ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏLD ಚನ್ನಬಸವೇಶವಿಜಯಂ (೪nಂಡ ೪) - [ಅಧ್ಯಾಯ ಲನ್ನು ಸಿಕ್ಕು ಬಿಡಿಸಿ, ಕೂದಲಿನೊಳಗೆ ಹೂವಿನ ಸರವನ್ನು ಸೇರಿಸಿ ಎ ಣ್ಣೆಗಂಟಿಕ್ಕಿ, ಮುಖವನ್ನು ನೋಡಿ, ಸಂತೋಷ್ಟಿಸಿ, ಬಳಿಕ ಆ ವನದ ಕಾವಲಿಗೆ ಒಬ್ಬ ಚಾರನನ್ನು ನೇಮಿಸಿ, ಒಂದುದಿನವೂ ತಪ್ಪದೆ ಆ ವನದ ಪುಪ್ಪಗಳನ್ನೆತ್ತಿ ದೇವಿಯರಿಗೆ ತಂದು ಕೊಡಬೇಕೆಂದು ಪುಷ್ಪದತ್ತನಿಗೆ ಆ ಜ್ಞಾವಿಸಿ, ಅರಮನೆಗೆ ತೆರಳಿ, ಸುಖಮಯನಾಗಿದ್ದನು. ಹೀಗಿರುತ್ತಿರು ವಲ್ಲಿ ವಸಂತಋತುವು ಸಂಧಿಸಿತು. ಚಳಿಯು ತಪ್ಪಿತು. ತಂಗಾಳಿಯು ಬೀಸಿತು. ಪುಷ್ಟಪರಿಮಳವು ತುಂಬಿತು. ತುಂಬಿಗಳ ಸೊಮವು ನಲಿದಾಡಿತು. ಕೋಗಿಲೆಗಳ ತಿಂತಿಣಿಯು ಹಾಡಿತು ಮದನನಿಗೆ ಬಲ ಹೆಚ್ಚಿತು. ವೃಕ್ಷಲತಾನಿಕುರುಂಬವು ಚಿಗುರೇರಿತು. ವಿರಹಿಜನ ರ ಎದೆಯು ಬಿರಿದಿತು. ಭೋಗಿಗಳ ಮನಸ್ಸು ಉಸನೇರಿತು, ತಾ ವರೆಯ ಬಳ್ಳಿಯಲ್ಲಿ ಹೂಹತ್ತಿತು ; ಗಿಳಿಗಳ ಬಳಗವು ಹಣ್ಣುಗಳನ್ನು ತಿಂ ದು ಹಾರಾಡಿತು, ಆಕಾಶವು ಸ್ಪಷ್ಟವಾಯಿತು. ಚಂದ್ರಕಿರಣವು ಆ ಹ್ಲಾದಕವಾಯಿತು. ಎತ್ತ ನೋಡಿದರೂ ಭೂಮಿಯು ಪಳಚ್ಚ ತೋ ರುತ್ತಿದ್ದಿತು, ಎಲ್ಲಿ ತಿರುಗಿದರೂ ಸುರಭಿಮಂದಮಾರುತವು ಬೀಸುದ್ದಿ ತು, ಎಲ್ಲಿಗೆ ಹೋದರೂ ಶುಕವಿಕಾದಿಗಳ ಮಧರಸರವು ಕೇಳುತ್ತಿದ್ದಿ ತು, ಪ್ರತಿಯೊಂದುಉಪವನಗಳೂ ಪುಷ್ಪ ಪಲ್ಲವಾದಿಗಳಿಂದ ತುಂಬಿ ಮ ದರಾಜನ ಬಾಣಶಾಲೆಯೊ ! ರತಿಪತಿಯ ವಿಹಾರಮಂದಿರವೋ, ಛೋ ಗಿಗಳ ವಿನೋದಮಂಟಪವೋ, ಗಿಳಿಗಳ ಭೋಜನಶಾಲೆಯೋ , ತುಂಬಿ ಗಳ ಅರವಟ್ಟಿಗೆಯೋ, ನವಿಲುಗಳ ನರ್ತನರಂಗವೋ, ಕೋಕಿಲಗಳ ಸಂ ಗೀತ ಶಾಲೆಯೋ, ಎಂಬಂತೆ ತೋರುತ್ತಿದ್ದು ವು. ಮದನನು ಉಪವನ ವೆಂಬ ತನ್ನರಮನೆಯ ಸುತ್ತಲೂ ದನಿಯ ಪ್ರಕಾರವನ್ನು ಕಟ್ಟಿಸಿರುವ ನೋ ಎಂಬಂತೆ ಮೊನೆಯಾದ ಕೆಂಗೇದಗೆ ಹೂವುಗಳನ್ನು ಬಿಟ್ಟಿರುವ ತಾಳೆಮರಗಳ ಬೇಲಿಯು ಒಪ್ಪಿದ್ದಿತು. ವಿಜಯಯಾತ್ರೋತ್ಸುಕನಾದ ಮನ್ಮಥರಾಜನಿಗೆ ಇಳಿದುಕೊಳ್ಳುವುದಕ್ಕಾಗಿ ವಸಂತನು ಚಿಗುರುಗಳೆಂಬ ರತ್ನಗುಚ್ಚಗಳಿಂದಲೂ, ಪುಷ್ಪಗುಚ್ಚನೆಂಬ ಚಿನ್ನದ ಸರಿಗೆಯಕುಚ್ಚುಗ ೪೦ದಲೂ, ಹಬ್ಬಿದ ಮಲ್ಲಿಗೆಬಳ್ಳಯ ಮೊಗ್ಗೆಗಳೆಂಬ ಮುತ್ತಿನಗುದಿಗಳಿಂದ ಲೂ, ಹಾರಾಡುವ ತುಂಬಿಗಳಂಬ ಇಂದ್ರನೀಲಮಣಿಯ 'ಸರಗಳಿಂದಲೂ m