dvg ಪಕ್ಷತೀತ ಪಕ್ಖರಣವು ಕಂದನಿಂದ ಮಾತ್ರ ನನ್ನ ಮರಣವಾಗಲಿ, ಇತರರಿಂದಾಗವಂತೆ ವರವ ನ್ನು ಕೊಡು !” ಎಂದು ಬೇಡಿದನು, ಹಾಗೆಯೇ ಆಗಲೆಂದು ವರವಿತ್ತನು. ಆದುದರಿಂದ ತಾರಕನು ಇದುವರೆಗೆ ಯಾರಿಂದಲೂ ಮರಣಗೊಳ್ಳದೆ ಕಂ ಟಕನಾಗಿರುವನು. ಶಿವನ ವೀರೋತ್ಪನ್ನನಾದ ಕುವರನಾದರೆ ಅವನನ್ನು ಕೊಲ್ಲುವನು, ಪರಶಿವನು ಹೇಮಕೂಟಪತದಲ್ಲಿ ತಪಸ್ಸಿನೊಳಗಿರುವ ನು, ಶರತಿಯು ಆತನ ಸೇವೆಯನ್ನು ಮಾಡುತ್ತಿರುವಳು, ಮಹಾ ದೇವನು ಮರತಿಯೊಡನೆ ಕೂಡಿದಲ್ಲದೆ ನಮ್ಮ ಇಷ್ಟಾರ್ಥಸಿದ್ದಿಯಾಗುವ ಹಾಗಿಲ್ಲ ; ಇದಕ್ಕು ಪಾಯವೇನೆಂಬುದನ್ನು ವಿಷ್ಣುವಿನಿಂದ ತಿಳಿಯುವ ; ನಡೆಯಿರಿ ?” ಯೆಂದು ಬ್ರಹ್ಮನು ಎಲ್ಲರನ್ನೂ ಕರೆದುಕೊಂಡು ಕ್ಷೀರಸಮು ದ್ರದಲ್ಲಿರುವ ವಿಷ್ಣುವಿನ ಬಳಿಗೆ ಹೋದನು. ಎಲ್ಲರನ್ನೂ ಕಂಡು ಆಗ ಮುನಕಾರಣವೇನೆಂದು ಹರಿಯು ಕೇಳಲು, ಬ್ರಹ್ಮನು-ತಾರಕನ ಹಾವಳಿ ಯನ್ನೂ, ಅವನ ನಾಶಕ್ಕೆ ಶಿವಕುಮಾರನ ಅವಶ್ಯಕತೆಯನ್ನೂ, ಪ್ರಕೃ ತದಲ್ಲಿ ಶಿವನು ತಪಸ್ಸಿನಲ್ಲಿರುವುದನ್ನೂ, ಆತನ ತಪೋಭಂಗದಿಂದ ತಮ್ಮ ಕಾರೈಸಿದ್ದಿಯಾಗಬೇಕಾಗಿರುವುದನ್ನೂ ತಿಳಿಸಿ, ಇದಕ್ಕೆ ತಕ್ಕ ಉಪಾ ಯವನ್ನು ಹೇಳಬೇಕೆಂದು ಕೇಳಿಕೊಂಡನು. ವಿಷ್ಣುವು ಹಾಗೆಯೇ ಯೋಚಿಸಿ, ಶಿವನ ತಪಸ್ಸನ್ನು ಕೆಡಿಸಿ ಅವನ ಮನಸ್ಸನ್ನು ದೇವಿಯಲ್ಲಿ ಮೋಹಗೊಳ್ಳುವಂತೆ ಮಾಡಬೇಕಾದರೆ, ಜಗನೊ ಹಕವಾದ ತನ್ನ ಮಗ ಮನ್ಮಥನಿಂದಲ್ಲದೆ ಇತರರಿಂದ ಸಾಧ್ಯವಲ್ಲವೆಂದು ಯೋಚಿಸಿ, ಅದನ್ನು ಎ ಲ್ಲರೊಡತಿಯೂ ಹೇಳಿ, ಅದೇ ಉಪಾಯವು ತಕ್ಕುದೆಂದು ಸರರೂ ನಿರ್ಧ ರಿಸಲು, ಮನ್ಮಥನನ್ನು ಬರಮಾಡಿದನು. - ಆತನು ಬಂದು ಹರಿಬ್ರಹ್ಮರಿಗೆ ನಮಸ್ಕರಿಸಿ, ತನ್ನನ್ನು ಬರಮಾ ಡಿದ ಕಾರಣವೇನೆಂದು ಬೆಸಗೊಂಡನು. ಹರಿಯು- ಹೇಮಕೂಟಪರ ತದಲ್ಲಿ ತಪೋನಿರತನಾಗಿ ಕುಳಿತಿರುವ ಶಿವನನ್ನು ಬಹಿರ್ಮುಖಗೊಳಿಸಿ, ಪಾರತಿಯಲ್ಲನುರಕ್ತನಾಗುವಂತೆ ನೀನು ಮಾಡಿಬರಬೇಕೆಂದು ಅಪ್ಪಣೆ ಕೊಟ್ಟನು. ಅದನ್ನು ಕೇಳಿದ ಕೂಡಲೇ ಮನ್ಮಥನಿಗೆ ಕಿವಿಯಲ್ಲಿ ಬಾಣ ವನ್ನು ಪ್ರಯೋಗಿಸಿದಂತಾಯಿತು. ಭಯದಿಂದ ಬೆರಗಾಗಿ, “ ಜೀಯಾ ! ಬೆಂಕಿಯಮೇಲೆ ತರಗೆಲೆಯನ್ನಟ್ಟಿದಂತೆ ನನ್ನನ್ನು ಶಿವನ ಮೇಲೆ ಬಾಣಪ್ಪ
ಪುಟ:ಚೆನ್ನ ಬಸವೇಶವಿಜಯಂ.djvu/೨೦೦
ಗೋಚರ