4} ಚನ್ನಬಸವೇಳವಿಜಯಂ (Fದ 4) _[ಅಧ್ಯಾಯ ಯೋಗಕ್ಕೆ ಬರುವಂತೆ ಅನುಗ್ರಹಿಸಬೇಕು ” ಎಂದು ಬೇಡಿಕೊಂಡನು. ವೀರಭದ್ರೇಶನು ( ಅದರ ಚವು ಕಚಾರಿಗಳಿಗೆ ಉಪಯುಕ್ತವಾಗಿ ರಲಿ ” ಎಂದು ವರವಿತ್ತು, ಅದರ ಚರವನ್ನು ಸುಲಿಸಿ, ತನ್ನ ಬಿರುದಿನ ಕರಡಿಯ ವಾದ್ಯಕ್ಕೆ ಕಟ್ಟಿಸುವುದಕ್ಕಾಗಿ ಪರಿಗ್ರಹಿಸಿದನು. ಇತ್ತ ದಕ್ಷನ ದೂತರು ಒಣಗಿದ ನಾಲಿಗೆಯಿಂದಲೂ, ನಡುಗುತ್ತಿರುವ ಕಾಲ್ಕ ೪೦ದಲೂ, ಹೋಮಕುಂಡದ ಬಳಿಗೆ ಓಡಿ ಬಂದು, ದಕ್ಷಬ್ರಹ್ಮನಿಗೆ ಕೈಮುಗಿದು ಜೀಯಾ ! ನಿನ್ನ ದೀಕ್ಷೆಗೀಕ್ಷೆಯಲ್ಲ ಹಾಗಿರಲಿ, ವೀರಭದ್ರೇಶನೆಂಬುವನು ಪ್ರಳಯಕಾಲದ ರುದ್ರನಂತೆ ಬಂದು, ದೇವಕುಲವನ್ನೆಲ್ಲ ಹೊರಗೆ ನಾಶ ಗೊಳಸಿದನು. ಹರಿಯು ಅವನಿಗೆ ಇದಿರಾಗಿ ನಿಂತು, ಸೋತು ಶರಣಾಗ ತನಾದನು. ಇನ್ನು ನಿಮ್ಮ ರಕ್ಷಣೋಪಾಯವನ್ನು ನೀವು ನೋಡಿಕೊಳ ಬೇಕು ?” ಎಂದು ಹೇಳಲು, ಬೆಂಕಿಯಮೇಲೆ ತುಪ್ಪವನ್ನೆರೆದಂತೆ ದಕ್ಷನ ಕೋಪಾಗ್ನಿ ಯು ಮಿಗಿಲಾಯಿತು. ಎಡಬಲದಲ್ಲಿರುವ ತನ್ನ ಮಂತ್ರಿಗಳನ್ನು ನೋಡಿ, “ ನೋಡಿದಿರಾ ! ಆ ಶಿವನ ಅಹಂಕಾರವನ್ನು ? ಆತನೇ ಇವ ನನ್ನು ನಮ್ಮ ಯಜ್ಞವನ್ನು ಕೆಡಿಸುವುದಕ್ಕಾಗಿ ಕಳುಹಿರಬಹುದು ! ಇರ ಲಿ; ಅವನ ಸೊಕ್ಕಿಗೆ ಪ್ರತಿಕ್ರಿಯೆಯನ್ನು ನಾನು ಮಾಡಿ ತೋರಿಸುತ್ತೇನೆ, ಇದುವರೆಗೆ ಯಾರು ಸತ್ತಿದ್ದರೆ ತಾನೇ ಏನು ? ಮರಳಿ ಸೃಷ್ಟಿಸುವ ಶಕ್ತಿ ಯು ನನಗಿರುವಾಗ ಕೊರತೆ ಯೇನು ? ಅತ್ತ ಗಮನಿಸದೆ ನಾನು ಯಜ್ಞ ದ ಕಾವ್ಯದಲ್ಲಿ ಮನವಿಟ್ಟು ಕುಳಿತುಕೊಂಡುದರಿಂದ ಇಷ್ಟು ಅನರ್ಥವಾ ಯಿತು; ಚಿಂತೆಯಿಲ್ಲ; ಈಗ ಆ ವೀರನ ಶೌಧ್ಯವನ್ನು ನಾನು ವಿಚಾರಿಸಿಕೊ ಳುತ್ತೇನೆ, ನನ್ನ ಶಕ್ತಿಯನ್ನು ಅವನ ಯಜಮಾನನಿಗೆ ಹೋಗಿ ತಿಳಿಸಿಕೊ {ುವಂತೆ ಮಾಡಿ ಕಳುಹುವೆನು ?” ಎಂದು ಹೇಳುತ್ಯ, ಮಂತ್ರತಂತ್ರಗಳ ನೆಲ್ಲ ತೊರೆದು, ಯುದ್ಧಕ್ಕೆ ಅಣಿಯಾದನು. ಇವನ ಪ್ರಯತ್ನವು ಅಗ್ನಿಯ ಮೇಲೆ ಬೂರುಗದ ಮರವು ಸೆಣಸುವುದಕ್ಕೆ ನಿಂತಂತೆಯೂ, ಹಿಮವು ಸರನಮೇಲೆ ಕಾಳೆಯಗಕ್ಕೆ ನಿಂತಂತೆಯೂ ಆಯಿತು, ದಕ್ಷನು ತನ್ನ ಸೃಷ್ಟಿ ಸಾಮಥದಿಂದ ಅಪರಿಮಿತವಾದ ಚತುರಂಗಸೈನ್ಯವನ್ನು ಆಗಳೇ ಸೃಜಿಸಿದನು, ಸ್ಮರಣಮಾತ್ರದಿಂದ ಅಪರಿಮಿತಬಲರಾದ ರಾಕ್ಷಸರುಗಳ ಕೋಟಿಯನ್ನು ಸಿದ್ಧಮಾಡಿದನು. ಅವರೆಲ್ಲರನ್ನೂ ವೀರಭದ್ರನಮೇಲೆ ಧ
ಪುಟ:ಚೆನ್ನ ಬಸವೇಶವಿಜಯಂ.djvu/೧೮೫
ಗೋಚರ