ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vv ಚನ್ನಬಸವೇಶವಿಜಯಂ (Fಾ ಡ 4) [ಅಧ್ಯಾಯ ಡಗಿಕೊಂಡು ಕಾಲಯಾಪನೆ ಮಾಡುತಿದ್ದು, ಒಹ್ಮನ ಬಳಿಗೆ ಹೋಗಿ, ದೈನ್ಯದಿಂದ- “ ಸೃಷ್ಟಿ ಕರನೇ ! ನಿನ್ನ ವರದಿಂದ ಹೆಚ್ಚಿಕೊಂಡಿರುವ ತಾರಕಾಸುರನು ನಮ್ಮೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿ, ನಮ್ಮ ಸಂಪತ್ಯ ನ್ನೆಲ್ಲ ಕಿತ್ತುಕೊಂಡು ಓಡಿಸಿಬಿಟ್ಟನು. ಇದನ್ನು ಮಹಾವಿಷ್ಣುವಿನೊಡನೆ ನಾವು ತಿಳಿಸಿಕೊಳ್ಳಲು , ಆತನು ಆರೇಳು ಸಾವಿರ ವರ್ಷಗಳವರೆಗೆ ತಾರ ಕನೊಡನೆ ಕಾದು ಗೆಲ್ಲಲಾರದೆ, ಕೊನೆಗೆ ಚಕ್ರವನ್ನು ಪ್ರಯೋಗಿಸಿ, ಅದ ನ್ನೂ ಮುರಿಸಿಕೊಂಡು, ಓಡಿಹೋಗಿ, ಕ್ಷೀರಸಮುದ್ರದಲ್ಲಿ ಅವಿತುಕೊಂ ಡನು. ನಮಗೆ ಇನ್ನು ಗತಿಯೇನೆಂದು ಯೋಚಿಸಿ, ಭಯದಿಂದ ನಿಮ್ಮ ಬಳಿಗೆ ಓಡಿಬಂದಿರುವೆವು ” ಎಂದು ಬಿನ್ನೇನಿದರು. ಬ್ರಹ್ಮನು ಕೇಳಿ, ದೇವತೆಗಳನ್ನು ಕಾಲೋಚಿತವಚನಗಳಿಂದ ಸಮಾಧಾನಗೊಳಿಸಿ, ಎಲೆ ದೇವತೆಗಳಿರಾ ! ಆ ತಾರಕನು ಸಾಮಾನ್ಯನಲ್ಲ, ಹಿಂದೆ ಅವನು ಅತ್ಯಂ 'ತನಿಷ್ಠೆಯಿಂದ ಘೋರತಪಸ್ಸಿಗೆ ಕುಳಿತನು; ಅದರ ಉಗ್ರತವನ್ನು ಅ ಏಂದು ಹೇಳುವುದಕ್ಕಾಗುತ್ತಿರಲಿಲ್ಲ. ಆ ತಪೋಜ್ವಾಲೆಯಿಂದ ಗಿರಿ ವನ ದುರ್ಗಗಳೆಲ್ಲ ಹೊತ್ತಿಕೊಂಡುವು; ಕೊನೆಗೆ ಆ ವುರಿಯು ಜಗತ್ತನೆ ಲ್ಲ ಆವರಿಸಿತು ; ಆಗ ನಾನು ಶಿವನ ಬಳಿಗೆ ಹೋಗಿ, ಇದೇನು ಮಹಾವಿ ಪತ್ತು ಸಂಭವಿಸಿತೆಂದು ಕೇಳಲು,– ಇದು ತಾರಕನ ತಪೋಜಾಲೆಯೆಂ ತಲೂ, ಅವನ ಒಳಗೆ ನೀನು ಹೋಗಿ ಅವನು ಕೇಳಿದ ವರವನ್ನು ಕೊ ಟ್ಟು ತಪಸ್ಸನ್ನು ಬಿಡಿಸಿಟಾರೆಂತಲೂ ಶಿವನು ನನಗೆ ಆಜ್ಞಾಪಿಸಿದನು. ಅದ ರಂತೆಯೇ ನಾನು ತಾರಕಾಸುರನ ಬಳಿಗೆ ಹೋಗಿ, “ ತಪಸ್ಸನ್ನು ಬಿಡು, ನಿನ್ನಿಷ್ಟಾರ್ಥವನ್ನು ಕೇಳು ?” ಎಂದು ಹೇಳಲು, ಅವನು ಕಣ್ಣನ್ನು ಬಿ ಟ್ಟು, ನನ್ನನ್ನು ಸ್ತುತಿಸಿ, “ ನಾನು ಎಂದಿಗೂ ಸಾಯದೆ ಇರುವಂತೆ ವರ ವನ್ನು ಕೊಡು ” ಎಂದು ಪ್ರಾರ್ಥಿಸಿದನು. ನಾನಾದರೋ- C ಇದೇನ ಯ್ಯಾ ! 'ಜಾತಸ್ಯ ಮರಣಂಧ್ರುವಂ ' ಎಂಬ ಪ್ರಮಾಣದಂತೆ ಹುಟ್ಟಿದವ ನು ಸತ್ತಿರಬೇಕು ; ಹೀಗಿರುವಲ್ಲಿ ಇಂತಹ ಅಸಾಧ್ಯವಾದ ವರವನ್ನು ಬೇಡಬಹುದೆ ? ಇದನ್ನು ಬಿಟ್ಟು ಬೇರೆ ಯಾವುದಾದರೊಂದು ವರವನ್ನು ಬೇಡು ” ಎಂದು ನುಡಿದೆನು. ಅದಕ್ಕವನು- " ಹಾಗಾದರೆ ಶಿವನ ವಿಗ್ಧ ವನ್ನು ವಿಸ್ಯಬ್ರಹ್ಂದ್ರಾದಿಗಳು ಧರಿಸಿ ಅದರಿಂದ ಹುಟ್ಟಿದ ೭ ದಿನದ