ಪುಟ:ಚೆನ್ನ ಬಸವೇಶವಿಜಯಂ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಧಕಾಸುರಪ್ರವಿಳ್ಳವು ಮತ್ತೂ ಆತನೇನು ಸಾಮಾನ್ಯನೆ ? ಉರುಲಿಂಗಾಕಾರದಿಂದ ಹರಿಬ್ರಹ್ಮರ ಕಲಹವನ್ನು ಅಡಗಿಸಿದನು ; ಅಹಂಕಾರದಿಂದ ಮೆರೆಯುತ್ತಿದ್ದ ಬ್ರಹ್ಮನ ತಲೆಯನ್ನು ಚಿವುಡಿದನು ; ತನ್ನ ಅಗ್ನಿನೇತ್ರದಿಂದ ಕಾಲಕಾಮತ್ರಿಪುರಗಳ ನ್ನು ಸುಟ್ಟು ಹಾಕಿದನು; ತನ್ನ ೭ ದಿನದ ಕಂದನಿಂದ ತಾರಕಾಸುರನನ್ನು ಕೊಲ್ಲಿಸಿದನು; ಜಲಂಧರಾಸುರನನ್ನು ಕಾಲಿನ ಬೆರಲಿನಿಂದ ಬರೆದ ಚಕ್ರದಿಂ ದಲೇ ಕತ್ತರಿಸಿಹಾಕಿದನು, ನಮ್ಮಿಬ್ಬರ ತಂದೆಗಳನ್ನೂ ಕೊಂದ ಹರಿಯುವ ರಾಹನಿಹ್ರಾಕಾರಗಳಿಂದ ಜಗತ್ಕಂಟಕನಾಗಿರಲು ಶಿವನು ಆ ಹಂದಿಯನ್ನು ನೀ೪, ನಿಕ್ಕನನ್ನು ತನ್ನ ಮಗನಿಂದ ಕೊಲ್ಲಿಸಿದನು. ಹೀಗೆ ಆತನಿಗೆ ದುಪ್ಪ ನಿಗ್ರಹಶಿಷ್ಟ ಪರಿಪಾಲನವೇ ಕಾರವಾಗಿರುವುದು, ಅವನ ಇಚ್ಛಾಮಾತ್ರದಿಂ ದಲೇ ಅಗಣಿತಬ್ರಹ್ಮಾಂಡಗಳೂ ವಿಷ್ಣುಬಹೇಂದ್ರಾದಿಗಳೂ ಹುಟ್ಟಿ ಅಲ್ಲ ವರು, ಈ ಸೃಥಿವಿ ಅಪ್ಪು ತೇಜಸ್ಸು ವಾಯು ಆಕಾಶಗಳೆಲ್ಲ ಅವನ ಶರೀ ರನೇ; ಹೀಗಿರುವಲ್ಲಿ ಆ ಪರಮಾತ್ಮನೊಡನೆ ವಿರೋಧವನ್ನು ಕಟ್ಟಿಕೊಂ ಡರೆ ನೀನು ಬಾಳಬಹುದೆ? ಬೇಡ; ಅವನನ್ನು ನಾವು ಮರೆಹೊಕ್ಕರೆ ನಮಗೆ ಇಹಪರ ಸುಖಗಳೆರಡೂ ಲಭಿಸುವುವು ?” ಎಂದು ಹಿತೋಕ್ತಿಯ ನಾಡಲು, ಅಂಧಕಾಸುರನು ಕೇಳಿ, ಕಿಡಿಕಿಡಿಯಾಗಿ, ಎಲೋ ಹೇಡಿ ಯೆ ! ಇನ್ನೊಂದು ಕಣಿಯನ್ನು ಹೇಳುವುದಕ್ಕೆ ನಿನ್ನನ್ನು ಇಲ್ಲಿಗೆ ಕರೆದ ವರಾರು ? ಬಾಯಿ ದೊಡ್ಡದಾಗಿದೆಯೆಂದು ಪುರಾಣವನ್ನು ಬಿಚ್ಚಿದೆಯೆ ? ನೀನು ಹೇಳಿದ ಹರಿಬ್ರಹ್ಮಾದಿಗಳೆಲ್ಲ ಈ ಅಂಧಕಾಸುರನ ಮುಂದೆ ಏನಾ ಗಿರುವರೆಂಬುದನ್ನು ನೀನು ಕಾಣೆಯಾ ? ಈ ಭುವನಬ್ರಹ್ಮಾಂಡವನ್ನೆಲ್ಲ ನನ್ನ ಕಡೆಯ ಆಳುಗಳೇ ಆಳುತ್ತಿರುವಾಗ, ಆ ಗೊರವಶಿವನೊಬ್ಬನು ನನ್ನ ನೇನುಮಾಡಬಲ್ಲನು ? ಛೇ ! ೩ಳ! ಶೂರರಾದ ಮಹಾದೈತ್ಯರ ವಂಶ ದಲ್ಲಿ ಅಧಮನಾದ ನೀನೇಕೆ ಹುಟ್ಟಿದೆ ? ನನ್ನ ಮುಂದೆ ನಿಲ್ಲಬೇಡ, ಹೊ ಗು; ಎಂದು ಗಜರಿ, ತನ್ನ ಪಟುಭಟರ ಮುಖವನ್ನೆಲ್ಲ ಅವಲೋಕಿಸಿ, “ ನೋಡಿದಿರಾ ೩ಈ ಸಂಡನ ಮಾತನ್ನ ! ಕೈಲಾಸಪರ್ವತದಲ್ಲಿ ಯಾವನೋ ಮೂರುಕಣ್ಣಿನವನಿರುವನಂತೆ ! ಅವನು ಒಂದೆರಡು ಮೂರು ಊರುಗ ಳನ್ನು ಸುಟ್ಟವನಂತೆ! ಬಡಹಾರನ ತಲೆಯನ್ನು ಚಿವುಡಿದವನಂತೆ ! ನೀರಿ ನಲ್ಲಿದ್ದ ಒಂದು ವಿಾನನ್ನು ಸೀಳಿದನಂತೆ ! ಒಂದು ಹಂದಿಯನ್ನು ಕೊಂದ

  • M ೧