ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಂಗಾಧರ ಲೀಲೆಯು o ೬ ನೆ ಅಧ್ಯಾಯವು. -- ಗ೦ ಗಾ ಧ ರ ಲೀ ಲೆ ಯು . ಎಲೆ ಸಿದ್ದರಾಮೇಶನೆ, ಮರುದಿವಸ ಪರಶಿವನು ಅಂತಃಪುರದಲ್ಲಿ ಪಾರತಿಯೊಡನೆ ಮಲಗಿದ್ದು, ತಾನೊಬ್ಬನೇ ಎದ್ದು ಬಾಗಿಲನ್ನು ತೆರೆದು ಹೊರಕ್ಕೆ ಹೊರಟು ಉಪವನದ ಸೊಗಸನ್ನು ನೋಡುತ್ತ ತಿರುಗಾಡುತ್ತಿ ದೈನು, ಇದಿರಿನಲ್ಲಿ ಒಂದುಮಾವಿನ ಮರವು ಚಿಗುರಿನಿಂದಲೂ, ಹೂವು ಹೀಚು ಕಾಯಿಗಳಿಂದಲೂ ತುಂಬಿ ಮನೋಹರವಾಗಿ ಕಾಣುತ್ತಿದ್ದಿತು. ಅದರಮೇಲೆ ತುಂಬಿಗಳು ಕೋಗಿಲೆಗಳು ತುಂಬಿಕೊಂಡು ಧನಿಗೈಯುತ್ತಿ ದ್ವು ವು. ಶಿವನು ಅದರ ಬಳಿಗೆ ಬಂದು, ಕೆಳಗೆ ಹಾಕಿದ್ದ ಚಂದ್ರಕಾಂತ ಶಿಲೆಯ ಜಗತಿಯಮೇಲೆ ಕುಳಿತುಕೊಂಡು, ವನದ ಚೆಲ್ವಿಕೆಯನ್ನು ನೋ ಡುತ್ತಿದ್ದನು, ಆ ಮರದಮೇಲೆ ಗೂಡುಕಟ್ಟಿಕೊಂಡಿದ್ದ ಮೃದುವಾಣಿ ಯೆಂಬ ಹೆಣ್ಣಿ ಳಿಯು, ತನ್ನ ಪ್ರಾಣಕಾಂತನಾದ ಮಧುಮಿತ್ರನೆಂಬ ಗಂ ಡುಗಿಳಿಯು ಕಳೆದರಾತ್ರಿ ಮನೆಗೆ ಬರದೆ ಇದ್ದುದನ್ನು ಕಂಡು ಖೇದಗೊಂ ಡು, -ಅಯ್ಯೋ ! ನನ್ನ ನಾಯಕನನ್ನು ಬೆನ್ನು ನುಂಗಿತೋ ! ಬೇಡರು ಬ ಲೆಯೊಡ್ಡಿ ಹಿಡಿದರೋ ! ಕಲ್ಲಿನೇಟಿನಿಂದ ರಕ್ಕೆ ಮುರಿದುಕೊಂಡು ಹಾರ ಲಾರದೆ ಕುಳಿತಿರುವುದೋ ! ಇನ್ನಾವುದಾದರೂ ಹೆಣ್ಣು ಗಿಳಿಯ ರೂಪ ಯವನಾದಿಗಳನ್ನು ನೋಡಿ ಮೊಹಿಸಿ ಅದರ ಠಕ್ಕಿಗೊಳಗಾಗಿ ನಿಂತಿ ತೋ?! ಎಂದೂ ನಿಲ್ಲದೆಯಿರುತ್ತಿದ್ದ ರಮಣನು ಈಗ ತಪ್ಪಿಸಿಕೊಳ್ಳುವುದಕ್ಕೆ ಕಾರಣವೇನು ? ಅಯ್ಯೋ ! ವಿಧಿಯೆ ! ಹಾ ! ಎಂದು ಹಂಬಲಿಸಿ, ಕ ಣ್ಣೀರನ್ನು ಸುರಿಸುತ್ತಿದ್ದಿತು, ತನ್ನ ಪತಿಯ ಸದ್ದು ಎಲ್ಲಿಯಾದರೂ ಕೇಳಿ ಸುವುದೇ ಎಂದು ಒಂದು ಬಾರಿ ಕಿವಿಗೊಟ್ಟು ಸುತ್ತಲೂ ಆಲಿಸುವುದು ; ಮತ್ತೊಂದುಬಾರಿ ದಾರಿ ದಾರಿಯನ್ನು ನೋಡುವುದು ; ಮತ್ತೊಂದಾವೃ ತಿ ರೋದಿಸುತ್ತ ಗೂಡಿನೊಳಗೂ ಹೊರಗೂ ತಿರುಗುವುದು ; ಎಲ್ಲೆಲ್ಲೂ ನಿಲ್ಲದೆ ರಕ್ಕೆಗಳನ್ನು ಜೋಲುಬಿಟ್ಟು ಆಹಾರವನ್ನು ತ್ಯಜಿಸಿ ನಿಟ್ಟುಸುರ ನ್ನು ಬಿಟ್ಟು, ಹಾ ರಮಣಾ ! ನೀನು ನನ್ನ ಕಣ್ಣಿಗೆ ಮರೆಯಾದ ಬಳಿಕ