ಪುಟ:ಚೆನ್ನ ಬಸವೇಶವಿಜಯಂ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವಶನಿಜಯಂ (ಕಾಂಡ ೪) ಅಧ್ಯಾಯ ಡಿಸುವುದಕ್ಕಾಗಿ ಶಿವನಿಗೆ ಚಾಡಿಹೇಳಿ ಕರೆದುಕೊಂಡು ಬಂದ ಅಧಮನೋ ನೀನು ? ನಮ್ಮ ಮೇಲೆ ಕೈಮಾಡಿ ಮೊದಲು ನಿನ್ನ ಪ್ರಾಣವನ್ನುಳುಹಿಕೊ; ಭೂಮಿಯಲ್ಲಿ ಬಡಹಾರರು ಯಜ್ಞದಲ್ಲಿ ಕೊಡುವ ಹವಿಭಾಗವನ್ನೆಲ್ಲ ನುಂಗಿ ನುಂಗಿ ಕೊಬ್ಬಿರುವ ನೀನು, ಆ ಹವಿಸ್ಸನ್ನು ನುಂಗುವ ಹಾಗೆ ಈ ಯುದ್ದವೂ ಸುಲಭವೆಂದು ಯೋಚಿಸಿ ಬಂದೆಯೋ ? ದೇವವಾರಾಂಗನೆ ಯರೊಡನೆಕೊಡಿ ಚೀರ್ಕೊಳವೆಗಳಿಂದ ಜಲಕ್ರೀಡೆಯನ್ನಾಡುವಂತೆ ಬಾ ಇದೇಟು ಸದರವೆಂದು ತಿಳಿದು ಇಲ್ಲಿಗೆ ಬಂದೆಯಾ ? ಎಂದು ನಾನಾವಿಧವಾ ಗಿ ಮೂದಲಿಸುತ್ತ, ಇಂದ್ರನ ಮೇಲೆ ಬಾಣಗಳ ಮೊತ್ತವನ್ನು ಸುರಿಸಿದ ನು, ಅವುಗಳನ್ನೆಲ್ಲ ಇಂದ್ರನು ತರಿದು, ಮತ್ತೆ ದೈತ್ಯನ ಮೇಲೆ ನಿಕಿತಾ ಸ್ಯಗಳನ್ನು ಬಿಟ್ಟನು. ಅದನ್ನು ಕಂಡು ವಿದ್ಯುನ್ಮಾಲಿಯು ಕೆರಳ, ಮ ಹಾ ತೀಕಾಸ್ತ್ರಗಳು ಮೂರನ್ನು ಬಿಟ್ಟು ಇಂದ್ರನ ಎದೆಯನ್ನು ನಟ್ಟು ಮೂರ್ಛಗೊಳಿಸಿ ಉರುಳಿಸಿದನು. ದೇವಸೇನೆಯು ಘೋಳ್ ಎಂದಿತು. ಬಳಿಕ ವಿದ್ಯುನ್ಮಾಲಿಯು ಮಹಾಕೋಪದಿಂದ ಉಳಿದ ದೇವಸೇನೆಯ ಮೇಲೂ ಬಿದ್ದನು. ಆಗ ಷಣ್ಮುಖನು ಅವನಿಗಿದಿರಾಗಿಧನುಷ್ಠಾಂಕಾರವನ್ನು ಮಾಡಿ ರಾಕ್ಷಸರ ಎದೆಯನ್ನೆಲ್ಲ ಗಡಗುಟ್ಟಿಸಿದನು.ಆದರೂ ವಿದ್ಯುನ್ಮಾಲಿಯು ಬೆದರದೆ ನಿಂತಿರುವುದನ್ನು ಕುಮಾರಸ್ವಾಮಿಯು ನೋಡಿ_ C ಎಲೆಖಳ ರಾಕ್ಷಸನೆ ! ನಾನಾರು ತಿಳಿಯಯಾ? ನಿಮ್ಮಪ್ಪನ ದರ್ಪವನ್ನು ಮುರಿದು ಯಮಸದನಕ್ಕೆ ಕಳುಹಿದ ಮಹಾಸೇನಾನಿಯ ನಾನಲ್ಲವೆ ? ನಿನ್ನನ್ನು ಹುಟ್ಟಿಸಿದವನ ಗತಿಯೇ ಹಾಗಾಗಿರುವಾಗ ನೀನು ಏನನ್ನು ತಾನೇವಾಡ ಬಲ್ಲೆ? ಅವನ ಗತಿಯನ್ನು ನೀನೂ ತಂದುಕೊಳ್ಳದೆ ಶರಣಾಗತನಾಗಿ, ಇ ನ್ನೂ ನಾಲ್ಕು ದಿನ ಭೂಮಿಯಲ್ಲಿ ಬದುಕು ; ಇಲ್ಲದೆ ಹೋದರೆ ನಿಮ್ಮ ಪ್ಪ ನಿಗೆ ಬಿಟ್ಟಂತಹ ಬಾಣಗಳನ್ನೇ ಈಗ ನಿನಗೂ ಬಿಡುತ್ತೇನೆ ತಾಳಕೆ ೨ ಎಂದು ಹೇಳಿ, ಬಾಣವನ್ನು ತೊಟ್ಟನು. ವಿದ್ಯುನ್ಮಾಲಿಯು ಕೆರಳಆಹಾ ! ನಾನಾಗಿ ಹುಡುಕಿಕೊಂಡುಹೋಗುತ್ತಿದ್ದ ಬಳ್ಳಿಯು ಕಾಲಿಗೆ ಸಿಕ್ಕಿದಂತಾಯಿತು ! ನಮ್ಮಪ್ಪನನ್ನು ಕೊಂದವನಿಗೆ ಮುಖ್ಯಿಗೆ ಮುಯ್ಯಾ ಡಿ ಹಗೆತನವನ್ನು ತೀರಿಸಿಕೊಳ್ಳಬೇಕೆಂದು ನಾವು ಯೋಚಿಸಿಕೊಂಡಿದ್ದ ರೂ, ತಿರಿಕನ ಮಗನಾದ ನೀನು ಇಷ್ಟ್ರ ರೊಳಗೆ ಸತ್ತು ಹೋಗಿರಬಹು