ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫v ಒಂ ಚನ್ನಬಸವೇಶವಿಜಯಂ (ಕಾಂಡ ೪) [ಅಧ್ಯಾಯ ಲೂ, ಅಂಕುಶದಿಂದ ಚುಚ್ಚುತ್ತಲೂ, ಬಾಣಗಳಿಂದ ನಡುತ್ತಲೂ, ಲಯ ಗೊಳಿಸುತ್ತ ಬಂದರು. ಒಂದುಕಡೆಯಲ್ಲಿ ಕಮಲಾಕ್ಷ ಜಂಭಾಸುರರೂ, ಮತ್ತೊಂದು ಕಡೆ ವಕ್ರನಾಭನೂ, ಬೇರೊಂದುಕಡೆ ಸುಭಟವಿದ್ಯುತ್ಕಾಲಿ ಗಳೂ, ಮಗುಳೊಂದುಕಡೆಯಲ್ಲಿ ಶುಂಭಾಸುರನೂ, ಇನ್ನೊಂದತಾಣ ದಲ್ಲಿ ತಾರಕಾಕನೂ ನುಗ್ಗಿ ದೇವಸೇನೆಯನ್ನು ತರಿದು ತರುಬುತ್ತ ಹೋ ದರು. ಈ ರಕ್ಕಸನ ಊಪಟಲವನ್ನು ತಾಳಲಾರದೆ ದೇವತೆಗಳು ಕಂಗೆ ಟ್ಟು ಹಿಂದಿರುಗಿ ಓಡಿದರು. ಇದನ್ನು ದೇವೆಂದ್ರನು ಕಂಡು, ಈ ಮ ಹಾಕ್ಕೂ ರದೈತ್ಯರ ಹತಿಯನ್ನು ತಡೆಯುವುದಕ್ಕೆ ಇನ್ನು ನವಿಂದಸಾಧ್ಯ ವೆಂದು ಯೋಚಿಸಿ, ಪರಶಿವನ ಬಳಿಗೆ ಓಡಿಹೋಗಿ,ಪ್ರಭವೆ, ದೇವತೆ ಗಳು ಹಿಮ್ಮೆಟ್ಟಿದರು ; ರಾಕ್ಷಸರ ಶೌದ್ಧವು ಪ್ರಬಲತರವಾಗಿದೆ ; ಇ ದೊ ನಮ್ಮ ಸವಿಾಪಕ್ಕೆ ಅಟ್ಟಿಸಿಕೊಂಡುಬರುತ್ತಿದ್ದಾರೆ ; ಎಂದು ಬೆನ್ನೈ ಸಿದನು. ಶಿವನು ತನ್ನ ನೆರೆಯಲ್ಲಿ ನಿಂತಿದ್ದ ನಂದೀಶ ಶೃಂಗೀಶ ವೀರೇಶ ಪ್ರಣಖ ಗಜಾನನ ಭೈರವಾದಿಗಳನ್ನು ಕಡೆಗಣ್ಣಿನಿಂದ ನೋಡಿದನು. ಆ ಕೂಡಲೇ ಅವರು ಹಸಾದವೆಂದು ನುಡಿದು ನಮಸ್ಕರಿಸಿ ತಮ್ಮ ತಮ್ಮ ಸೈನ್ಯದೊಡನೆ ಕೂಡಿ, ತಾರಕಾಕ್ಷನ ಸೇನೆಗೆ ಇದಿರಾದರು, ದೇವತೆಗಳ ಸೇನೆಯಲ್ಲಿ ಮತ್ತೆ ಮಹಾಯುದ್ಧದ ಭೇರೀನಾದವಾಯಿತು. ಕಹಳೆಗಳು ಭೋರೆಂದುವು, ವೀರೇಶನು ಕಮಲಾಕ್ಷನನ್ನು ತಡೆದನು, ಕುಮಾರಸ್ವಾ ಮಿಯು ವಿದ್ಯುನ್ಮಾಲಿಗೆ ಇದಿರಾದನು, ನಂದೀಶಸ ಶುಂಭಾಸುರನನ್ನು ಪ್ರತಿಭಟಿಸಿವನು, ಇವನು ಜಂಭಾಸುರನನ್ನು ಕೆಣಕಿದನು. ಭೈರವ ನು ತಾರಕಾಕ್ಷನನು ನಿಲ್ಲಿಸಿದನು. ಹೀಗೆ ಒಬ್ಬರಿಗೊಬ್ಬರು ಪ್ರತಿಭಟಿಸಿ ನಾನಾಯುಧಗಳಿಂದ ಸೆಣಸಹತ್ತಿದರು, ಅಧಮ್ಮ ಪ್ರಾಬಲ್ಯದಿಂದ ಜಯಲ ಓಯು ಕಟಾಕ್ಷಕ್ಕೆ ದೂರರಾಗಿದ್ದ ರಾಕ್ಷಸರ ಬಲವು ಧರಾವತಾರಿಗಳಾ ದ ಶಿವಪಕ್ಷದವರ ಮುಂದೆ ಕ್ಷಣಕ್ಷಣಕ್ಕೆ ಕುಗ್ಗುತ್ತ ಬಂದಿತು. ವೀರೇಶ ನಂದಿಶ ಕುಮಾರಾದಿಗಳ ಬಾಣಹತಿಯು ರಕ್ಕಸರ ಎದೆಯನ್ನು ಬಿರಿಸಿ, ಮೈಯನ್ನೆಲ್ಲ ಗಾಯಗೊಳಿಸಿ ರಕ್ತದಿಂದ ತೋಯಿಸಿ, ಮೂರ್ಛಾಗತರನ್ನು ಮಾಡಿತು. ರಕ್ಕಸರ ಸೇನೆಯು ದವಾಗ್ನಿಯ ಮುಂಗಡೆಯ ತರಗೆಲೆಗಳಂ ತ ಲಯಗೊಂಡಿತು. ದೈತ್‌ನಾಯಕರಲ್ಲಿ ಹರಣವನುಳುಹಿಕೊಂಡವರು