ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪3 ಏತ್ಥುಖಕ್ಕೇಂದ್ರಾದಿಗಳ ಪರಾಜಯ h# ದೈತ್ಯನು “ ಆಗಲಿ ” ಎಂದು ನಕ್ಕು, ಗದೆಯನ್ನು ಬಿಸುಟು, ತೋಳ್ವೆ ಡೆಗಳನ್ನು ತಟ್ಟಿ ಮಸ್ಮಿಯುದ್ಧಕ್ಕೆ ಸಿದ್ಧನಾದನು. ಇಬ್ಬರೂ ಕೈ ಕೈ ಕೂಡಿಸಲು, ಎರಡಾನೆಗಳು ಸುಂಡಿಲನ್ನು ಸೇರಿಸಿ ಹೆಣಗಾಡುವಂತೆ ತೋರಿದರು. ಈರರೂ ಕತ್ತು ಕೌಂಕುಳು ನಡು ಬೆನ್ನು ತೊಡೆ ಪಕ್ಕ ಮೊದಲಾದುವುಗಳನ್ನು ಪಟ್ಟಾಗಿ ಹಿಡಿದು ನುಲಿದು ಕೆಡಹಿ ಉರುಳಿ ಹೆಣ ಗಾಡುತ್ತಿದ್ದರು. ಒಂದೊಂದುಬಾರಿ ಹರಿಯು ಪಟ್ಟಿಗೆ ಸಿಕ್ಕಿಹೋಗಿ ಬಿದ್ದುಕೊಳ್ಳುವಂತೆ ತೋರುತ್ತಿದ್ದು, ಅಪ್ಪ-ಲ್ಲಿ ನುಣುಚಿಕೊಂಡು ದೈತ್ಯ ನನ್ನು ಕೆಡಹಿ ಸೋಲಿಸುವ ಸ್ಥಿತಿಗೆ ತರುವನು. ದೈತ್ಯನು ಬಿಡಿಸಿಕೊಂ ಡೆದ್ದು ಹರಿಯನ್ನು ತಬ್ಬಿ ಎತ್ತಿ' ಕೆಳಕ್ಕೆ ಕುಕ್ಕುವನು. ಹಾಗೆಯೇ ಹರಿ ಯು ರಕ್ಕಸನ ನಡುವಿಗೆ ನುಗ್ಗಿ ಎತ್ತಿ ಹಾಕಿ ಮುಮ್ಮಿ ಘಾತವನ್ನು ಮಾಡಿ ಬೊಬ್ಬಿರಿಯುತ್ತಿದ್ದನು. ಹೀಗೆ ಸೆಣಸುತ್ತಿರುವಲ್ಲಿ ದೈತ್ಯನು ರೋಷದಿಂ ದ ಅತ್ಯಂತಾವೇಶಗೊಂಡು ತನ್ನ ಬಾಹುಯುನ್ಮದಿಂದ ವಿಷ್ಣುವನ್ನು ಬಲ ವಾಗಿ ತಬ್ಬಿ ಕೊಸರಾಡಿ ಗರಗರನೆ ತಿರುಗಿಸಿ ಬೇನಿ ಅಪ್ಪಳಿಸಿಬಿಟ್ಟನು. ಆ ರಭಸದೇಟಿನಿಂದ ಹರಿಯು ನಿಕ್ಷೇತನನಾಗಿ ಧರೆಯಮೇಲೆ ಉರುಳ ಕೊಂಡನು, ರಕ್ಕಸನನ್ನು ಗೆಲ್ಲುವ ಆಸೆಯು ಅಲ್ಲಿಗೆ ಬಿಟ್ಟು ಹೋಯಿತು. ಇಂದ್ರಾದಿದೇವತೆಗಳೆಲ್ಲರೂ ತಲ್ಲಣಿಸಿದರು, ಆಗ ವಿಷ್ಣುವು ಒಂದುಪಾ ಯವನ್ನು ಯೋಚಿಸಿ, ಮುಗುಳ್ಳಗೆ ನಕ್ಕಾ, ವಿನಯದಿಂದ ದೈತ್ಯೇಂದ್ರ ನನ್ನು ಕುರಿತು-" ಎಲೆ ದೈತನಾಯಕನೇ ! ನಿನ್ನ ಪರಾಕ್ರಮಕ್ಕೆ ಮೆಕ್ಸಿದೆನು; ನಿನ್ನ ಇಷ್ಟಾರ್ಥವೇನಿರುವುದು ಹೇಳು, ಕೊಡುತ್ತೇನೆ ?” ಎಂದನು, ಅದಕ್ಕೆ ದಾನವೇಂದ್ರನು ನಕ್ಕ ಕಪಟದಿಂದ ನೀನು ಮಧುಕೈಟಭಾದಿರಾಕ್ಷಸರನ್ನು ಗೆದ್ದ ಹಾಗಲ್ಲ; ಈಗ ನೀನು ಮೆಚ್ಚಿಕೊಂ ಡರೆ ಒಳ್ಳೆಯದಾಯಿತು. ನೀನು ಪತ್ನಿ ಸಮೇತನಾಗಿ ಬಂದು ನನ್ನ ಮನೆಯಲ್ಲಿ ಸೆರೆಯಾಳಾಗಿರಬೇಕು ?” ಎಂದು ಹೇಳಿದನು ಈ ದೈತ್ಯನು ಹಾಗೆ ಮಾಡದೆ ಬಿಡುವನಲ್ಲವೆಂದು ಹರಿಯು ನಿರ್ಧರಿಸಿ, ಲಕ್ಷ್ಮಿಯನ್ನು ಕರೆದುಕೊಂಡು ಇಬ್ಬರೂ ಜಲಂಧರನ ರಥದಲ್ಲೆ ಕುಳಿತು ಹೊರಟರು. ಇಂದ್ರಾದಿದಿಜ್ಞಾಲಕರೆಲ್ಲರನ್ನೂ ಒಡನೆ ಹೊರಡಿಸಿಕೊಂಡು ಜಲಂಧರಾ ಸುರನು ಸಕಲ ಸೇನೆಯೊಡನೆ ವಿಜೃಂಭಣೆಯಿಂದ ತನ್ನ ಪಟ್ಟಣಕ್ಕೆ ತಿರು 17