ಅ44 ಚೆನ್ನಬಸವೇಕವಿಜಯಂ (ಕಾಂಡ ೪) [ಅಧ್ಯಾಯ ದು ನಿರ್ಧರಿಸಿ, ಅದರಂತೆಯೇ ಧ್ಯಾನಿಸಿ, ಶಿವನ ವರದಿಂದ ಅಪರಿಮಿತ ಬಲಗಳಾದ ಭೂತಗಳನ್ನು ಪಡೆದು, ರಾಕ್ಷಸರ ಪಟ್ಟಣಗಳಮೇಲೆ ನುಗ್ಗು ವುದಕ್ಕೆ ಕಳುಹಿದರು. ಅವು ತ್ರಿಪುರದ ಬಾಗಿಲಿಗೆ ಹೋದಕೂಡಲೇ ಭೂತಿ ರುದ್ರಾಕ್ಷಧಾರಣಸಂಪನ್ನರಾಗಿರುವ ರಾಕ್ಷಸರ ಸ್ತೋಮವನ್ನು ನೋಡಿ, ಒಳನುಗ್ಗಲಾರದೆ ಹಿಂದಿರುಗಿ ಓಡಿ, ಬಹಿರುದ್ಯಾನಗಳಲ್ಲಿ ನುಗ್ಗಿ , ಹಲಸು ಮಾವು ಬಾಳೆ ಮೊದಲಾದ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದುವು. ಕಾ ವಲಿನ ಕಾಕ್ಷಸರು ಇದನ್ನು ಕಂಡು ಕಬ್ಬುನದ ದಂಡಗಳಿಂದ ಅವುಗಳನ್ನು ಹೊಡೆದು ಬಡಿದರು, ಅನೇಕರಾಕ್ಷಸರು ಅಲ್ಲಿಗೆ ಬಂದು ಮುತ್ತಿದರು. ಭೂತಗಳಿಗೂ ಅವರಿಗೂ ಘೋರಯುದ್ದವಾಯಿತು. ಅನೇಕ ಭೂತಗಳು ಪ್ರಾಣವನ್ನೀಗಲು, ಉಳಿದುವು ಓಡಿಹೋಗಿ, ದೇವತೆಗಳಮುಂದೆ ಬಿದ್ದು ಹೊರಳಾಡಿ, ತಮಗಾದವಸ್ಥೆಯನ್ನು ಹೇಳಿಕೊಂಡು ಅತ್ತವು, ಅತ್ತ ಕ್ಷಸರು ಇದೆಲ್ಲಾ ದೇವತೆಗಳ ಚೆಪ್ಪೆಯೇ ಸರಿ ಎಂದು ಯೋಚಿಸಿ, ಅವರ ಇು ತಡಕಿಕೊಂಡು ಲೋಕಲೋಕಗಳನ್ನೆಲ್ಲ ಸುತ್ತುತ್ತಿದ್ದರು. ಇತ್ಯ ವಿಷ್ಣುಬಷ್ಟೇ೦ದ್ರಾದಿಗಳು ತಮ್ಮ ಯೋಚನೆಯು ಸಿದ್ಧಿಸದೆ ಹೋದುದ ನ್ನು ಕಂಡು ವ್ಯಸನಪಟ್ಟು, ಸರ್ವರೂ ಕೈಲಾಸಕ್ಕೆ ತೆರಳಿದರು. ದ್ವಾರ ದಲ್ಲಿ ನಂದೀಶ್ವರನು ಈಗ ಸಮಯವಿಲ್ಲವೆಂದು ತಡೆಯಲು, ಆತನಪ್ಪಣೆಯ ಮೇರೆ ಮಹಾದ್ವಾರದ ಪಕ್ಷದ ಮಂಟಪದಲ್ಲಿ ಎಲ್ಲರೂ ಗುಂಪುಕಟ್ಟಿಕೊಂ ಡು ಕುಳಿತು, ಗಜಬಜನೆ ಮಾತನಾಡಿಕೊಂಡು, ತಮ್ಮ ವಸ್ಥೆಗಳನ್ನೆಲ್ಲ ಎದ್ದಿ ಸಿ ಪ್ರಲಾಪಿಸುತ್ತಿದ್ದರು, ನಂದೀಶನು ಬಂದು ಸದ್ದನ್ನು ಮಾಡಬೇಡಿ ರೆಂದು ದಂಡದಿಂದ ಹೊಡೆದು ಎಚ್ಚರಿಸಲು, ಕಂಗೆಟ್ಟು ಒಳಗೊಳಗೆ ಗು ಸುಗುಸುಗುಟ್ಟು , ಮುಂದೇನುಪಾಯವೆಂದು ವಿಷ್ಣುವನ್ನು ಕೇಳಿದ ರು. ನನಗೆ ಬುದ್ದಿ ಯೆ ಓಡುವುದಿಲ್ಲವೆಂದು ಆತನು ನಿರಾಶೆಯಿಂದ ಹೇ ಳಲು, ಎಲ್ಲರೂ 'ನಿಶ್ಯಬ್ದವಾಗಿ ಕುಳಿತು ಆಲೋಚಿಸುತ್ತಿದ್ದು, ಕೊನೆಗೆ ವಿಷ್ಣುವನ್ನು ಕುರಿತು- " ಸಾಮಾ ! ಮೊದಲು ತಾವು ಹೇಳಿದಂತೆಯೇ ರಾಕ್ಷಸರು ಶಿವಭಕ್ತಿ ಪಾತಿವ್ರತ್ಯಳ ಬಲವುಳ್ಳವರಾಗಿರುವವರೆಗೂ ನಾ ವು ಅವರನ್ನು ಏನೂ ಮಾಡಲಾರೆವು; ನೀವು ಯಾವುದಾದರೊಂದು ಮಾ ಯೋಪಾಯದಿಂದ ಅವರ ಭಕ್ತಿಪಾತಿವ್ರತ್ಯಗಳನ್ನು ಕೆಡಿಸಿದರೆ, ಆಗ ಪರ
ಪುಟ:ಚೆನ್ನ ಬಸವೇಶವಿಜಯಂ.djvu/೨೪೭
ಗೋಚರ