ಪುಟ:ಚಂದ್ರಶೇಖರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪರಿಚ್ ದ. +4 - ನೂತನ ಸಖಿ. ನ ಬಾಬನು ಗುರಗಣಖಾನಿನ ಸಂಗತ ಬೇರೆ ಮಾತನಾಡಿದಮೇಲೆ, ಇಂಗ್ಲೀ ಪರೊಂದಿಗೆ ಯುದ್ಧ ಮಾಡುವುದೇ ಒಳ್ಳೆಯದು, ಯುದ್ಧಕ್ಕೆ ಮುಂಚೆ ಅವಿಯಟನನ್ನು ಅವರು ಮಾಡಬೇಕೆಂದು ತೋರು ತದೆ- ಏತಕ್ಕೆಂದರೆ, ಅವನು ನನಗೆ ಪರಮ ಶತ್ರುವಾಗಿದ್ದಾನೆ ಏನು ಹೇಳು ? ಎಂದನು. - ಗುರಗರ್ಣಾ-ಯುದ್ಧ ಮಾಡುವುದಕ್ಕೆ ನಾನು ಎಲ್ಲಾ ಸಮಯದಲ್ಲಿಯೂ ಸಿದ್ಧ ನಾಗಿದ್ದೇನೆ, ಆದರೆ ದೂತನನ್ನು ದಸ್ತಗಿರಿ ಮಾಡತಕ್ಕದ್ದಲ್ಲ- ದೂತನಿಗೆ ತೊಂದರೆ ಕೊಟ್ಟರೆ ವಿಶ್ವಾಸಘಾತಕತನವೆಂದು ನಮ್ಮನ್ನು ನಿಂದಿಸುವರು. ಅದಲ್ಲದೆ - ನಬಾಬ-ಅಮಿದುಳನು ನೆನ್ನೆ ರಾತ್ರಿ ಈ ಪ್ರಹರಿನೊಳಗೆ ಬಂದು ಒಬ್ಬ ಮನು ಪನ ಮನೆಯನ್ನು ಆಕ್ರಮಣಮಾಡಿ ಅವನನ್ನು ಹಿಡಿದುಕೊಂಡು ಹೋಗಿದ್ದಾನೆ. ಯಾವನು ನಮ್ಮ ಅಧಿಕಾರದಲ್ಲಿದ್ದುಕೊಂಡು ಅಪರಾಧವನ್ನು ಮಾಡಿದ್ದಾನೆ ಅವನು ದೂತನಾದರೂ ನಾನವನನ್ನು ದಂಡಿಸಕೂಡದೇತಕ್ಕೆ? ಗುರಗಣರ್ಖಾ - ಅವನು ಹಾಗೆ ಮಾಡಿದ್ದರೆ ಅವಶ್ಯಕವಾಗಿ ದಂಡನಾರ್ಹನೇ ಹೌದು, ಆದರೆ ಅವನನ್ನು ಹಿಡಿಯುವುದು ಹೇಗೆ ? ನಬಾಬ-ಈಗಲೆ ಅವನ ವಾಸಸ್ಥಾನಕ್ಕೆ ಸಿಪಾಯಿಗಳನ್ನು ಫಿರಂಗಿ ಸಮೇತವಾಗಿ ಕಳುಹಿಸು' ಅವರು ಹೋಗಿ ಅವನನ್ನು ಅವನಕಡೆ ಜನರ ಸಮೇತವಾಗಿ ಹಿಡಿದು ಕೊಂಡು ಬರಲಿ. ಗುರಗಣರ್ಖಾ-ಅವನು ಈಗ ಪ್ರಹರಿನಲ್ಲಿಲ್ಲ. ಈಹೊತ್ತು ಏಳೆಂಟು ಘಂಟೆಯ ಹೊತ್ತಿನಲ್ಲಿ ಹೊರಟುಹೋದನು. ನಬಾಬ- ಅದು ಹೇಗೆ ? ನನಗೆ ತಿಳಿಸದೆ ? ಗುರಗಣರ್ಖಾ ತಿಳಿಸುವುದಕ್ಕೋಸ್ಕರ ಹೆ ಎಂಬಾತನೊಬ್ಬನನ್ನು ಇಟ್ಟುಹೋಗಿ ೧ಾನೆ. ನಬಾಬ - ಈಪ್ರಕಾರ ಹಠಾತ್ತಾಗಿ ನಮ್ಮ ಅಪ್ಪಣೆಯಿಲ್ಲದೆ ಪಲಾಯನಕ್ಕೆ ಕಾರಣ ವೇನು ? ಇದರಿಂದ, ನಮ್ಮ ಸಂಗಡ ಸೌಜನ್ಯವು ತಪ್ಪಿದೆಯೆಂದು ತಿಳಿದೇ ಪಲಾಯನವಾಗಿ ಹೋಗಿದ್ದಾನೆ.