ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸಪೇಳದಿಜರು (ebಂದ ೪) [ಅಧ್ಯಾಯ ಲು, ಬ್ರಹ್ಮಾಂಡವನ್ನೆಲ್ಲ ತುಂಬಿ ತುಳುಕುತ್ತಿದ್ದ ನೀರು ಸುರನೆ ಸುರುಗಿ ಒಂದು ಮನೆಯಂತೆ ಜಟಾಗ್ರದಲ್ಲಿ ನೆಲಸಿತು. ಹೀಗೆ ಗಂಗೆಯನ್ನು ಧರಿ ಸಿದ ಶಿವನು ಗಂಗಾಧರಲೀಲೆಯನ್ನು ಅನುಭವಿಸಿದನು, ಬಳಕ ಕರುಣ ದಿಂದ ಜಗತ್ತಲ್ಲ ಎಂದಿನಂತೆ ಉದ್ಭವಿಸಲಿ ಎಂದು ಅನುಗ್ರಹಿಸಿದನು: ಸುಠ ನರೋರಗ ಯಕ್ಷ ರಾಕ್ಷಸಖಗಮೃಗವಿಲಿಕಾದಿಗಳೆಲ್ಲವೂ ಜಗತ್ತಿನಲ್ಲಿ ತುಂಬಿ ತಮ್ಮ ತಮ್ಮ ಕಾದಲ್ಲಿ ತೊಡಗಿದುವು; ಎಂದು ಚೆನ್ನಬಸವೇ ಶನು ಹೇಳಲು, ಸಿದ್ದರಾಮೇಶನು ಕೇ೪; ಆಶ್ಚರಪಟ್ಟು, ಗುರುವೆ ! ಈ ದೊಡ್ಡ ಮರುಪ್ರಳಯಗಳಿಂದ ಲೋಕವೆಲ್ಲ ಅಳಿದುಹೋದಾಗ ಶಿವ ನು ಎಲ್ಲಿ ಹೇಗೆ ನಿಂತಿದ್ದನು ? ಎಂದು ಕೇಳಿದನು. ಚನ್ನಬಸವೇಶನು ಅದಕ್ಕೆ ನಕ್ಕು, ಎಲೆ ಸಿದ್ದರಾಮನೇ ! ಆ ಸ್ವಾಮಿಯು ಹುಬ್ಬಿನ ಕೊನೆ ಮನ್ನು ಸ್ವಲ್ಪ ಅಲುಗಿಸಿದ ಮಾತ್ರದಿಂದಲೇ ಈ ಜಗತ್ತೆಲ್ಲವನ್ನೂ ಲಯ ಗೊಳಿಸಿ ಸೃಷ್ಟಿಸುವನು, ಅಂಥವನಿಗೆ ಇದಾವ ಮಹಾಶ್ಚರೈ ? ಅತ್ತಿಯ ಮರದಲ್ಲಿ ಕಾಯಿಗಳು ಕಚ್ಚಿರುವಂತೆ ಆ ಮಹಾದೇವನ ರೋಮಕೂಪ ಗಳಲ್ಲೆಲ್ಲ ಅನಂತಬ್ರಹ್ಮಾಂಡಗಳು ತುಂಬಿರುವುವು. ಮರದ ಹಣ್ಣುಗಳು ಕಳತು ಬಿದ್ದು ಹೋದನಂತರ ಬರುವ ವರ್ಷಕ್ಕೆ ಅದರಂತೆಯೇ ಮತ್ತೆ ಬೇರೆ ಕಾಯಿಗಳು ಮಡಿ ಹೇಗೆ ತುಂಬಿಕೊಳ್ಳುವುವೋ ಹಾಗೆ ಕಾಲ ಕಮದಿಂದ ಅಳಿದ ಪ್ರಪಂಚವು ಮತ್ತೆ ಶಿವನ ಇಚ್ಚಾಮಾತ್ರದಿಂದುದ್ಭವಿ ಸುವುದು, ಶಿವನ ಲೀಲಾವಿಶೇಪಕ್ಕೆ ಇದಾವ ಘನವು ? ಅಂತಹ ತ್ರಿಪಳ ಯಗಳಲ್ಲಿ ಶಿವನು ಕತ್ತಲೆಯ ಮನೆಯಲ್ಲಿ ರತ್ನ ದೀಪವಿರುವಂತೆಯೂ, ಕಾಳ್ ಚ್ಚು ಮುತ್ತಿರುವ ಕೊಳದಂತೆಯೂ, ಸಮುದ್ರವು ಸುತ್ತುವರಿದಿ ರುವ ಬಡಬಾಗ್ನಿಯಂತೆಯೂ ಅವುಗಳ ಬಾಧೆಗೆ ಸಿಕ್ಕಿದೆ, ಉಪವನದ ಚಂದ್ರಕಾಂತಶಿಲೆಯ ಜಗತಿಯಮೇಲೆಯೇ ಶರತೀಸಮೇತನಾಗಿ ಕುಳ ತು ನಲಿಯುತ್ತಿದ್ದನು. ಅವನ ಮಾಹಾತ್ಮವನ್ನು ವರ್ಣಿಸುವುದಕ್ಕೆ ಯಾ ರಿಂದಾಗುವುದು ? ಎಂದು ಹೇಳಿದನೆಂಬಿಲ್ಲಿಗೆ ಆರನೆ ಅಧ್ಯಾಯವು ಸಂ ಈFವು.