ಪುಟ:ಚೆನ್ನ ಬಸವೇಶವಿಜಯಂ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಿಪುರಸಹ್ಯಾರವು ಅತಿ? ದಿಕ್ಕುದಿಕ್ಕಿಗೆ ಪಲಾಯನಗೊಂಡರು, ರಕ್ತಪ್ರವಾಹದಲ್ಲಿ ಮುಳುಗುತ್ತಲೂ ತೇಲುತ್ತಲೂ ಕೊಚ್ಚಿ ಹೋಗುತ್ತಿರುವ ತಲೆಬುರುಡೆಗಳಿಂದಲೂ, ಗುಡ್ಡೆ ಯಾಗಿ ಬಿದ್ದಿರುವ ತೋಳೋಡೆ ಕಾಲುಕ್ಕೆಗಳಿಂದಲೂ, ನರಳುತ್ತಿರುವ ಅರೆಹೆಣಗಳಿಂದಲೂ, ಕರುಳು ಮಾಂಸಗಳ ಕಿಗಳಿಂದಲೂ, ಕಡಿದು ಮುರಿದು ಬಿದ್ದಿರುವ ಆಯುಧಗಳಿಂದಲೂ, ಹರಕು ಮುರುಕು ಚೂರು ನುಗ್ಗಾಗಿ ಬಿದ್ದಿರುವ ಛತ್ರಚಾಮರಧಜಪತಾಕಗಳಿಂದಲೂ ರಣರಂಗವು ಭ ಯಂಕರವಾಗಿದ್ದಿತು. ಓಡುವ ರಾಕ್ಷಸರನ್ನು ಕಂಡು ದಿಕ್ಕಾಲಕಾದಿದೇ. ವತೆಗಳು ಅಟ್ಟಿಸಿಕೊಂಡು ಹೊಗುತ್ತಿದ್ದರು. ರಕ್ಕಸರು ಹೆಣಗಳನ್ನು ತಳಿದುಕೊಂಡು ರಕ್ತವನ್ನು ಹಾಯ್ದು ಎಡಹುತ್ತ ಮುಗ್ಗರಿಸುತ್ತ ಕುಂ ಟ , ಕೆಮ್ಮು ಹಿಂತಿರುತಿರುಗಿ ನೋಡುತ್ತ, ಬಾಯ್ದೆ ಬಂದಂತೆ ದೇವತೆ ಗಳನ್ನು ಬೈಯುತ್ತ, ಗಟ್ಟಗುಡ್ಡಗಳಿಗೆ ಓಡಿಹೋದರು. ತಾರಕಾಕ್ಷ ವಿ ದ್ಯುನ್ಮಾಲಿಗಳು ತಲೆಯುಳುಹಿಕೊಂಡು ತ್ರಿಪುರವನ್ನು ಹೊಕ್ಕರು. ರಕ್ತ ಸ ಕೋ ವೆಯ ಬಾಗಿಲುಗಳನ್ನು ಮುಚ್ಚಿ ಅಗಳುಗಳಲ್ಲಿ ನೀರನ್ನು ತುಂ ಬೆ, ಅಳ್ಳೆಯ ಮೇಲೆ ಹತ್ತಿ, ಆಯುಧಾ ದಿಗಳನ್ನ ಅಣಿಮಾಡಿಕೊಂಡು ನಿಂತರು. ಇತ್ತ ಶಿವನಸೆನೆಯು ತ್ರಿಪುರದ ಕಡೆಗೆ ಅಟ್ಟಿಸಿಕೊಂಡು ಹೊಗೆ ಕೋಟೆಯ ನಾಲ್ಕು ಕಡೆಗೂ ಮುತ್ತಿಗೆಯನ್ನು ಹಾಕಿತು. ಜಯ <ಕಹಳೆಗಳನ್ನು ಸಿಗದರು. ಪರಶಿವನು ದೂರದಲ್ಲಿ ನಿಂತು ಅನಿ ಮೇ ಸದೃಷ್ಟಿಯಿಂದ ತ್ರಿಪುರಗಳ ನಿಲ್ಲುವಿಕೆಯನ್ನೂ ಅವುಗಳ ಕೀಲನ್ನೂ ಗುರಿಯಿಟ್ಟು ನೋಡುತ್ತಿದ್ದನು. ಅಲ್ಲಿಗೆ ದೇವಮಾನದ ೧ ಸಹಸ್ರ ವರ್ಷ ಗಳು ಸರಿಯಾಗಿ ತುಂಬಲು, ತಿರುಗುವಿಕೆಯನ್ನು ಬಿಟ್ಟು ತ್ರಿಪುರಗಳು ಒಂದಾದವು. ಆ ಸಮಯಕ್ಕೆ ಸರಿಯಾಗಿ ಶಂಕರನು ಧನುಸ್ಸಿನಲ್ಲಿ ಪಾಶುಪ ತಬಾಣವನ್ನು ತೊಟ್ಟು ಕಾಂತವಾಗಿ ಸೆಳೆದು ಅವುಗಳ ಕೀಲಿಗೆ ಪ್ರ ಯೋಗಿಸಿ ದನು. ಅದು ಜಗತ್ತನ್ನೆಲ್ಲ ಜಾಲೆಯಿಂದ ಉರಿಸುತ್ತ ಹೋಗಿ ಖಣಿಖಣಿಲೆಂದು ಹೊಡೆದು ತ್ರಿಪುರಗಳನ್ನು ಭೇದಿಸಿ ಮಹಾಗ್ನಿಯಿಂದ ಪ ಟ್ಟಣವ ಇಲ್ಲಿ ಬೇಯಿಸಿತು, ಅದರೊಳಗೆ ಶಿವಭಕ್ತಿಸಾಂದ್ರವಾಗಿದ್ದ ಮೂ ವರು ಶಿವಯೋಗಿಗಳು ಮಾತ್ರ ಅಗ್ನಿ ತಪ್ತರಾಗದೆ ಶಿವಕಾರುಣ್ಯದಿಂದ ತನ್ನ ಮಂದಿರಗಳ ಸಮೇತವಾಗಿ ಭೂತಲಕ್ಕಿಳಿದು ಬಂದು ಶಿವನ ಪಾದ