ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ&o ಚೆನ್ನಬಸವೇಕವಿಜಯಂ (ಕಾಂಡ ೨.) ಅಧ್ಯಾಯ ಗಿದನು. ಸಕಲಾಲಂಕಾರಪೂದ್ಧವಾಗಿದ್ದ ಪಟ್ಟಣವನ್ನು ಸಂತೋಷದಿಂದ ಪ್ರವೇಶಿಸಿ, ಲಕ್ಷ್ಮಿನಾರಾಯಣರನ್ನು ಒಂದು ಅರಮನೆಯಲ್ಲಿರಿಸಿ, ಅವ ರಮೇಲೆ ನೂರು ಕೋಟಿ ರಾಕ್ಷಸರ ಕಾವಲನ್ನಿಟ್ಟು, ಬ್ರಷ್ಟೇ೦ದ್ರಾದಿ ದೇವನಾಯಕರನ್ನೆಲ್ಲ ಕರೆದು, ನೀವುಗಳು ನನ್ನ ಸೇವೆಯನ್ನು ಮಾಡಿ ಕೊಂಡಿರಿ ಎಂದು ಆಜ್ಞಾಪಿಸಲು, ಅವರು ಹಾಗೆಯೇ ಆಗಲೆಂದೊಪ್ಪಿ ನಡಸುತ್ತಿದ್ದರು. ಪ್ರತಿದಿನವೂ ಬ್ರಹ್ಮನು ಜಲಂಧರನಿಗೆ ಮಂತ್ರಾಕ್ಷತೆ ಯನ್ನು ಕೊಟ್ಟು ಆಶೀದಿಸುವನು. ದೇವೇಂದ್ರಾದಿದಿಳ್ಳಾಲಕರು ರಾ ಕ್ಷಸನ ಇಸ್ಪ್ಯಾನುಸಾರವಾಗಿ ತಮತಮಗೆ ಕೊಟ್ಟಿದ್ದ ಊಳಿಗವನ್ನು ಮಾಡಿ ಕೊಂಡಿದ್ದ ರು. ಜಗತ್ತಿನಲ್ಲಿ ಶಿವನ ಕೈಲಾಸವೊಂದು ಹೊರತು ಉಳಿದ ಭೂಸ್ವರ್ಗಲೋಕವೆಲ್ಲವೂ ಜಲಂಧರನ ವಶವಾಗಿದ್ದಿತು. ಈ ರೀತಿಯಾದ ಆಧಿಪತ್ಯದಿಂದ ಸಕಲ ಸಂಪತ್ತನ್ನೂ ಪಡೆದು ಜಲಂಧರನು ಮರರ್ಬುದ ವರ್ಷಗಳ ವರೆಗೆ ನಿಶ್ಚಿಂತನಾಗಿ ಆಳಿಕೊಂಡಿರುತ್ತಿದ ನು, ಹೀಗಿರುವಲ್ಲಿ ದೇವನಾಯಕರೆಲ್ಲರೂ ತಮ್ಮ ಸ್ಥಿತಿಯನ್ನು ಕುರಿತು ಅತಿಶಯವಾಗಿ ಬೆಂ ತಿಸಿ ಕೊರಗುತ್ತ, ಬಂದು ದಿನ'ವಿಷ್ಣು ಬ್ರಹ್ನರ ಬಳಿಯಲ್ಲಿಗೆ ಗುಪ್ತವಾಗಿ ಹೋಗಿ, ಈ ದೈತ್ಯನ ಸಂಪತ್ತಿಗೆ ಕೊನೆಯಾವಾಗ ? ನೀವು ನಿರ್ಬಂಧ ದಿಂದ ಬಿಡುಗಡೆ ಹೊಂದಿ ಸುಖವಾಗಿ ಬಾಳುವುದಾವಾಗ ? ಎಂದು ಯೋ। ಚಿಸಿ, ಕೊನೆಗೆ “ ಈ ನಮ್ಮ ದುರವಸ್ಥೆಯನ್ನೆಲ್ಲ ಪರಮೇಶ್ವರನೊಡನೆ ಹೇಳಿಕೊಂಡರೆ ಆ ಸ್ವಾಮಿಯು ನಮ್ಮ ಕಷ್ಟ ವನ್ನು ಪರಿಹರಿಸಬಹುದು. ಆತನಿಂದಲೂ ಸಾಧ್ಯವಲ್ಲದೆ ಹೋದರೆ ನಾವುಗಳು ಹೀಗೆ ಬಾಳುವುದ ಕ್ಕಿಂತಲೂ ಪ್ರಾಣತ್ಯಾಗ ಮಾಡಿಕೊಳ್ಳುವುದೇ ಲೇಸು ” ಎಂದು ನಿಶ್ ಸಿದರು. ಸಮಯವನ್ನು ನಿರೀಕ್ಷಿಸಿಕೊಂಡಿದ್ದು, ಒಂದು ದಿನ ರಾತ್ರಿ ವಿಷ್ಯ ಹೇಂದ್ರಾದಿಗಳೆಲ್ಲರೂ `ಹಸ್ಯವಾಗಿ ತಪ್ಪಿಸಿಕೊಂಡು ಹೊರಟು ಕೈಲಾ'ವನ್ನು ಸೇರಿದರು. ಸಭೆಯಲ್ಲಿ ಕುಳಿತಿರುವ ಪರಮಶಿವನಿಗೆ ಸರ ರೂ ಸಾಷ್ಟಾಂಗವಾಗಿ ನಮಸ್ಕರಿಸಿದರು. ಪರಮೇಶ್ವರನು ಇವರೆಲ್ಲರನ್ನೂ ನೋಡಿ, ಪ್ರೀತಿಯಿಂದ ವಿತ್ತುವನ್ನು ಕುರಿತು..ಇದೇನು ಸರೂ ಬಂದಿರುವಿರಿ ? ಎಂದು ಕೇಳಿದನು. ಅದಕ್ಕೆ ಹರಿಯು- ಸ್ವಾಮಿಯೆ ! ನಮ್ಮ ಬೆನ್ನ ಹವನ್ನು ಪಾಲಿಸಬೇಕು, ನೀಚನಾದ ಜಲಂಧರನೆಂಬ ದೈ