ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಳಿಗೆ ಏಕೆಜಿಟ್ಟವು ಆಜ್ಞಾಪಿಸಿದನು, ಜಗತ್ತು ಕ್ಷಿಯಾದ ಸ್ವಾಮಿಯ ಆರೋಹಣಕ್ಕೆ ಅರ್ಹ ವಾದ ರಥವನ್ನು ರಚಿಸುವುದಕ್ಕೆ ವಿಶ್ವಕರ್ಮನು ನಿಂತನು, ಅದಕ್ಕೆ ತಕ್ಕ ಬಲವತ್ತರಗಳಾದ ಉಪಕರಣಗಳನ್ನೇ ಜೋಡಿಸಿದನು. ಭೂತಲವೇ ರಥ ದ ಪೀಠವಾಯಿತು, ಆಕಾಶವೇ ಮೇಲಣ ಮಂಟಪಸ್ಥಲವಾಯಿತು. ಸ ಮುದ್ರ ನಕ್ಷತ್ರ ಮೊದಲಾದುವುಗಳು ಅಚ್ಚಾದುವು. "ಸೂದೃಚಂದ್ರರೆ ಎರಡು ಚಕ್ರಗಳಾದುವು, ನಾಲ್ಕು ವೇದಗಳ ನಾಲ್ಕು ಕುದುರೆಗಳಾದು ವು, ಉತ್ತರದಕ್ಷಿಣಾಯನಗಳು ನೊಗವಾದುವು. ಉಪನಿಷತ್ತುಗಳು ಕ ಟ್ಟುವ ಹಗ್ಗವಾದುವು, ಶಾಸ್ತ್ರಗಳು ಕೀಲಾದುವು, ಓಂಕಾರವೇ ಚಾವ ಟಿಯಾಯಿತು, ಮೇರುಪರ್ವತವು ಧನುಸ್ಸಾಯಿತು, ಆದಿಶೇಷನು ನಿಂಜೆನಿ ಯಾದನು, ವಿಷ್ಣುವು ಬಾಣವಾದನು. ಬ್ರಹ್ಮನು ಸಾರಥಿಯಾದನು, ನ ದೀನಾರಿಯರು ಚಾಮರಗ್ರಾಹಿಣಿಯರಾದರು. ಕೈಲಾಸವೇ ಶ್ರೇತಛತ್ರ ವಾಯಿತು, ವಸಿಷ್ಠಾದಿ ಮಹರ್ಷಿಗಳು ಸವಾಚನವನ್ನು ಮಾಡುವವ ರಾದರು, ಕಿನ್ನರ ಯಕ್ಷಸಿದ್ದಾದಿಗಳು ಸ್ತುತಿಪಾಠಕರಾದರು. ಗರುಡಗಂ ಧರಾದಿಗಳು ಕವಿಗಳಾದರು.” ಕುಲಶೈಲಗಳು ಮೇಘಗಳು ಸಹ ಮೇಲು ಕಟ್ಟುಗಳಾದುವು. ಇಂದ್ರಾದಿದಿಕ್ಷಾಲಕರು ಮಸಾರಥಿಕರಾದರು, ಸಕಲ ದೇವತಾಸಮೂಹವೂ ಸನ್ನದ್ಧವಾಗಿ ನಿಂತು ಮಹಾಸಮುದ್ರದಂತೆ ಕಾಣಿ ಸಿತುಆಗ ನಂದೀಶನು ಶಿವನ ಬಳಿಗೆ ಹೋಗಿ ನಮಸ್ಕರಿಸಿ, ಎಲ್ಲವೂ ನಿದ್ದ ವಾಯಿತೆಂದು ಬಿನ್ನೈಸಿದನು, ಪರಶಿವನು ಪಾರತಿಯೊಡನೆ ಮಂದ ಸ್ಮಿತನಾಗಿ ನಿಷ್ಟಾ ಸನದಿಂದಿಳಿದು, ವೃಷಭವನ್ನೇರಿ ರಥದ ಬಳಿಗೆ ಬಂದ ನು, ಮಹಾವಾದ್ಯಘೋಪವು ವಿಜೃಂಭಿಸಿತು. ಸರದೇವತೆಗಳೂ ಜಯ ಘೋಪವನ್ನು ಮಾಡಿದರು. ಶಂಕರನು ವೃಷಭದಿಂದಿಳಿದು ಆ ಮಹಾರಥ ದಮೇಲೆ ಎಡಚಾದವೊಂದನ್ನಿಟ್ಟನು. ಅನೇಕ ಬ್ರಹ್ಮಾಂಡೋದರನಾದ ಆ ಮಹಾಸಾಮಿಯ ಭಾರವನ್ನು ತಾಳಲಾರದೆ, ಕೂಡಲೇ ರಥವು ಕಟಕಟನೆ ಶಬ್ದ ಮಾಡಿ ಜರ್ರುರಿತವಾಗಿ ಗಾಲಿಗಳು ನಗ್ಗಿ ಕುದುರೆಗಳು ಬಳ್ಳಿ ರಥವು ಪಾತಾಳಕ್ಕೆ ಇಳಿದುಹೋಯಿತು. ವಿಷ್ಣುವು ಕಲಸಕೆಟ್ಟಿತೆಂದು ಯೋಚಿ ಸಿ, ಥಟ್ಟನೆ ಮಹಾವೃಷಭಾಕಾರವನ್ನು ಧರಿಸಿ, ಕೋಡನ್ನು ರಥದ ಅಡಿ ಗೆ ಕೊಟ್ಟು ಮಾಂಟದನು. ರಥವು ಎದ್ದು ನಿಂತಿತು. ವಿಶ್ವಕನು ಕೀಲು 81