ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬r - ಚನ್ನಬಸವೇಶವಿಜಯಂ (ಕಾಂಡ 4) | [ಅಧ್ಯಾಯ ಗಿರುವನು. ಈ ವಿಪತ್ತನ್ನು ಪರಿಹರಿಸಿ ಕಾಪಾಡಬೇಕು ?” ಎಂದು ಬಿ ನೈನಿ, ದೀರ್ಘದಂಡವಾಗಿ ಸರರೂ ನಮಸ್ಕರಿಸಿದರು. ಆಗ ಶಿವನು ದಯೆಯಿಂದ ಸರರನ್ನೂ ಏಳನಿ, ವಿಷ್ಣುವನ್ನು ಕುರಿತು ನೀನು ಹೋ ಗಿ ಜಗತ್ಕಂಟಕನಾದ ಆ ನೀಚರಾ ಕ್ಷಸನ ಪ್ರಾಣವನ್ನು ತೆಗೆದುಕೊಂಡು ಬಾರೆಂದು ಬೆಸಸಲು, ಆತನು ( ಅಪ್ಪಣೆ ” ಯೆಂದು ಹೇಳಿ, ನಮಸ್ಕ ರಿನಿ ಹೊರಟನು. ಬ್ರಹ್ಮನಿಂದ ರಾಕ್ಷಸನಿಗೆ ದೊರೆದಿರುವ ವರದ ಸರೂ ಪವನ್ನೆಲ್ಲ ಯೋಚಿಸಿಕೊಂಡನು. ಆ ವರಕ್ಕೆ ಭಂಗಬಾರದಂತೆಯೂ, ಹಿರಣ್ಯಕಶಿಪುವಿನ ಮರಣವಾಗುವಂತೆಯೂ ಮಾಡುವುದಕ್ಕೆ ಉಪಾಯವೇ ನೆಂಬುದನ್ನು ಆಲೋಚಿಸಿಕೊಂಡನು. ಅಪ್ಪ ರಲ್ಲಿ ತನ್ನ ಕಾ-ಸಾಧನೆಗೆ ಅನುಕೂಲ ಸಂಧಿ ದೊರೆದುದನ್ನೂ ಕಂಡುಕೊಂಡನು, (ಎಂದರೆ.ಹಿರ ಕಶಿಪುವಿಗೆ ಪ್ರಹ್ಲಾದನೆಂಬ ಮಗನಿದ್ದನು. ಅವನು ಪರಮವೈಷ್ಣವ ನು ; ತಂದೆಯಾದರೂ ಪರಮಶೈವ, ಮಗನ ವಿಷ್ಣು ಭಕ್ತಿಯು ತಂದೆಗೆ ಸೇರುತ್ತಿರಲಿಲ್ಲ, ವಿಭಕ್ತಿಯನ್ನು ತಪ್ಪಿಸಿ ಶಿವಭಕ್ತಿಯನ್ನುಂಟುಮಾ ಡಬೇಕೆಂದು ಮಗನಿಗೆ ಸಾಮದಾನದಂಡೋಪಾಯಗಳನ್ನೆಲ್ಲ ಉಪಯೋ ಗಿಸಿದರೂ ಫಲವಾಗಲಿಲ್ಲ. ಕೊನೆಗೆ ಮಗನು " ವಿಷ್ಣುವೇ ಸರವ್ಯಾಪಿ?” ಯೆಂದು ಹೇಳುತ್ತಿರಲು, “ ಹಾಗಾದರೆ ನಿನ್ನ ದೈವವು ಈ ಕಂಬದಲ್ಲ ಇರುವುದನ್ನು ತೋರಿಸು ' ಎಂದು ತಂದೆಯು ನುಡಿದನು. ಮಗನು ಪ್ರಾರ್ಥಿಸಲು, ಭಕ್ಸ್ಮದಾತೃತ್ವದಿಂದ ಇದೇ ಸಮಯವೆಂದರಿತು) ಹರಿ ಯು ಕೇವಲ ಮನುಷ್ಯ ಅಥವಾ ಕೇವಲ ಮೃಗಾಕಾರನಾಗಿರದೆ ಎರಡೂ ಸೇರಿರುವ ನೃಸಿಕ್ಕರೂಪವನ್ನು ತಾ೪, ಕಂಬವನ್ನು ಒಡೆದು, ಈಚೆಗೆ ಬಂದು, ಗರ್ಜಿಸಿ, ಹಿರಣ್ಯಕಶಿಪುವನ್ನು ಸೆಳೆದು, ತನ್ನ ತೊಡೆಯಮೇಲಿ ಟ್ಟುಕೊಂಡು, ಮನೆಯೊಳಗೂ ಹೊರಗೂ ನಿಲ್ಲದೆ, ಹೊಸ್ತಿಲಮೇಲೆ ಕು ೪ತು, ಹಗಲು ರಾತ್ರಿಗಳನ್ನು ಬಿಟ್ಟು, ಮಧ್ಯದ ಸಂಧ್ಯಾಕಾಲದಲ್ಲಿ, ಯಾ ವ ಆಯುಧವನ್ನೂ ಉಪಯೋಗಿಸದೆ ಕೈಯುಗುರುಗಳಿಂದಲೇ ಅವನ ಹೊಟ್ಟೆಯನ್ನು ನೀ೪, ರಕ್ತವನ್ನು ಕುಡಿದು ಕೊಂದುಬಿಟ್ಟನು. ಭಕ್ತ ನಾದ ಪ್ರಹ್ಲಾದನನ್ನು ಉದ್ಧರಿಸಿದನು. ಲೋಕವು ನಿಷ್ಕಂಟಕವಾಯಿ ತು, ಭೌಗುಶಾಪದಂತೆ ಬಂದು ಜನ್ಮವನ್ನೆತ್ತಿ ಅದನ್ನೂ ನೆರವೇರಿಸಿದಂತಾ