ ಸ್ವಾಮಿಯ ಬಳಿಗೆ ಕಳುಹಿಸಿಕೊಡ ಬೇಕು-ತಾವು ರಾಜಾ-ತಮ್ಮಲ್ಲಿ ಹೇಳಿಕೊಳ್ಳುತ್ತೇನೆ, ನನ್ನ ಸ್ವಾಮಿಯನ್ನು ಇಂಗ್ಲೀ ಪರು ಹಿಡಿದುಕೊಂಡು ಹೋಗಿದ್ದಾರೆ. ತಾವು ನನ್ನ ಸ್ವಾಮಿದುನ್ನು ಅವರ ಕೆರೆಯಿಂದ ಬಿಡಿಸಿಕೊಡಬೇಕು. ಅದಾಗದಿದ್ದರೆ ನನ್ನನ್ನು ಆತನ ಬಳಿಗೆ ಕಳುಹಿಸಿಕೊಡಬೇಕು. ತಾವು ನನ್ನ ಪ್ರಾರ್ಥನೆಯನ್ನು ಮನಸ್ಸಿಗೆ ತಂದುಕೊಳ್ಳದಿದ್ದರೆ ಇಲ್ಲಿಯೇ ತಮ್ಮ ಸವ ಕ್ಷಮದಲ್ಲಿ ಪ್ರಾಣವನ್ನು ಬಿಟ್ಟುಬಿಡುವೆನು. ಅದಕ್ಕೋಸ್ಕರವೇ ಇಲ್ಲಿಗೆ ಬಂದೆನು. ಗುರಗಣಖಾನನು ಬಂದಿದ್ದಾನೆಂದು ವರ್ತಮಾನವು ಬಂದಿತು. ನಬಾಬನು ಶೈವಲಿನಿ ಯನ್ನು ಕುರಿತು, ಒಳ್ಳೆಯದು, ನೀನು ಇಲ್ಲಿಯೇ ಸ್ವಲ್ಪ ಹೊತ್ತು ಕಾದಿರು. ನಾನು ಪುನಃ ಬರುವೆನೆಂದು ಹೇಳಿದನು. -