ಪುಟ:ಚೆನ್ನ ಬಸವೇಶವಿಜಯಂ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಭದ್ರವಿಜಯವು ೧೫ ಮರೆಹೊಕ್ಕು ಬಾಳುವೆನೆಂದು ಯೋಚಿಸಿದ ದಡ್ಡನ ಸ್ಥಿತಿಯಹಾಗಾಗಿದೆ; ಯಾರನ್ನು ಮೆಚ್ಚಿಸಿಕೊಳ್ಳುವುದಕ್ಕಾಗಿ ನೀವು ಯಜ್ಞವನ್ನಾಚರಿಸುತ್ತಿ ರುವಿರಿ ? ಈ ವಿಸ್ಸು ಬ್ರಹ್ಮಾದಿಗಳೆಲ್ಲರೂ ಯಾರಿಂದ ಹುಟ್ಟಿದರು ? ನೀವು ಆಜ್ಞಾಹುತಿಯನ್ನು ಕೊಡುವುದಕ್ಕೆ ಯಾವ ವೇದಮಂತ್ರಗಳನ್ನು ಉಪ ಯೋಗಿಸುವಿರೋ ಆ ವೇದಗಳು ಯಾರನ್ನು ಸ್ತುತಿಸುವುವು ? ಇದನ್ನೆಲ್ಲ ನೀವು ಅಹಂಕಾರದಿಂದ ಮರೆತುಬಿಟ್ಟು ಕೆಟ್ಟುಹೋದಿರಿ; ಕ್ಷಾಮ ಬರ ಲಾಗಿ ಕುದುರೆಯ ಮರಿ ಕತ್ತೆಯಾದಂತೆ ನಿಮ್ಮ ವಸ್ಥೆಯಾಯಿತು. ” ಎಂ ದನು. ಇದನ್ನು ಕೇಳಿ ಸಭಿಕರೆಲ್ಲರೂ ಕಿಡಿಕಿಡಿಯಾದರು, ದಕ್ಷನು ಕೆ. ಗಣ್ಣನ್ನು ಬಿಟ್ಟು, ದುರುದುರನೆ ಗಣನಾಯಕನನ್ನು ನೋಡಿ, “ ಎಲೋ ! ನೀನಾರು ? ಏಕೆ ಬೊಗಳುತ್ತೀಯೆ ? ನಿನ್ನನ್ನು ಇಲ್ಲಿಗೆ ಬರಹೇಳಿದವ ರಾರು ? ಈ ಮಂತ್ರದ ಸುದ್ದಿ ಯು ನಿನಗೇಕೆ ? ಬಂದ ಕಾಗ್ಗವೇನು? ೨೦ ಎಂದು ನುಡಿದನು. ಗಣನಾಯಕನ ಮೈರಕವು ಕಾವೇರಿತು. ಸಭಿಕರ ನೈಲ ಕ್ಷಣಕಾಲದಲ್ಲಿ ಧೂಳಿಪಟಲವನ್ನು ಮಾಡಿಬಿಡಲೆ ? ಎಂದು ಮನ ಸ್ಸಿನಲ್ಲಿ ಸ್ಪುರಿಸಿತು, ಆದರೆ ತನ್ನ ಯಜಮಾನನು ಮಾಡಿದ್ದ ಅಪ್ಪಣೆಯ ನ್ನು ನೆನೆದು ಶಾಂತನಾಗಿ, ದಕ್ಷನನ್ನು ಕುರಿತು ನಾನು ಯಾರೆಂಬು ದನ್ನು ಕಾಣಿರಾ ? ನಿಮ್ಮ ಮತ್ಪಾವತಾರದ ಮೂಲ್ಕಿಯ ಸೊಕ್ಕನ್ನು ಮುರಿದಬ್ರಹ್ಮನ ಶಿರವನ್ನು ತರಿದ-ಜಗದೇ ಕಾರಾಧ್ಯನಾದ ಫಲಾ ಕ್ರನ ದೂತನು. ನನ್ನೊಡೆಯನ ಅಪ್ಪಣೆಯಮೇರೆ ಈ ಯಜ್ಞದಲ್ಲಿ ಆ ತನ ಅಗ್ರಹವಿರ್ಭಾಗದ ಸ್ವಾಮ್ಯವನ್ನು ಕೇಳಿ ತೆಗೆದುಕೊಂಡು ಹೋಗು ವುದಕ್ಕಾಗಿ ಬಂದಿರುವೆನು; ಅದನ್ನು ಕೊಡದಿದ್ದರೆ ಬೊಗಳುವ ನಾಯಿ ನರಿಗಳಿಗೆ ನಿಮ್ಮ ದೇಹದ ಮಾಂಸದೌತಣವಾಗುವುದು ಎಂಬುದನ್ನು ನಿಮ ಗೆ ಎಚ್ಚರಿಸುವುದಕ್ಕಾಗಿ ನಾನು ಬಂದೆನಲ್ಲದೆ ಬೊಗಳತಕ್ಕವನಲ್ಲ ?” ಎಂ ದು ನುಡಿದನು. ದಕ್ಷನಾದರೂ ಎಲ್ಲಿಯ ರುದ್ರ ? ಭಾಗವನ್ನು ಕೂ ಡುವುದೆಂದರೇನು ? ಈ ಬಾಯ್ದ ಡಿಕನನ್ನು ಕತ್ತು ಹಿಡಿದು ನೂಕಿಬಿಡಿ ” ಎಂದನು. ಬಳಿಯಲ್ಲಿದ್ದ ದೂತನು ಕೊರಲಿಗೆ ಕೈಯನ್ನು ಹಾಕುವುದಕ್ಕೆ ಬರಲು, ಗಣನಾಯಕನು ಕೈ ಕತ್ತಿಯಿಂದ ಅವನ ಕೈಯನ್ನೇ ಕತ್ತರಿಸಿಬಿ ಟ್ಟನು. ಅದನ್ನು ಕಂಡು ಸಭಿಕರೆಲ್ಲರೂ ಮೊರೆದೆದ್ದ ರು. ಗಣಧರನು ಅವ