ಪುಟ:ಚೆನ್ನ ಬಸವೇಶವಿಜಯಂ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so ಚಿನ್ನ ಖಸಬೇಳವಿಜಯಂ (ಕಾಂಡ ೪) [ಅಧ್ಯಾಯ ವನ್ನು ಸೇರಿದರು, ಪಟ್ಟಣದಲ್ಲಿದ್ದ ಸಕಲರಾಕ್ಷಸತ್ತೊಮವೂ ತಮ್ಮ ಸಕಲಸಂಪತ್ತಿನೊಡನೆ ಭಸ್ಮಿಕೃತವಾಯಿತು. ತಾರಕಾಕ್ಷಾದಿ ಮೂರು ಮಂದಿ ಸಹೋದರರೂ ಮೊದಲು ತಮ್ಮ ಗುರುವು ಬೋಧಿಸಿದುದನ್ನು ಸ್ಮ ರಿಸೆ ತಪ್ಪಿಸಿಕೊಂಡು ಹೋಗಿ ಅವನನುಗ್ರಹವನ್ನು ಪಡೆದು ಬದುಕುವು ದೇ ತಮಗೆ ಶ್ರೇಯಸ್ಕರವೆಂದು ತಿಳಿದು ಬಂದ್ರು, ಸ್ವಾಮಿಯ ಪಾದಾರ ವಿಂದಕ್ಕೆ ಸಾಷ್ಟಾಂಗವಾಗಿ ಮಣಿದು, ತಮ್ಮ ಪರಾಧವನ್ನು ಕ್ಷಮಿಸಬೇ ಕೆಂದು ಬೇಡಿದರು. ಭಕ್ತವತ್ಸಲನಾದ ಸ್ವಾಮಿಯು ಅವರ ಮೇಲೆ ಕೈ ಪೆಯಿಟ್ಟು, ನಿಮ್ಮಿಷ್ಟಾರ್ಥವೇನೆಂದು ಕೇಳಿದನು. ಆಗ ಅವರುಗಳು ನಿ ವ್ಯ ನಾದಸೇವೆಯನ್ನು ಮಾಡಿಕೊಂಡು ಕೈಲಾಸದ ದ್ವಾರವನ್ನು ಕಾದು ಕೊಂಡಿರುವಂತೆ ನಮಗೆ ಅನುಗ್ರಹಿಸಬೇಕೆಂದು ಬೇಡಿದರು. ಶಿವನು ಹಾಗೆಯೇ ಆಗಲಿ ಯೆಂದು ವರವಿತ್ತನು. ಬಳಿಕ ಅಂತರಿಕ್ಷದಿಂದ ಪುಷ್ಪ ವೃಷ್ಟಿ ಯು ಸುರಿದಿತು. ಶಿವಗಣಂಗಳು ಜಯಜಯಧ್ಯಾನವನ್ನು ಮಾಡಿ ದಳು. ದೇವತೆಗಳು ಜಯದುಂದುಭಿಯನ್ನು ಬಾರಿಸಿದರು. ಹರಿಬ್ರಹ್ಮ ರುಗಳು ಶಿವನನ್ನು ಕೊಂಡಾಡುತ್ತಿದ್ದರು. ಸಕಲ ಮನು ಮುನಿ ಕಿನ್ನರ ಕಿಂ ವರಪಾದಿಗಳೆಲ್ಲರೂ ಇಂದು ಬದುಕಿದೆವೆಂದು ಶಿವನ ಪಾದಕ್ಕೆ ಮಣಿ ದರು ಆಗ ಪರಶಿವನು ಸಕಲಪರಿವಾರದೊಡನೆ ಕೂಡಿ ಕೈಲಾಸದ ಕಡೆ ಗೆ ಹಿಂದಿರುಗಿದನು. ಎಂದು ಚೆನ್ನಬಸವೇಶನು ನುಡಿದ ನೆಂಬಿಲ್ಲಿಗೆ ನಾಲ್ಕ ನೆ ಅಧ್ಯಾಯವು ಸಂಪೂರ್ಣವು. - **** - ೫ ನೆ ಅಧ್ಯಾಯವು. -ಶಿ ವ ವ ನ ವಿ ಹಾರೋ ತ್ಸ ವ ವು - ಎಲೆ ಸಿದ್ದರಾಮೇಶನೆ ಕೇಳು,– ಶಿವನು ಪಾರತೀಸಮೇತನಾ ಗಿ ಮ ದರಪಂತದಲ್ಲಿ ವಾಸವಾಗಿರುತ್ತಿರಲು, ಪುಷ್ಪದತ್ತನೆಂಬ ಹೂವ ೪ಗನು ಪ್ರತಿದಿನ ನಾನಾಲೋಕಗಳಲ್ಲಿ ತಿರುಗಿ, ಸುಗಂಧಕುಸುಮ ಗಳನ್ನೆತ್ತಿ ತಂದು, ಮಾಲೆಯನ್ನು ಕಟ್ಟಿ, ಪಾರತೀದೇವಿಯ ಮುಡಿ