ಶಿವವನವಿಹಾರೋತ್ಸವವು 44 ರಚಿಸಿರುವ ಕೆಂಬಣ್ಣದ ಗೂಡಾರದಂತ ಪಲ್ಲವಪುಪ್ಪಾದಿಗಳಿಂದ ಸಾಂದ್ರ ವಾದ ಮಾವಿನಮರವು ಒಪ್ಪಿದ್ದಿತು. ವಸಂತನೆಂಬ ಬೇಟೆಗಾರನು ವಿರಹಿಗ ಳೆಂಬ ಮೃಗಗಳನ್ನು ಹಿಡಿದು ತಂದು ಸುಡುವುದಕ್ಕಾಗಿ ಒಟ್ಟಿರುವ ದೊಡ್ಡ ಕಿಚ್ಚಿನಂತೆ ಕೆಂಪು ಚಿಗುರಿನಿಂದ ಮುಚ್ಚಿರುವ ಅಶೋಕವೃಕ್ಷಗಳು ತೋ ರುತ್ತಿದ್ದು ವು, ಭೂಮಿಯೆಲ್ಲ ಪುಸ್ಸಗಂಧಮಯವಾಗಿದ್ದಿತು. ದಿಕ್ಕು ದಿಕ್ಕು ಗಳಲ್ಲೆಲ್ಲ ಹಣ್ಣುಗಳೇ ಕಾಣುತ್ತಿದ್ದುವು, ವನಗಳೆಲ್ಲ ಮದನನ ಸೇನಾಮು ಯವಾಗಿದ್ದುವು. ಲೋಕವೆಲ್ಲ ಸುಖಿಗಳ ಮಯವಾಯಿತು. ಮಾತುಗ ಆಲ್ಲ ಕಾಮಲೀಲಾಮಯವಾಗಿದ್ದುವು. ಲತಾಗೃಹಗಳಲ್ಲಿ ವಿಟಾಳಗಳ ಮ ಯವಾಗಿದ್ದುವು. ಸರೋವರಗಳೆಲ್ಲ ವಿರಹಿಗಳ ವಾಸಸ್ಥಲವಾಗಿದ್ದುವು. ವಸಂತಋತುವಿನ ಪ್ರಭಾವವು ಹೀಗೆ ಲೋಕಾನಂದಕರವಾಗಿ ಒಪ್ಪು ತಿರಲು, ಶಿವನ ಚೈತರಥವನವು ವನಪಾಲನ ಸಾಹಸ ವಿಶೇಷದಿಂದ ಅತ್ಯತಿಶಯವಾದ ಸೊಂಪುಗೊಂಡು ಮೆರೆಯುತ್ತಿದ್ದಿತು. ಅಲ್ಲಲ್ಲಿಗೆ ಲತಾ ಮಂಟಪಗಳು, ಚಿಗುರಿನ ಚಪ್ಪರಗಳು, ತಳಿರ ತೋರಣಗಳು, ಹೂವಿನ ಹಾಸುಗೆಗಳು, ಚಿಗುರಿನ ಉಯ್ಯಾಲೆಗಳು, ಪನ್ನೀರ ಕಾಿಗಳು, ಅರವ ಟ್ಟಿಗೆಗಳು, ಪುಷ್ಪಗುಚ್ಚದ ಕುರುಜಗಳು, ನೀರು ಹಾರುತ್ತಿರುವ ಕಾ ಇಂಜೆಗಳು, ಹೂವಿನ ಗೊಂಬೆಗಳು, ಚಂದ್ರಕಾಂತಶಿಲೆಯ ವಿಶ್ರಾಂತಿ ಪೀಠಗಳು, ಒಪ್ಪಿದ್ದುವು, ವನಪಾಲಕನು ಅದರ ಸೊಬಗನ್ನು ನೋಡಿ ತಲೆದೂಗಿದನು, ಪರಶಿವನಿಗೆ ಬಿಸಿ ಕರೆದುಕೊಂಡು ಬಂದು ತೋರಿ ಸಬೇಕೆಂದು ಯೋಚಿಸಿದನು, ಮಲ್ಲಿಗೆಯ ಮೊಗ್ಗೆಗಳನ್ನೂ, ಸಂಪಗೆಯ ಹೂವುಗಳನ್ನೂ, ತಾವರೆಯ ಅರಲುಗಳನ್ನೂ, ಅಶೋಕದ ಚಿಗುರುಗಳ ನ್ಯೂ, ಹೊಂಬಾಳೆಗಳನ್ನೂ, ಪೊಟ್ಟಳಗಳಲ್ಲಿ ಕಟ್ಟಿ ದನು, ರಸಬಾಳೆಯ ಗೊನೆಗಳನ್ನೂ, ಅಡಕೆ ತೆಂಗಿನ ತಾರುಗಳನ್ನೂ, ಹಲಸು ಮಾವು ದಾ ೪೦ಬೆ ನೇರಿಲು ಅಂಜೂರ ಸೇಬು ದ್ರಾಕ್ಷಿ ಮೊದಲಾದ ಹಣ್ಣುಗಳನ್ನೂ ಆಳುಗಳಮೇಲೆ ಹೊರಿಸಿದನು. ಇವನ್ನೆಲ್ಲ ಶಿವನ ಬಳಿಗೆ ಸಾಗಿಸಿಕೊಂಡು ಹೋಗಿ ಮುಂದಿಟ್ಟು ನಮಸ್ಕರಿಸಿ, ಭಕ್ತಿಯಿಂದ ಕೈಕಟ್ಟಿ ನಿಂತು, ಜೀ ಯಾ ! ತಾವು ನನ್ನ ಪಾಲನೆಗೆ ಒಪ್ಪಿಸಿದ ವನವು ಈಗ ಫಲಭರಿತವಾಗಿರು ವುದು; ವನದೇವಿಯು ದಾಳಿಂಬೆಯಬೀಜಗಳೆಂಬ ಹಲ್ಲು ಕಿರಿದು ಕೋ
ಪುಟ:ಚೆನ್ನ ಬಸವೇಶವಿಜಯಂ.djvu/೨೭೪
ಗೋಚರ