೧೧ ಕಾಮದಹನವು " ತನು ಬಂದು, ತನ್ನ ದೊರೆಗೆ ನಮಸ್ಕರಿಸಿ, ಸರವೂ ಸಿದ್ದವಾಗಿದೆ ಯೆಂ ದು ಬಿನ್ನಿಸಿ ನಿಂತುಕೊಳ್ಳಲು, ಮದನರಾಜನು ಹೇಮಕೂಟದಲ್ಲಿ ತಪ ಸ್ಸಿನಲ್ಲಿರುವ ಶಿವನನ್ನು ಸೋಲಿಸುವುದಕ್ಕಾಗಿ ನಾವು ಅಲ್ಲಿಗೆ ಪ್ರಯಾಣಮಾ ಡಬೇಕಾಗಿದೆಯಾದುದರಿಂದ ನಿನ್ನನ್ನು ಕರತರಿಸಿದೆನು ಎಂದು ಹೇಳಿ, ತಾ ನೂ ಹೊರಡಲನುವಾದನು. ಹಣೆಗೆ ಪುಷ್ಪಧೂಳಿಯ ತಿಲಕವನ್ನಿಟ್ಟು, ಕೊರಲಿಗೆ ಪರಿಮಳದ ಹೂವಿನ ಸರವನ್ನು ಧರಿಸಿ, ತಾವರೆ ನೂಲಿನಲ್ಲಿ ನೇದ ಕಾಸೆಯನ್ನು ಬಿಗಿದು ಕಟ್ಟಿ, ಮಾವಿನ ಚಿಗುರಿನ ಕೊಡೆಯನ್ನು ಹಿ ಡಿದು, ಕೆಂಪು ಗಣಗಿಲೆಯ ಗೊಂಡೆಯನ್ನು ಮೇಲೆ ಸಿಕ್ಕಿಸಿ, ಕೆಳಗೆ ಮೊ ಲ್ಲೆಯ ಮೊಗ್ಗೆಂಬ ಸಣ್ಣ ಗೆಜ್ಜೆಗಳನ್ನು ಕಟ್ಟಿರುವ ಕಬ್ಬಿನ ಬಿಲ್ಲನ್ನು ಹಿಡಿ ದು, ಅದಕ್ಕೆ ತುಂಬಿಗಳಿಂದ ಕೂಡಿದ ಮುಡಿವಾಳವನ್ನು ಇಂಜಿನಿಯಾಗಿ ಕಟ್ಟಿ, ತಾವರೆ ಅಶೋಕ ನಾವು ಮಲ್ಲಿಗೆ ಕನ್ನೈದಿಲೆಯೆಂಬ ಸಂತ ಬಾಣಗಳನ್ನು ಬತ್ತಳಿಕೆಯಲ್ಲಿ ತುಂಬಿ, ಹೂವಿನ ಸರಗಳಿಂದಲೂ ತಾಳೆ ಯು ಎಸಳುಗಳಿಂದಲೂ ಅಲಂಕರಿಸಿರುವ ಪುಪ್ಪರಥವನ್ನು ಪತ್ನಿಯಾದ ರತಿಯೊಡನೆ ಕೂಡಿ ಹತ್ತಿದನು, ಪಾರ್ತಗಳಲ್ಲಿ ಸುಂದರಿಯರು ನಿಂತು ತಾವರೆಯ ಛತ್ರವನ್ನು ಹಿಡಿದು ಹೊಂಬಾಳೆಯ ಚಾಮರವನ್ನು ಬೀಸು ತಿದ್ದರು. ಆ ಮದನರಾಜನ ಸುತ್ತಲೂ ಚಿಗುರಿದ ಮಾವಿನ ಮರಗಳೆಂಬ ಆನೆಗಳೂ, ಗಿಳಿಗಳಂಬ ಕುದುರೆಗಳೂ, ಚಕ್ರವಾಕಪಕ್ಷಿಗಳೆಂಬ ರಥ ಗಳೂ, ಸ್ತ್ರೀ ಸಮೂಹವೆಂಬ ಕಾಲಾಳುಗಳೂ, ಚಂದ್ರನೆಂಬ ಮಂತ್ರಿ ಯ, ವಸಂತನೆಂಬ ದಳವಾಯಿಯೂ, ಭ್ರಮರಧನಿ ಯೆಂಬ ಭೇರೀಶ ಬ್ಲವೂ, ಕೋಕಿಲಸ್ತರವೆಂಬ ಕಹಳಾದ್ಧನಿಯ, ಚಾಳಂಕಪಕ್ಷಿಯ ಕೂಗೆಂಬ ಸ್ತುತಿಪಾಠಕರ ಧ್ವನಿಯೂ ಬಳಸಿ ಬರುತ್ತಿದ್ದು ವು, ಮೇಲೆ ಕುಳಿತು ಕೂಗುವ ಕೋಗಿಲೆಯ ಶಬ್ದವು ಗರ್ಜನೆಯಂತೆಯೂ, ಮೇಲೆ ಮುಚ್ಚಿರುವಕೆಂಪಾದ ಚಿಗುರು ಹಣೆಯಮೇಲಿಕ್ಕಿದ ಕುಂಕುಮದ ಹುಡಿ ಯಂತೆಯೂ, ಭಮರಗಳು ಹಾರಾಡಿ ಮುತ್ತಿರುವ ಪ್ರಮಕರಂದವೇ ಮದೋದಕದಂತೆಯೂ, ಮಂದಮಾರುತದಿಂದ ಹಿಂದೆ ಮುಂದೆ ತೂಗಾ ಡುವ ನೀಟಾದ ಎಳೆಗೊಂಬೆಯೆ ಸುಂಡಿಲಂತೆಯೂ, ಹೂವಿನ ಗೊಂಚ ಲುಗಳ ಕೊಂಬಿನಂತೆಯೂ, ಮೇಲೆ ನೆಟ್ಟಗೆ ನಿಗುರಿ ನಿಂತ ಒಂದು ಕೈ
ಪುಟ:ಚೆನ್ನ ಬಸವೇಶವಿಜಯಂ.djvu/೨೦೨
ಗೋಚರ