ಪುಟ:ಚಂದ್ರಶೇಖರ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

yo ಚಂದ್ರಶೇಖರ. ಅನಂತರ ನವಾಬನು ಪುನಃ ಅಂತಃಪುರಕ್ಕೆ ಬಂದು ಶೈವಲಿನಿಯನ್ನು ಕರೆದನು. ಅವಳನ್ನು ಕುರಿತು, ಈ ಕೂಡಲೆ ನಿನ್ನ ಸ್ವಾಮಿಯನ್ನು ಬಿಡುಗಡೆ ಮಾಡಿಸುವುದ ಕ್ಯಾಗುವುದಿಲ್ಲ. ಇಂಗ್ಲೀಷರು ಅವನನ್ನು ಹಿಡಿದುಕೊಂಡು ಕಲಿಕತ್ತೆಗೆ ಹೊರಟು ಹೋಗಿದ್ದಾರೆ. ಮರವಿದಾಬಾದಿಗೆ ಪರವಾನೆ ಯನ್ನು ಕಳುಹಿಸಿದ್ದೇನೆ, ಅಲ್ಲಿ ಅವರನ್ನು ಹಿಡಿಯುವರು. ನೀನು ಈಗ-ಎಂದು ಮುಂದೆ ಹೇಳುವುದರೊಳಗೆ ಶೈವಲಿನಿಯು ಕೈಮುಗಿದುಕೊಂಡು, ವಾಚಾಳಿಯಾದ ನನ್ನ ತಪ್ಪನ್ನು ಮನ್ನಿಸ ಬೇಕು, ಈಗಲೆ ಜನರನ್ನು ಕಳುಹಿಸಿದರೆ ಅವರು ನಿಕ್ಕಲಾರರೇನೆಂದು ಕೇಳಿದಳು. ನಬಾಬ-ಇಂಗ್ಲೀಷರನ್ನು ಹಿಡಿಯುವುದು ಸ್ವಲ್ಪ ಜನರಿಂದ ಆಗತಕ್ಕ ಕೆಲಸವಲ್ಲ. ಹೆಚ್ಚು ಜನರನ್ನು ಶಸ್ತ್ರ ವಾಣಿಗಳನ್ನಾಗಿ ಕಳುಹಿಸಬೇಕಾದರೆ ದೊಡ್ಡ ಹಡಗು ಬೇಕಾಗು ವುದು, ಅದು ಹೋಗುವುದರೊಳಗಾಗಿ ಅವರು ವರದಾಬಾದಿಗೆ ತಲ್ಪುವರು. ಹೆಚ್ಚು ಯುದ್ದೋದ್ಯೋಗವನ್ನು ಕಂಡು ಇಂಗ್ಲೀಷರು ಬಂದಿಯಾಗಿರುವ ಜನರನ್ನು ಹೊಡೆದುಹಾಕಿಬಿಟ್ಟರೆ ಮಾಡುವುದೇನು ? ಮುರಪಿದಾಬಾದಿನಲ್ಲಿ ನಮ್ಮ ಕಡೆಯವರು ಬಹಳ ಚತುರರಾದ ನ ಇಕರರು ಇರುತ್ತಾರೆ ; ಅವರು ಕೌಶಲದಿಂದ ಹಿಡಿದುಹಾಕು ವರು. ಕೈವಲಿನಿಯು ಮನಸ್ಸಿನಲ್ಲಿ, ತನ್ನ ಸುಂದರವಾದ ಮುಖದಿಂದ ಅನೇಕ ಕಾರ್ಯ ಗಳನ್ನು ನಡೆಸಬಹುದೆಂದು ತಿಳಿದು ಕೊಂಡಳ . ನವಾಬನು ಅವಳ ಸುಂದರವಾದ ಮುಖವನ್ನು ನೋಡಿ ಅವಳು ಹೇಳಿದುದನ್ನೆಲ್ಲಾ ನಂಬಿ ಅವಳಲ್ಲಿ ವಿಶೇಷ ದಯೆಯುಳ್ಳವ ನಾದನು. ಇಲ್ಲದಿದ್ದರೆ, ಇಷ್ಟ ಸಂಗತಿಗಳನ್ನೆಲ್ಲಾ ತಿಳಿದುಹೇಳುತ್ತಿದ್ದನೆ ? ಕೈವಲಿನಿಯು ಪುನಃ ಕೈಮುಗಿದುಕೊಂಡು, ಈ ಅನಾಥೆಗೆ ಇಷ್ಟು ದಣಿಯನ್ನು ತೋರಿಸಿರುವುದ ರಿಂದ ನನ್ನದು ಮತ್ತೊಂದು ಅರಿಕೆಯುಂಟು ನನ್ನ ಸ್ವಾಮಿಯನ್ನು ದ್ದಾರ ಮಾಡು ವುದು ಬಹಳ ಕಮ್ಮವಾದ ಕಾರ್ಯವಲ್ಲ. ಅವನು ಸ್ವಯಂ ವೀರಪುರುಷನು. ಅವನ ಕೈಯಲ್ಲಿ ಅಸ್ತ್ರ ವಿದ್ದರೆ ಇಂಗ್ಲೀಷರು ಅವನನ್ನು ಎಂದಿಗೂ ಹಿಡಿಯುತ್ತಿರಲಿಲ್ಲ. ಈಗಲೂ ಅವನಿಗೆ ಆಯುಧವು ಸಿಕ್ಕಿದರೆ ಅವನನ್ನು ಯಾರೂ ಬಂದಿಯಾಗಿಟ್ಟುಕೊಂಡಿರ ಲಾರರು. ಯಾರಾದರೂ ಹೋಗಿ ಅವನಿಗೆ ಬೇಕಾದ ಆದುಧಗಳನ್ನು ಕೊಟ್ಟರೆ, ಆತನೇ ಸ್ವಂತವಾಗಿ ಬಿಡುಗಡೆಯಾಗಿ ಜತೆಗಾರರನ್ನೂ ಬಿಡಿಸಿಕೊಂಡು ಬರುವನೆಂದು ಹೇಳಿದಳು. ನಬಾಬನು ನಕ್ಕು , ನೀನು ಇನ್ನೂ ಹುಡುಗಿ, ಇಂಗ್ಲೀಷರು ಎಂತಹವರೆಂಬುದನ್ನು ಅರಿಯೆ. ಯಾರುತಾನೇ ಆ ಇಂಗ್ಲೀಷರ ಹಡಗನ್ನೇರಿ ಅವನಿಗೆ ಆಯುಧವನ್ನು ಕೊಟ್ಟು ಬರುವರು ? ಎಂದನು. ಶೈವಲಿನಿಯು ಮುಖನತೆಯಾಗಿ ಅಸ್ಪುಟವಾದ ಕಂಠದಿಂದ, ಅಪ್ಪಣೆಯಾಗಿ ಬಂದು ಹಡಗನ್ನು ಕೊಟ್ಟರೆ ನಾನೇ ಹೋಗಿಬರುವೆನೆಂದಳು,