ತ್ರಿಪುರಸಹ್ಮಾ ರವು ಕಿ ಟ್ಟರೆ ನಾವು ಉಳಿವೆವು; ಇಲ್ಲದಿದ್ದರೆ ಪುನಃ ನಮ್ಮ ಹೆಂಡರಮುಖವನ್ನು ನಾವು ನೋಡುವ ಹಾಗಿಲ್ಲ; ಈಗ ಬಂದಿರುವ ಕಾಳರಾಕ್ಷಸನು ಇದುವ ರೆಗೆ ಕಾದಿದ ರಕ್ಕಸರಂತಲ್ಲ; ನಾವು ಇದುವರೆಗೂ ಅಂಥ ಭೀಕರರೂಮಿನ ಊರದೈತ್ಯನನ್ನೇ ನೋಡಿರಲಿಲ್ಲ; ನೀಲಗಿರಿಗೇ ಕೈಕಾಲ್ಗಳೇನಾದರೂ ಹುಟ್ಟದುವೊ ! ಕತ್ತಲೆಯೆ ಪುರುಷಾಕಾರವನ್ನು ಧರಿಸಿ ಬಂದಿರುವು ದೊ ? ತಿಳಿಯಲಿಲ್ಲ ಎಂದು ಹೇಳಿಕೊಂಡು ಗೊ೪ಟ್ಟರು. ಶಿವನು ಇದನ್ನು ಕೇಳಿ ನಸುನಗುತ್ತಿರಲು, ವಾಹನನಾದ ಮಹಾವೃಷಭೇಶನು ಘುಡುಘುಡಿಸಿ ಎದ್ದು , “ ಛ2 ನಿಚರಿರಾ ! ಇದೊಂದು ದೊಡ್ಡ ಸುದ್ದಿ ಯೆಂದು ಪರಶಿವಮೊಡನೆ ಹೇಳಿಕೊಳ್ಳುವುದಕ್ಕೆ ಬಂದಿರಾ ? ಸಾಕು; ನಡೆ ಯಿರಿ; ಎಂದು ಗ ಸರಿ, ಶಿಂಶುಮಾರನ ಮೇಲೆ ಯುದ್ಧಕ್ಕೆ ಹೊರಡಲು ಶಿವನಪ್ಪನೆಯನ್ನು ಪಡೆದು ತಾನೇ ಹೊರಟನು. ಮುಂದೆ ವಂದಿಗಳೂ ನಾವ್ಯಗಳ ಭೋರ್ಗರೆದುವು. ಕೈಲಾಸಪರ್ವತಕ್ಕೆ ಕಾಲ್ಗಳು ಮೂಡಿ ನಡೆದು ಹೋಗುವಂತೆ ಶುಭಾಂಗನಾದ ಮಹಾವೃಷಭನು ಕೆಕ್ಕರಸಿಕೊಂ ಡು ದಿಕ್ಕು ದಿಕ್ಕುಗಳನ್ನು ನೋಡುತ್ತ ಬಂದು ದೈತ್ಯವಾಹಿನಿಯನ್ನು ನುಗ್ಗಿ ದನು. ಈ ಅದ್ಭುತವೃಷಭನನ್ನು ನೋಡಿ ರಾಕ್ಷಸರು ಬೆಕ್ಕಸಬೆರಗಾದ ರು, ಅದರ ನಾಲ್ಕು ಪಾದಗಳಿಂದಲೂ ಕೆರೆವ ಧೂಳಿಯು ಸೂರಮಂಡಲ ವನ್ನೇ ಮುಚ್ಚಿ ಕತ್ತಲೆಗವಿಸಿತು. ಅದರ ಠಣತ್ಕಾರಕ್ಕೆ ರಕ್ಕಸರು ಮೂ ರ್ಛಗೊಂಡು ಉರುಳುತ್ತಿದ್ದರು, ಅದರ ಬಾಲದ ಬೀಸುವಿಕೆಯ ರಭಸಕ್ಕೆ ನಕ್ಷತ್ರಗಳು ಕಳೆದು ಬೀಳುತ್ತಿದ್ದುವು, ಅದರ ಕೊಂಬಿನ ತಿವಿತದಿಂದ ರಕ್ಕಸರ ತಂಡತಂಡವೆ: ಗಾಯವಡೆದು ಮಡಿಯುತ್ತಿದ್ದಿತು, ಬೆಟ್ಟದ ಗುಂ ಡುಗಳನ್ನು ಕಾಲಿನಿಂದುರುಳಿಸಿ ಕೊಡುಗಳಿಂದ ವಿರಾಟ ರಾಕ್ಷಸಸೈನ್ಯದ ಮೇಲೆ ಉರುಳಿಸಿ ನುಗ್ಗು ಮಾಡುತ್ತಿದ್ದಿತು. ಮೂಗಿನಲ್ಲಿ ಬಿಟ್ಟ ಉಸುರಿ ನಿಂದ ಕೊಚ್ಚಿ ಹೋದ ದನುಜರು ದಿಗಂತದಲ್ಲಿ ಬಿದ್ದು ನರಳುತ್ತಿದ್ದರು. ರಾಕ್ಷಸರು ಬಾಣಗಳನ್ನೂ ಕಲ್ಲುಂಡುಗಳನ್ನೂ ಮರಗಳನ್ನೂ ವೃಷಭೇಂ ದ್ರನ ಮೇಲೆ ಸುರಿಸುತ್ತಿದ್ದರು. ಆದರೇನು ? ವಕ್ರದಮೇಲೆ ಬಿದ್ದ ಕಲ್ಲಿನಂ ತೆ ಅವುಗಳ ಜರ್ಝರಿತವಾಗಿ ಹಾರಿಹೋಗುತ್ತಿದ್ದುವು, ಆಯುಧಗಳಿಗೆ ಈ ಬಸವನು ಜಗ್ಗುವುದಿಲ್ಲವೆಂದು ದೊಡ್ಡ ದೊಡ್ಡ ಸರಪಳಿಗಳನ್ನೂ ಮೀ೪
ಪುಟ:ಚೆನ್ನ ಬಸವೇಶವಿಜಯಂ.djvu/೨೬೬
ಗೋಚರ