ಪುಟ:ಚೆನ್ನ ಬಸವೇಶವಿಜಯಂ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬܝ ಶಿವ ವನವಿಹಾರೋತ್ಸವವು ಗೆ ಅಲಂಕರಿಸಿಕೊಳ್ಳುವುದಕ್ಕಾಗಿ ಅತಿಭಕ್ತಿಯಿಂದ ಒಪ್ಪಿಸುತ್ತಿದ್ದನು. ಒಂದುದಿನ ಇವನು ಒಪ್ಪಿಸಿದ ಹೂವಿನಲ್ಲಿ ಸಾರಿಜಾತಪುಪ್ಪವು ಇಲ್ಲದೆ ಯಿರಲು, ಗೌರೀದೇವಿಯು ಪುಷ್ಪದತ್ಯನ ಮುಖವನ್ನು ನೋಡಿ, ಪಾರಿ ಜಾತವೇತಕ್ಕಿಲ್ಲವೆಂದು ಕೇಳಲು ; ತಾಯಿಾ ! ನಂದನವನದಲ್ಲಿ ಆ ಹೂವಿ ರುವುದು, ಅದನ್ನು ಈ ದಿನ ಶಚೀದೇವಿಯು ಅಪೇಕ್ಷಿಸಿ ಮುಂಚಿತವಾಗಿ ಎತ್ತಿಸಿಕೊಂಡಿದ್ದಳು; ಅದರಿಂದ ನನಗೆ ದೊರೆಯಲಿಲ್ಲವೆಂದು ಕೈಮುಗಿದು ಭಯದಿಂದ ಬಿನ್ನೈಸಿದನು, ಆ ಮಾತನ್ನು ಕೇಳಿ ಶಂಕರಿಗೆ ಮನಸ್ಸಿನಲ್ಲಿ ಈರ್ಷೆಯು ಹುಟ್ಟಿತು. ಸತಿಯ ಬಿನ್ನವಾದ ವದನವನ್ನು ಪರಶಿವನು ನೋಡಿ,ದೇವಿಯೆ ! ಇದಕ್ಕಾಗಿ ನೀನು ಮನಸ್ಸಿನಲ್ಲಿ ಇಷ್ಟೊಂದು ನೋಂ ದುಕೊಳ್ಳುವುದೆ ? ಕಲ್ಪವೃಕ್ಷದ ಕುಸುಮಗಳು ನಿನಗೆ ದುರ್ಲಭವೆ ? ಐದು ಜಾತಿಯ ಕಲ್ಪತರುಗಳೂ ಈ ಪರ್ವತದ ತಪ್ಪಲಿನಲ್ಲೇ ಇರುವಂತೆ ನಾನು ಮನೋಹರವಾದ ಉಪವನವನ್ನು ಕ್ಷಣಕಾಲದಲ್ಲಿ ವಿರಚಿಸುವೆನು; ನಡೆ; ನೋಡು, ಎನ್ನಲು, ಭವಾನಿಯು ಕೂಡಲೇ ತನ್ನ ಆಪ್ತಸಖಿಯರೊಡನೆ ಕೂಡಿ ಹೊರಟಳು. ಶಿವನೂ ಸಂಗಡಲೇ ನಡೆಗೊ೦ಡನು. ಪರ್ವತದ ತಪ್ಪಲಿನಲ್ಲಿ ೧ ಸಹಸ್ರಯೋಜನದಗಲವುಳ್ಳದಾಗಿ ಗಗನಚುಂಬಿಗಳಾಗಿ ಬೆ ಳೆದಿರುವ ಕಲ್ಪತರುಗಳಿಂದ ಒಪ್ಪುತಲಿರುವ ಉಪವನವು ಶಿವನ ಇ ಮಾತ್ರದಿಂದ ನಿಶ್ಚಿತವಾಗಿ ಕಾಣಿಸಿತು. ಅಲ್ಲಲ್ಲಿಗೆ ತಿಳಿಗೊಳಗಳು ಹೂಜಾ ತಿಯ ಗಿಡುಬಳ್ಳಿಗಳು ಚಂದ್ರಕಾಂತಶಿಲೆಯ ಪೀಠಗಳು ಲತಾಗೃಹಗಳು ರಂಜಿಸುತ್ತಿರಲು, ಅದರ ಸೊಗಸನ್ನು ಪಾರ್ವತಿಯು ನೋಡಿ ಸಂತೋ। ಪಿಸಿ, ನಕ್ಕು, ಸ್ವಾಮಿಾ ! ತನ್ನ ಕರುಣಾಮೃತರಸವೃಷ್ಟಿಯಿಂದ ನನ ಗೆ ಯಾವ ಸುಖದ ಬೆಳಸುತಾನೇ ದುರ್ಲಭವಾಗಿರುವುದು ? ಎಂದು ಪತಿ ಯನ್ನು ಕುರಿತು ಕೇಳಿ, ಹರ್ಷಗೊಳಿಸುತ್ತ ಉಪವನದೊಳಗೆ ಸಂಚರಿ ಸುತ್ತಿರಲು, ಶಿವನು ರಮಣಿಯೆ ! ಈ ಉದ್ಯಾನಕ್ಕೆ ಚೈತ್ರರಥವೆಂದು ಹೆಸರು ; ಇದಕ್ಕೆ ಸದೃಶವಾದ ಉಪವನವು ತ್ರಿಭುವನದಲ್ಲಿ ಇಲ್ಲ : ಇದ ರಲ್ಲಿ ಬೆಳೆದ ಹೂವುಗಳಿಗೆ ನಿನ್ನ ನುಡಿಯ, ಆ ಮುಡಿಗೆ ಈ ಹೂವೂ ಒಂದಕ್ಕೊಂದು ಯೋಗ್ಯವಾದುವುಗಳು ; ಎಂದು ಹೇಳಿ, ಹೊಸಹೊಸ ಹೂಗಳನ್ನೆತ್ತಿ ತರಿಸಿ, ತನ್ನ ಬೆರಲುಗುರುಗಳಿಂದಲೇ ದೇವಿಯ ತಲೆಗೂದ