ಪುಟ:ಚೆನ್ನ ಬಸವೇಶವಿಜಯಂ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Deb ಚನ್ನ ಬಸವೇಕವಿಜಯಂ (ಕಾಂಡ 4) [ಅಧ್ಯಾಯ ಸತ್ತು ಕೋಪದಿಂದ ಬೊಬ್ಬಿರಿದು, “ ಎಲೋ ನೀಚನೆ ! ನೀನೆಯೋ ತಾರಕನ ದಳಪತಿ ? ನನ್ನೊಡನೆ ಸಮನಾಗಿ ಕಾದಾಡುವುದಕ್ಕೆ ನೀನೆಷ್ಟ್ಯ ರವನು ? ಇದುವರೆಗೆ ಸೆಣಸಿದ ನಿನ್ನ ಹೆಮ್ಮೆಯನ್ನು ಇನ್ನು ತೋರಿಸು ? ಎಂದು ಮೂದಲಿಸಿ, ಮಹಾವೈಷ್ಟವಾಸ್ಯವನ್ನು ಕರ್ಣಾ೦ತವಾಗಿ ಸೆಳೆದು ಅಬ್ಬರಿಸಿ ದೈತ್ಯನ ಮೇಲೆ ಬಿಟ್ಟನು. ಅದು ಕಿಡಿಯನ್ನು ಕಾರು ತ ಹೋಗಿ ವಜನಾಭನ ಕತ್ತನ್ನು ಛಟ್ಟನೆ ಕತ್ತರಿಸಿ ರುಂಡವನ್ನು ಹಾರಿ ಸಿಕೊಂಡು ಹೋಯಿತು, ಅವನ ಮುಂಡವು ಪೂರಸಂಸ್ಕಾರದಿಂದ ಅರ್ಧ ಯಾಮದವರೆಗೂ ಬಾಣಗಳನ್ನು ಪ್ರಯೋಗಿಸುತ್ತಿದ್ದಿತು ! ಆಗ ಅವನ ಕಡೆಯ ಸೇನೆಯು ಕೋಪವೇರಿ ಹರಿಯ ಮೇಲೆ ಬಿದ್ದಿತು, ವಿಷ್ಣುವು ನಿಟ್ಟಿನಿಂದ ಬಾಣಗಳನ್ನು ಸುರಿಸಿ ರಾಕ್ಷಸರನ್ನೆಲ್ಲ ಉರುಳಿಸುತ್ತ ಬಂದನು. ಇದನ್ನು ಮಹಾನಾಭನು ಕಂಡು, “ ಆಹಾ ! ಮದದಾನೆಯ ಸುಂಡಿಲಿನ ಲ್ಲಿದ್ದ ಕಬ್ಬನ್ನು ಕಿತ್ತಂತೆ ನಮ್ಮ ಕಡೆಯ ವಜನಾಭನನ್ನು ಕೊಂದವನಾ ರು ? ಮುಂದೆ ಬಾ ! ನಿನ್ನ ಶೌವನ್ನು ನೋಡುತ್ತೇನೆ ?” ಎಂದು ಹೇ ಳುತ್ತ, ಹರಿಯ ಮುಂಗಡೆಗೆ ಬಂದು ಬಾಇವನ್ನು ತೊಟ್ಟನು, ವಿಷ್ಣುವಾ ದರೋ ಎಲೋ ನಿಚಲೇ ! ಆ ವಕ್ರನಾಭನು ತನ್ನ ಬಳಿಗೆ ನಿನ್ನನ್ನು ಕರೆದುಕೊಳ್ಳುವುದಕ್ಕಾಗಿ ಹೇಳಿ ಕಳುಹಿರಬಹುದು ! ಅದರಿಂದಲೇ ನೀ ನು ನನಗಿದಿರಾಗಿರುವೆ; ಈಗಳೂ ದಯವಿಟ್ಟು ಕ್ಷಮಿಸುತ್ತೇನೆ; ತಲೆಯ ನ್ನುಳುಹಿಕೊಂಡು ಸುಮ್ಮನೆ ಹೋಗು ?” ಎಂದು ಹೇಳಿ, ಐದು ಬಾಣಗ ಳನ್ನು ಬಿಟ್ಟು, ಅವನ ಬಾಣವನ್ನು ಖಂಡಿಸಿ, ಮತ್ತೆ ನಾಲ್ಕು ಬಾಣಗಳ ನೈಚ್ಛ ರಾಕ್ಷಸನ ರಥ ತುರಗ ಸಾರಥಿ ಧೂಹಗಳನ್ನೆಲ್ಲ ಹಾಳ್ಳಾಡಿದನು ಆಗ ಮಹಾನಾಭನು ಥಟ್ಟನೆ ಬೇರೊಂದು ರಥವನ್ನೇರಿ, ( ಈಗ ನನ್ನ ಬಾಣಗಳನ್ನು ಕತ್ತರಿಸು ನೋಡುವ ” ಎಂದು ಹೇಳಿ, ನಾಲ್ಕು ಬಾಣಗ ಳನ್ನು ಪ್ರಯೋಗಿಸಿ, ಹರಿಯ ತೋಳುಗಳಲ್ಲಿ ನಟ್ಟನು, ವಿಷ್ಣುವು ಅದ ರಿಂದ ನೊಂದು, ಅಯ್ಯೋ ! ಎಂದು ಕೂಗಿದನು. ಆಗ ದಿಕ್ಕಾಲಕರೆ ಲ್ಲರೂ ರೋಷನೇರಿ ಮಹಾನಾಭನ ರಥದ ಸುತ್ತಲೂ ಮುತ್ತಿ ಬಾಣವನ್ನು ಕವಿಸಿದರು, ಅವನು ಮಹಾರೌದ್ರದಿಂದ ಇವರೆಲ್ಲರನ್ನೂ ಪರಿಭವಗೊಳಿಸಿ, ಮತ್ತೆ ವಿಷ್ಣುವಿನಮೇಲೆ ಏಳುಬಾಣಗಳನ್ನು ಎಚ್ಚನು, ಅದರಿಂದ ದೇ