ವಕ್ಷಯಾಗವು ೧೫೭ ನು ಚತುರಂಗಸೈನೃಸಮೇತನಾಗಿ ಅಲ್ಲಿಗೆ ಬಂದನು. ಸಕಲ ಮನು ಮು ನಿಸುರೋರಗಾದಿಗಳಿಗೆಲ್ಲ ಸುದ್ದಿಯನ್ನು ಕಳುಹಿ ಬರಮಾಡಿದರು, ದೇಶದ ಮೇಲೆ ತುರಗವನ್ನು ಕಳುಹಿದರು, ಮತ್ತಿಜರೇ ಮೊದಲಾದವರನ್ನು ಕ ರಸಿದರು. ಮೇಲಣ ರಕ್ಷಣೆಗೆ ವಿಷ್ಣುವನ್ನು ನಿಯಮಿಸಿದರು. ಬ್ರಹ್ಮತ ಕೈ ಚತುರಖನೇ ನಿಂತನು. ದಕ್ಷನು ಮುಖ್ಯ ದೀಕ್ಷಿತನಾದನು. ಚರು ಪುರೊಡಾಶಗಳು, ದರ್ಭೆ, ಎಳ್ಳು, ಬತ್ತ, ತುಪ್ಪ, ಜೇನು, ಅಕ್ಕಿ ಸ್ತು ಈ, ಸುವ, ಕಲಶ, ಯೂಪ ಮೊದಲಾದ ಪರಿಕರಗಳೆಲ್ಲವೂ ಪರತೋ ಪಮಾನವಾಗಿ ಬಂದು ನೆರೆದುವು. ರೇವಶ್ರೇಷ್ಠರು ವೇದಮಂತ್ರಗಳನ್ನು ದೊಪ್ಪಿಸುತ್ತಿದ್ದರು, ಅಗ್ನಿಶ್ರಯಗಳ ಹೊಗೆಯು ಆಕಾಶಮಂಡಲಕ್ಕೆ ದ್ವಿತು. ಮಹಾಸಂಭ್ರಮದಿಂದ ಯಾಗಕಾರವು ನಡೆಯುತ್ತಿರುವಲ್ಲಿ ಬಿ ಗೃಹಗೊಂಡಿದ್ದ ದಧೀಚಿನಹರ್ಪಿಯು ಯಾಗಮಂಟಪಕ್ಕೆ ಬಂದನು, ನಿಂ ತಹಾಗೆಯೇ ಯಾರುಯಾರು ಸಭೆಗೆ ಬಂದಿರುವರೆಂಬುದನ್ನು ನೋಡಿದನು. ಎಲ್ಲರೂ ಇದ್ದರು. ಮಹಾದೇವನುಮಾತ್ರ ಇರಲಿಲ್ಲ; ಯಪ್ರಿಯಮನಸ್ಸು ಕೋಭೆಗೊ೦ಡಿತು. ದಿ ಕೈತನ ಮುಂಗಡೆಗೆ ಋಷಿಯು ಬಂದು, ಏನ ಯ್ಯಾ ! ಪರಮೇಶ್ವರನೇತಕ್ಕೆ ಬರಲಿಲ್ಲ ? ಬ್ರಹ್ಮಾದಿವಿತಾಟಾಂತರಾದ ವರೆಲ್ಲರೂ ಯಾವ ಮಹಾದೇವನ ಆಜ್ಞಾನುಯಾಯಿಗಳಾಗಿರುವರೊ, ಸಕಲ ಕರಗಳಿಗೂ ಯಾವನು ಅಗ್ರಪೂಜ್ಯನೋ, ಅಂಥ ಪಾರತೀಪತಿಯು ಇ ಲ್ಲಿಗೆ ಅದೇಕೆ ಬರಲಿಲ್ಲ ? ಅವನನ್ನುಳಿದ ಯಜ್ಞವು ಸಾಂಗವಾಗುವುದಿಲ್ಲ ವೆಂಬುದನ್ನು ನೀನು ಕಾಣೆಯಾ ? ಅದನ್ನು ವೇದಪುರುಷರಿಂದಾದರೂ ಕೇಳಿ ತಿಳಿದುಕೊ ” ಎಂದು ನುಡಿದನು, ಆಗ ಚತುರ್ವೇದಗಳೂ ಕೂಡ ಸಾಕಾರವಾಗಿ ಬಂದು ನಿಂತು, “ ಯಾಗಕ್ಕೆ ಶಿವನೇ ಅಧಿಪತಿಯು, ಶಿವನಿಲ್ಲದಿದ್ದರೆ ಅದು ದುಷ್ಕೃಯಜ್ಞವೆನಿಸಿಕೊಳ್ಳುವುದು, ಅದಕ್ಕೆ ಹಾನಿ ಯು ತಪ್ಪದು ” ಎಂದು ಹೇಳಿ ಬಯಲಾದುವು, ದಕ್ಷನಾದರೆ- ಪತ್ನಿ ಸಹಿತನಾದ ಆ ಗೊರವನೊಬ್ಬನನ್ನು ನಾವು ಕರೆದಿಲ್ಲ; ಉಳಿದ ವಿಷ್ಣು ಬ್ರಹ್ಮಾದಿ ಸಕಲ ದೇವತೆಗಳ ಮನುಮುನಿಗಳು ಕಿನ್ನರ ಕಿಂಪುರುಷರು ಮೊದಲಾದವರೆಲ್ಲ ಬಂದಿರುವರು. ಆ ಶಿವನು ಬಂದಲ್ಲದೆ ಯಜ್ಞವು ಮು ಗಿಯಲಾರದೆ ? ಸಾಕ್ಷಾತ್ ಭಗವಂತನಾದ ನಾರಾಯಣನೇ ಅಗ್ರಹವಿಸ್ಸಿಗೆ
ಪುಟ:ಚೆನ್ನ ಬಸವೇಶವಿಜಯಂ.djvu/೧೭೦
ಗೋಚರ