ಪುಟ:ಚೆನ್ನ ಬಸವೇಶವಿಜಯಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈe

ಚನ್ನಬಸವೇನುಜಯಕ (ಕಾಂಡ ೩) (ಅಧ್ಯಾಯ ನೆಯ ಧ್ವಜದಂತೆಯೂ ಕಾಣುತ್ತಿರುವ ಮಾವಿನ ಮರಗಳೆಂಬ ಆನೆಗಳು ಮದನಜನ ಪಕ್ಕದಲ್ಲಿ ಹೊರಟುವು, ಕೊರಲಿನಲ್ಲಿರುವ ಕಪ್ಪು ಗೆರೆಯೇ ವಾಫ್ (ಲಗಾಮು) ಯಾಗಿಯೂ, ರಕ್ಕೆಗಳೇ ಮರಕತರತ್ನದಿಂದ ಕೆತ್ತಿದ ಪಕ್ಷರಕ್ಷೆ (ಕೆಗೀರು) ಯಾಗಿಯೂ, ಮಧುರವಾದ ಅವುಗಳ ಧ್ವನಿಯೇ ಕೆನೆವ ಶಬ್ದವಾಗಿಯೂ, ನಡಗೆಯ ಸೊಗಸೇ ೫ ಬಗೆಯ ಗಮನವಾಗಿ ಯ, ಇರುತ್ತಿರುವ ಗಿಳಿಗಳ ಗುಂಪೆಂಬ ಕುದುರೆಗಳು ಭೂಮಿಯಮೇ ಲೂ ಆಕಾಶದಮೇಲೂ ಬರುತ್ತಲಿದ್ದು ವು. ಸತಿಪತಿಗಳಾದ ತಮ್ಮಿಬ್ಬರ ದೇಹಗಳ ಎರಡು ಗಾಲಿಗಳು, ಎರಡರ ಮನಸೂ ಒಂದಾಗಿ ಸೇರಿರು ವುದೇ ಅಚ್ಚು, ಧ್ವನಿಯೇ ಚೀತ್ಕಾರವು, ಗಾಳಿಯಿಂದ ಮೇಲಕ್ಕೆ ಹಾರಿ ರುವ ಗರಿಯೇ ಮೇಲಣ ಧ್ವಜವು ಆಗಿರಲು, ಚಕ್ರವಾಕಗಳೆಂಬ ರಥಗ ಇು ಮನ್ಮಥರಾಜನ ಪಕ್ಕಗಳಲ್ಲಿ ನಡೆಗೊಂಡುವು, ಬಗ್ಗಿದ ಹುಬ್ಬುಗಳೆ? ಬಿಲ್ಲಾಗಿಯೂ, ಕವೆಗಣೋಟವೇ ಬಾಣವಾಗಿಯೂ, ತೋಳುಗಳೇ ದಂಡಾಯುಧವಾಗಿಯೂ, ತೀಕವಾದ ಉಗುರುಗಳೆ ಬಾಕುವಾಗಿ ಯ, ಕಸ್ತೂರಿಯ ಮೊಟ್ಟೆ ಗುರಾಣಿಯಾಗಿಯೂ, ರೋಮರಾಜಿ ಯೇ ಕತ್ತಿಯಾಗಿಯೂ, ಕಾಣುತ್ತಿರುವ ಸ್ತ್ರೀಯರೆಂಬ ಕಾಲಾಳ್ಳಳು ಕಾಮರಾಜನ ಪುಸ್ಮರಥದ ಒತ್ತಿನಲ್ಲಿ ಬರುತ್ತಿದ್ದರು. ಎಲ್ಲರಿಗೂ ಮುಂ ಗಡೆಯಲ್ಲಿ ಸುಳಿಗಾಳಿಯು ಹೋಗುತ್ತಿದ್ದನು, ವಸಂತನ ಆಜ್ಞೆಯಮೇರೆ ಸೇನೆಯೆಲ್ಲವೂ ನಡೆಯುತ್ತಿದ್ದಿತು. ಸಕಲಪಕ್ಷಿಗಳ ಕಲಕಲವು ದಿಬ್ಬ? ಡಲವನ್ನೆಲ್ಲ ವ್ಯಾಪಿಸಿತು, ಧೂಳಿಯು ಆಕಾಶಮಂಡಲದಲ್ಲಿ ಮಬ್ಬುಗವಿ ನಿತು, ಇದೊ ಮದನರಾಜನ ಮದದಾನೆಗಳು ಬರುತ್ತಿರುವುವು ! ದಾರಿ ಬಿಡಿರಿ, ಇಮೋ ಕಾಮರಾಜನ ಜಯಖಡ್ಗ ವು ಬರುತ್ತಿದೆ ! ಇದೊ ಅಂಗಸನ ಕತಾರಿಯು ಬರುತ್ತಿದೆ ! ಎಂದು ಮಮ್ಮಿಜನಕ್ಕೆ ಎಚ್ಚರಿಕೆಯ ನ್ನು ಹೇಳುವಂತೆ ಮುಂಗಡೆಯಲ್ಲಿ ಕೋಗಿಲೆಗಳೆಂಬ ಕಹಳೆಗಳು ಕೂಗು ತಿದ್ದುವು. ಹುತ್ತಗಳಲ್ಲಿ ನೆಲದಲ್ಲೂ ಮೆಳೆಗಳಲ್ಲೂ ಅಡಗಿದ್ದ ಶರೀರದ ತಪಸ್ವಿಗಳೆಲ್ಲರೂ ಮನ್ಮಥನ ಆಗಮನಧ್ವನಿಯನ್ನು ಕೇಳಿ ಭಯದಿಂದ ವಿಹ್ವಲರಾಗಿ ಗೋಳಿಡುತ್ತ ಗಡಗಡನೆ ನಡುಗಿದರು. ಬೆವರಿನಿಂದ ಹಣೆ ಯ ವಿಭೂತಿಯು ಕರಗಿ ತೊಟ್ಟಿಕ್ಕುತ್ತಲೂ, ಜಡೆಗಳು ಬಿಚ್ಚಿ ನೆಲದಲ್ಲಿ