ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

១៥ ಏಷ್ಟು ಬ್ರಹ್ಮಂದ್ರಾದಿಗಳ ಪರಾಜಯ he೩ ಲೂ, ಒಬ್ಬರನ್ನೊಬ್ಬರು ಗಾಯಗೊಳಿಸುತ್ತಲೂ ಅತ್ಯಂತ ವಿಕ್ರಮದಿಂ ದ ಕಾದಾಡಿದರು. ಆಗ ಹರಿಯು ಒಂದೇಸಮನಾಗಿ ಸೆಣಸುತ್ತಿರುವ ದೈತ್ಯೇಂದ್ರನನ್ನು ನೋಡಿ, ಬಹು ರೋಷವೇರಿ, ಪ್ರಬಲತರವಾದ ಮ ಹಾಬಾಣವೊಂದನ್ನು ಚಾಪಕ್ಕೆ ಹೂಡಿ, ಕಿವಿಯವರೆಗೆ ಸೆಳೆದು, ದೈತ್ಯ ನ ರಥಕ್ಕೆ ಪ್ರಯೋಗಿಸಿ, ನಿಕ್ಕನಾದವನ್ನು ಮಾಡಿದನು. ಆ ಬಾಣವು ದೈತ್ಯನನ್ನು ರಥಸಮೇತವಾಗಿ ಆಕಾಶಕ್ಕೆ ಹಾರಿಸಿತು. ಅದರಿಂದವನು ಕಡುಕೋಪವೇರಿ, ಅಂತಹ ಪ್ರತೃಸ್ತ್ರದಿಂದಲೇ ವಿಷ್ಣುವಿನ ರಥವನ್ನು ಹೊಡೆಯಲು, ಅದೂ ಆಕಾಶಮಂಡಲಕ್ಕೆ ಹಾರಿ, ಗಿರನೆ ತಿರುಗುತ್ತ ನಿಂತುಕೊಂಡಿತು. ಇಬ್ಬರೂ ಅಂತರಿಕ್ಷದಲ್ಲೇ ನಿಂತು ಕಾದಾಡಲು ಕ್ರಮಿಸಿದರು. ಅವರಿಬ್ಬರೂ ಪ್ರಯೋಗಿಸುವ ಬಾಣಾವಳಿಗಳು ಪ್ರಳ ದಕಾಲದಲ್ಲಿ ಮೇಘದಿಂದ ಸುರಿಯುವ ದೊಡ್ಡಮಳೆಯಂತೆ ಕಾಣಿಸುತ್ತಿ ದ್ದುವು. ಹೀಗೆ ಸಮನಾಗಿ ಕಾದಾಡುತ್ತಿದ್ದು ಇಬ್ಬರೂ ಭೂಮಿಗಿಳಿದ ರು, ಅಲ್ಲಿ ಕೆಲಹೊತ್ತು ಎಚ್ಚಾಡಿದರು. ಒಬ್ಬರೂ ಸೋಲಲಿಲ್ಲ. ಕೂ ನೆಗೆ ರಾಕ್ಷಸನು ಅತ್ಯಂತ ರೋಪವೇರಿ ಬಂದೇಪ್ರಹಾರದಿಂದ ವಿಷ್ಣುವ ನ್ನು ಧರೆಗುರುಳಿಸುವೆನೆಂದು ನಿನ್ಲೈಸಿ, ತನ್ನ ಬತ್ತಳಿಕೆಯಲ್ಲೆಲ್ಲ ಹುಡು ಕಿ ಅಗ್ನವನ್ನು ತೆಗೆದು, ಧನುಸ್ಸಿನಲ್ಲಿ ಹೂಡಿ, ವಿಷ್ಣು ವಿನಮೇಲೆ ಪ್ರ ಯೋಗಿಸಿದನು. ಅದು ಶಿವನ ಹಣೆಗಣ್ಣಿನಂತೆ ಅಗ್ನಿಯನ್ನು ಕಾರುತ್ತ ಜ ಗತ್ತನ್ನೆಲ್ಲ ತಲ್ಲಣಗೊಳಿಸಿತು. ಅದರ ಜಾಲೆಗೂ ಬೇಗೆಗೂ ಉಭಯಸೇ ನೆಯ ನಿಸ್ಸತಗೊಂಡು ಬೆರಗಾಯಿತು. ಇದನ್ನು ಹರಿಯು ನೋಡಿ ತನ್ನ ಸೇನೆಗೆ ಅಭಯವನ್ನು ಹೇಳುತ್ತ, ಬತ್ತಳಿಕೆಯಿಂದ ಜಲಾವ ನ್ನು ತೆಗೆದು ಹೂಡಿ ಪ್ರಯೋಗಿಸಿದನು.. ಅದು ಪ್ರಳಯಕಾಲದ ಮೇಘ ಗಳಂತೆ ಜಲವನ್ನು ಕರೆದು ಕ್ಷಣಕಾಲದಲ್ಲಿ ಬೆಂಕಿಯನ್ನಾರಿಸಿ, ರಣಾಂಗ ಣವನ್ನು ನೀರಿನಲ್ಲಿ ತೇಲಾಡುವಂತೆ ಮಾಡಿತು. ಬಳಿಕ ದಾನವೇಂದ್ರ ನು ಮತ್ತಷ್ಟು ರೋಷದಿಂದ ಸರ್ಪಾಸ್ತ್ರವನ್ನು ಪ್ರಯೋಗಿಸಿದನು. ಅದಕ್ಕೆ ಹರಿಯು ಗರುಡಾಸ್ತ್ರ ವನ್ನು ಬಿಟ್ಟು ಖಂಡಿಸಿದನು. ಜಲಂ ಧರನು ಗಿರಿಬಾಣವನ್ನು ಬಿಡಲು, ವಿಷ್ಣುವು ವಜಾಸ್ತ್ರವನ್ನು ಬಿ ಟ್ಟು ಕಡಿದುಹಾಕಿದನು, ದೈತ್ಯನು ಅಂಧಕಾರಾಸ್ತ್ರವನ್ನು ಬಿಡಲು, ಮಾ