ಪುಟ:ಚೆನ್ನ ಬಸವೇಶವಿಜಯಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಮದಹನವು ೧೩ ಇಣ ಎಳೆಯುತ್ತಲೂ, ಕೊರಲಲ್ಲಿ ಶಿವನಾಮೋಚ್ಛರಣೆಯು ಗದ್ಧ ದಿಸುತ್ತಲೂ ಇರುವ ಋಷಿಗಳು ಯೋಗದಂಡ ಕಮಂಡಲು ಜಪಮಾಲೆ ಮೊದಲಾದುವು ಗಳನ್ನು ಅಲ್ಲಲ್ಲೇ ಮರೆತು, ಎದ್ದು, ಇದೋ ಮನ್ಮಥನು ಬಂದನು ! ಏ ೪೦ ! ಏ೪ರಿ ! ಎಂದು ಕೂಗಿಕೊಳ್ಳುತ್ತ, ಬುದ್ದಿ ಕೆಟ್ಟು, ಕೈಕಾಲ್ಗಳು ನಡುಗುತ್ತಿರಲು, ಹಿಂತಿರುತಿರುಗಿ ನೋಡುತ್ತಿದ್ದರು. ಮದನನು ದಾರಿ ಯಲ್ಲಿ ತನ್ನ ಮೇಲೆ ಮYದು ಜಿತೇಂದ್ರಿಯರೆಂದು ಹೆಮ್ಮೆಗೊಳ್ಳುತ್ತಿದ್ದ ವರನ್ನು ಮೊಹಪಾಶದಿಂದ ಕಟ್ಟಿ ಸೆರೆಯಿಡುತ್ತಲೂ, ಶರಣಾಗತರಾಗಿ ಕಾಸ್ತ್ರಗಳನ್ನು ಕೊಟ್ಟ, ತಪಸ್ವಿಗಳನ್ನು ಹಿಂಸಿಸದೆ ಬಿಟ್ಟು ಬಿಡುತ್ತ ಲೂ, ಶಿವನು ಕುಳಿತಿದ್ದ ಆಶ್ರಮದ ಕಡೆಗೆ ಸಾಗಿದನು. ಪಂಚಾಕ್ಷೇತ್ರದ ಪು ಭೂಮಿಯನ್ನು ಮೆಟ್ಟಿದ ಕೂಡಲೇ ಕಾಮರಾಜನ ಪಟ್ಟದಾನೆಯು ಮುಗ್ಗುರಿಸಿತು. ನರಿಗಳು ಅಡ್ಡಲಾಗಿ ಬಂದು ಕೂಗಿದುವು. ಮೊಲವು ಸೇನೆಯ ಮಧ್ಯದಲ್ಲಿ ನುಗ್ಗಿ ಓಡಿಹೋಯ್ತು. ಆನೆ ಕುದುರೆಗಳ ಕಥೆ ನಿಂದ ನೀರು ಸುರಿದಿತು. ಹೀಗೆ ಕಾಮನ ಸೇನೆಯಲ್ಲಿ ಅಶುಭಸೂಚಕ ವಾದ ಉತ್ಪಾತಗಳು ಕಾಣಿಸಿಕೊಂಡುವು. ಇದನ್ನು ಕಂಡ ವಸಂತನು ತನ್ನ ರಾಜನೊಡನೆ ಮುಂದೆ ಬರುವ ಕೇಡನ್ನು ಸೂಕಿಗೆ ಹಿಂತಿರುಗುವುದೇ ಶ್ರೇಯಸ್ಕರವೆಂದು ತಿಳಿಸಿದನು, ಕಾಮನಾದರೂದೇವತೆಗಳಿಗೆ ನಂಬು ಗೆಯನ್ನು ಕೊಟ್ಟು ಬಂದ ಬಳಿಕ ಹಿಂತಿರುಗಿ ಹೋಗುವುದು ಸರಿಯಲ್ಲ, ಆದುದಾಗಲಿ, ಹೋಗುವುದೇ ಸರಿ ಯೆಂದು ನುಡಿದನು, ಸೇನೆಯು ಮುಂ ದೆ ಸಾಗುತ್ತಿರುವಲ್ಲಿ ಹೇಮಕೂಟದ ಮಹಾದ್ವಾರವನ್ನೂ ಅಲ್ಲಿ ಕಾದಿರುವ ನಂದೀಶನನ್ನೂ ಕಣ್ಣಿನಲ್ಲಿ ಕಂಡರು. ಸೇನೆಯು ಅಲ್ಲೇ ನಿಂತಿತು. ಮದ ನನು ನಂದೀಶನನ್ನು ವಿಾರಿ ಒಳಗೆ ನುಗ್ಗುವುದಕ್ಕೆ ಧೈವಿಲ್ಲದೆ ಮುಂದೆ ಗತಿಯೇನೆಂದು ಯೋಚಿಸುತ್ತ ನಿಂತುಕೊಂಡನು, ಸ್ವಲ್ಪ ಕಾಲಾನಂತರ ಹೂವನ್ನು ಎತ್ತಿ ತರುವುದಕ್ಕಾಗಿ ಹೊರಗೆ ಹೋಗಿದ್ದ ಪಾರತಿದೇವಿಯು ಕೈಯಲ್ಲಿ ಹೂಕರಡಿಗೆಯನ್ನು ಹಿಡಿದು ಸಖಿಯರೊಡನೆ ಬರುತ್ತಿರಲು, ಮ ದನನು ಕಂಡನು, ಓಡಿ ಹೋಗಿ ಪಾವಕ್ಕೆ ನಮಸ್ಕರಿಸಿದನು, ನೀನಾ ರೆಂದು ಮಾರುತಿಯು ಕೇಳಲು, ತಾನು ಮನ್ಮಥನೆಂತಲೂ, ನಂದೀಶನನ್ನು ಕಂಡು ಶಿವನ ಬಳಿಗೆ ಹೋಗಲು ಧೈರವಿಲ್ಲದೆ ನಿಂತಿರುವೆನೆಂತಲೂ, ಬಿ 25