ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಭಾಗ. V೧ ನಬಾಬನು ಗಟ್ಟಿಯಾಗಿ ನಕ್ಕನು. ಆ ನಗುವನ್ನು ಕೇಳಿ ಕೈವಲಿನಿಯು ಭೂ ಸಂಕುಚಿತನಾಡಿ, ಪ್ರಭು ! ನನ್ನ ಕೈಲಾಗದಿದ್ದರೆ ನಾನೇ ಸಾಯುವೆನು. ಅದರಿಂದೆ ಯಾರಿಗೂ ನಮ್ಮವೇನೂ ಇಲ್ಲ, ಆದರ, ನನ್ನ ಕೈಲಾದರೆ ನನ್ನ ಕಾರ್ಯವು ಸಿದ್ದಿಯಾದ ಹಾಗಾಯಿತು. ತಮ್ಮ ಕಾರ್ಯವೂ ಸಿದ್ದಿ ಯಾಗುವುದು ಎಂದಳು. - ನವಾಬನು ರೈವಲಿನಿಯ) ಕುಂಚಿತವಾದ ಭೂಗಳಿಂದ ಶೋಭಿತವಾದ ಮುಖವಂಡ ಲವನ್ನು ನೋಡಿ, ಇವಳು ಸಾಮಾನೈಯಾದ ಹೆಂಗಸಲ್ಲವೆಂದಂದುಕೊಂಡು, ಸತ್ತರೆ ಸಾದುಲಿ ಅದರಿಂದ ನಮ್ಮದೇನು ? ಅವಳಿಂದ ಸಾಧ್ಯವಾದರೆ ಒಳ್ಳೆಯದೇ ಆಯಿತು. ಆಗದಿದ್ದರೆ ಮರವಿದಾಬಾದಿನಲ್ಲಿ ಮಹಮ್ಮದತಕಿಯು ಕಾರ್ಯವನ್ನು ನೆರವೇರಿಸುವು ನೆಂದು ಮನಸ್ಸಿನಲ್ಲಿ ಯೋಚಿಸಿಕೊಂಡು, ಕೈವಲಿನಿಯನ್ನು ಕುರಿತು, ನೀನು ಒಬ್ಬಳೆ ಹೋಗಬಲ್ಲೆಯಾ ? ಎಂದನು. ಕೈವಲಿನೀ-ನಾನು ಹೆಂಗಸು, ಒಬ್ಬಳೆ ಹೋಗಲಾರೆನು. ತಾವು ನನ್ನ ಜತೆಗೆ ಒಬ್ಬ ದಾನಿಯನ್ನೂ , ಒಬ್ಬ ರಕ್ಷಕನನ್ನೂ ಕಳುಹಿಸಿಕೊಡ 'ಕು. ನಬಾಬನು ಸ್ವಲ್ಪ ಆಲೋ ಚಿಸಿ, ಅನಂತರ ನಂಬಗೆಯುಳ್ಳ ಬಲಿಷ್ಕನಾದ ವನೀ ಉದ್ದೀನನೆಂಬುವನನ್ನೂ ಒಬ್ಬ ಸಾಹಸವುಳ್ಳ ಮೊಲೆಯನ್ನೂ ಕರೆಯಿಸಿದನು. ಅವರು ಬಂದು ಪಣಾಮವನ್ನು ಮಾಡಿದರು. ನಬಾಬನು ಅವನನ್ನು ಕುರಿತು, ಈ ಹೆಂಗಸಿನ ಸಂಗಡ ಹೋಗು ; ವತ್ತು ಒಬ್ಬ ಹಿಂದೂ ಪರಿಚಾರಿಕೆಯನ್ನೂ ಸಂಗಡ ಕರೆದುಕೊಂಡು ಹೋಗಿ ಇವಳು ಯಾವ ಆಯು ಧಗಳನ್ನು ಬೇಕೆನ್ನುವಳೆ ಅವುಗಳನ್ನೂ ತೆಗೆದುಕೊಳ್ಳಿರಿ. ಇದನ್ನೆಲ್ಲಾ ತೆಗೆದು ಕೊಂಡು ಈ ನಿಮಿಷದಲ್ಲಿ ಮುರಮ್ಮೆದಾಬಾದಿಗೆ ಹೊರಡಿಯೆಂದು ಆಜ್ಞಾಪಿಸಿದನು. ಮಸೀಉರ್ದ್ದೀ- ಆಗಬೇಕಾದ ಕಾರ್ಯವು ಯಾವುದು ? ನಬಾಬ -ಇವಳು ಏನು ಹೇಳುವಳೋ ಅದನ್ನು ಮಾಡಬೇಕು, ಬೇಗಂ ಹೇಗೋ ಹಾಗೆ ಇವಳಿಗೆ ಮರ್ಯಾದೆ ಮಾಡಬೇಕು , ದಳನೀ ಬೇಗಂ ಸಾಹೆಬಳನ್ನು ನೋಡಿ ದರೆ ಸಂಗಡ ಕರೆತರಬೇಕು. ಅನಂತರ ಅವರಿಬ್ಬರೂ ನಬಾಬನಿಗೆ ಪಣಾಮವನ್ನು ಮಾಡಿ ಹೊರಟುಹೋದರು. ಅವರು ಹೇಗೆಹೇಗೆ ಮಾಡಿದರೂ ಅದನ್ನು ನೋಡಿಕೊಂಡಿದ್ದು ಕೈವಲಿನಿಯ ನೆಲವನ್ನು ಮುಟ್ಟಿ ಸಲಾಂ ಮಾಡಿ ಹಾಗೆಯೇ ನವಾಬನಿಗೆ ಅಭಿಮುಖವಾಗಿ ಸದುಹೋದಳು. ನಬಾಬನು ನೋಡಿ ನಕ್ಕನು. - ಹೊರಟುಹೋಗುವ ಕಾಲದಲ್ಲಿ ನವಾಬನಂ, ಬೀಜೀ ! ಜ್ಞಾಪಕವಿರಲಿ, ಕಷ್ಟದಲ್ಲಿ ಬಿದ್ದಾಗ ವಿಾರಕಾಸೀಮನ ಬಳಿಗೆ ಬಾ ಎಂದು ಹೇಳಿದನು, ಕೈವಲಿನಿದು ಪುನಃ ಸಲಾಂ ಮಾಡಿ, ಮನಸ್ಸಿನಲ್ಲಿ, ಬಾರದೆ ಉಂಟೆ ರೂಪಸಿಯ ಸಂಗಡ ಸ್ವಾಮಿಯನ್ನು ಕರೆದುಕೊಂಡು ದರಬಾರು ಮಾಡುವುದಕ್ಕೋಸ್ಕರ ನಿನ್ನ ಬ ಗೆ ಬಂದೇ ಬರುವೆನೆಂದಂದುಕೊಂಡಳು. 11