ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ܐܳ ಶಿವವನವಿಹಾರೋತ್ಸವವು ತಿದ್ದುವು, ಕೆಂಪುಚಿಗುರುಗಳಮೇಲೆ ಅವರ ಕಣ್ಣಿನ ಕಾಂತಿಯು ಬಿದ್ದರೆ ಅವು ಬಿಳಿಯ ಚಿಗುರಿನಂತೆ ತೋರುತ್ತಿದ್ದುವು. ಹೊಂಬಣ್ಣದ ಹಣ್ಣುಗಳು ಅವರ ತುಟಿಯ ಕಾಂತಿಯಿಂದ ಕೆಂಬಣ್ಣವಾಗಿ ಒಪ್ಪುತ್ತಿದ್ದುವು. ಇದ ರಿಂದ ದೇವನಾರಿಯರು ಒಂದನ್ನು ಮತ್ತೊಂದುವಿಧವಾಗಿ ಮಾಡಿ ತೋರಿ ಸುವ ಯಕ್ಷಿಣಿಗಾರಿಯರಂತೆ ತೋರುತ್ತಿದ್ದರು, ಮತ್ತೂ ತಿಲಕವೃಕ್ಷ ವನ್ನು ಕಣ್ಣಿನಿಂದ ನೋಡಿಯೂ, ಗೋರಂಟೆಯನ್ನು ಮೊಲೆಗಳಿಂದೊತ್ತಿ ಯೂ, ಪಾದರಿಗಳನ್ನು ಬಾಯ್ದಿಟ್ಟು ನಕ್ಕೂ, ಕಡಹದ ಮರವನ್ನು ದೇ ಹದಿಂದ ಸೋಂಕಿನಿಯ, ಕಬ್ಬನ್ನು ಸರಸದಿಂದ ಜರೆದೂ, ಅಶೋಕ ವೃಕ್ಷವನ್ನು ಅಂಗಾಲಿನಿಂದೊದೆದೂ, ಹವಳದ ಹೂವಿನ ಮರವನ್ನು ತುಟಿ ಯಿಂದುಗಿದೂ, ಸುರಗಿಯ ಮರವನ್ನು ಇಂಪಾದ ದನಿಯಿಂದ ಹಾಡಿಯೂ, ಬೆಟ್ಟದಾವರೆಯನ್ನು ಅದರ ಗುಣಾತಿಶಯವನ್ನು ಕೊಂಡಾಡಿಯೂ, ಪಾರಿ ಜಾತವನ್ನು ಮೃದುವಚನಗಳಿಂದ ಮಾತನಾಡಿಸಿಯೂ, ಹೂವನ್ನು ಬಿಟ್ಟು ಚಿಗುರೇರುವಂತೆ ಮಾಡುತ್ತಿದ್ದರು, ಗಣಿಗಲೆ ಸುರಹೊನ್ನೆ ಪಗಡೆ ಸಂಪಗೆ ಸೇವಂತಿಗೆ ಮಲ್ಲಿಗೆ ಮೊಲ್ಲೆ ಮಾದರಿ ಗೋರಂಟೆ ಪಾರಿಜಾತ ತಾಳೆ ಗುಲಾ ಬಿ ನಾಗಸಂಪಗೆ ಮಾವು ಬೆಟ್ಟದಾವರೆ ನೈದಿಲು ಕೆಂದಾವರೆ ಮೊದಲಾದ ಪುಷ್ಪಗಳನ್ನೆಲ್ಲ ಎತ್ತಿ ತಂದು ಪಾರತೀಪರಮೇಶ್ವರರಿಗೆ ಒಪ್ಪಿಸಿದರು. ಅದನ್ನೆಲ್ಲ ಪರಿಗ್ರಹಿಸಿ ಶಂಕರನು ಸತೀಸಮೇತನಾಗಿ ವನದಲ್ಲಿ ವಿಹರಿಸುತ್ತ ಅದರ ಸೊಬಗಿಗೆ ತಲೆದೂಗುತ್ತ ಒಂದುಸರೋವರದ ಬಳಿಗೆ ಬಂದನು. ಅದು ರನ್ನಸೂನ್ನದ ಸೋಪಾನಗಳಿಂದಲೂ, ತೀರದ ಮೇಲಿರುವ ಚಂದ್ರ ಕಾಂತಶಿಲೆಯ ಮಂಟಪದಿಂದಲೂ, ತಿಳಿನೀರಿನಿಂದಲೂ, ನೈದಿಲು ತಾವರೆ ಗಳ ಸಾಲುಗಳಿಂದಲೂ, ಹಂಸಗಳ ಸಂಚಾರದಿಂದಲೂ, ತುಂಬಿಗಳ ಝುಂಕಾರದಿಂದಲೂ, ತೆರೆ ನೊರೆಗಳಿಂದಲೂ, ಮನೋಹರವಾಗಿದ್ದಿತು. ಜಲಕ್ರೀಡೆಗಾಗಿ ಶಿವನು ಸತಿಯೊಡನೆ ಕೊಳವನ್ನು ಹೊಕ್ಕನು, ಸಖಿಯ ರು ನವಿಲು ಹಂಸ ಗಿಳಿ ಕೋಗಿಲೆ ಗರುಡ ಕುದುರೆ ಆನೆ ಮೊದಲಾದುವು ಗಳ ಆಕಾರದ ಚಿನ್ನದ ಚೀರೊಳವೆಗಳನ್ನು ಪಿಡಿದು ನೀರಿಗಿಳಿದರು. ಒ ಬ್ಬರಮೇಲೊಬ್ಬರು ನೀರನ್ನು ಹೊಯ್ತಾ ಡಿದರು. ಶಿವಶಿವೆಯರು ವಿನೋ ದದಿಂದ ನೀರನ್ನೆರಚಾಡಿದರು. ಶಿವನ ಜಲವರ್ಸಣಕ್ಕೆ ಪಾರತಿಯು ಹಿಂ 84