4 ಚಸದ d ಚನ್ನ ಬಸವೇಕನಿಜಯಂ (wಂಶ ೪) [ಅಧ್ಯಾಯ ನಂತ ! ಅರವಾನಿಸ (ನೃಸಿಕ್ಕ) ನನ್ನು ಕೊಂದನಂತೆ! ಬಡತಾರಕ ಮಾರ ಯಮರನ್ನು ನಾಶಗೊಳಿಸಿದನಂತೆ ! ಅವನಿಗೆ ನಾವೆಲ್ಲ ತಲೆಬಾಗಿ ನಡೆದು ಕೊಳ್ಳಬೇಕಂತೆ ! ಈ ಕುನ್ನಿಯ ಕೆನ್ನೆಗೆ ತಟ್ಟರಿ; ಅದಾವ ಮಹಾವೀ ರನು ನನ್ನ ಮುಂದೆ ನಿಂತು ಬದುಕಿ ಹೋಗುವನೋ ನೋಡಿಕೊಳ್ಳುತ್ತೇ ನ; ಭೇರಿಯನ್ನು ಹೊಡೆಯಿರಿ !” ಎಂದು ಆಜ್ಞಾಪಿಸಿ, ಸಭೆಯಿಂದೆದ್ದನು. ಹೊರಗೆ ಧಂಧಣಧಳಂಥಳವೆಂದು ಭೇರಿಯ ಕಬ್ದ ವಾಯಿತು. ಆ ಶಬ್ದಕ್ಕೆ ಕುಲಾತಲಗಳೆಲ್ಲ ನಡುಗಾಡಿದುವು. ಹಶ ರಥ ಪದಾತಿ ಚತುರಂಗ ಸೈನ್ಯವೂ ಆಯವಾಗಿ ನಿಂತಿತು. ಛತ್ರ ಚಾಮರ ಪತಾಕೆಗಳು ಇಂಬಿ ಲ್ಲದಂತೆ ತುಂಬಿದುವು. ಆಯುಧಗಳು ಜಳಪಿಸಿದುವು. ಧನುಸ್ಸುಗಳು ಠಂ ಕಾರಗೊಂಡುವು, ವೀರರ ಭುಜಾಸ್ಕಾಲನವು ಸಿಕ್ಕನಾದದೊಡನೆ ಕೂಡಿ ದೇವತೆಗಳ ಕಿವಿಗೆ ಅಪ್ಪಳಿಸಿದಂತೆ ಕೇಳಿ ಎದೆ ಬಿರಿಯಿಸಿದುವು. ಭೂಮಿ ಯೇ ಇದನ್ನು ಈದಿತೋ ಎಂಬಂತೆ ತೋರುತ್ತಿದ್ದ ಅಗಣಿತವಾದ ದೈತ್ಯ ಸೇನೆಯ ಪದಹತಿಗೆ ಧರೆಯು ಅದಿರುತ್ತಿದ್ದಿತು. ಒಂದು ಪದ್ಮ ಆನೆಗಳು, ೫ ಪದ್ಮ ಕುದುರೆಗಳು, ೧೦ ಪದ್ಮ ರಥಗಳು, ೨೨ ಪದ್ಮ ಕಾಲಾಳುಗ ಳನ್ನು ಒಬ್ಬೊಬ್ಬರ ವಶದಲ್ಲಿಟ್ಟುಕೊಂಡಿರುವ ಇಂತಹ ಸಾಮಂತ ರಾಕ್ಷ ಸರಾಜರು ಅಂಧಕಾಸುರನ ಕೈಕೆಳಗೆ vvಕೋಟಿ ಯಿದ್ದ ರು. ಈ ಮಹಾ ಸೇನೆಯ ಜತೆಗೆ ರಾಣಿವಾಸದವರು, ಸಖಿಯರು, ಅಡಿಗೆಯವರು, ಪಲ್ಲಕ್ಕಿ ಯ ಹೊರುವವರು, ವಾರಾಂಗನೆಯರು, ಹೂವಾಡಿಗರು, ಹಡಪದವರು, ಮಡಿವಳರು, ಗಾಣಿಗರು, ಗೌಳಿಗರು, ನೇಗೆಯವರು, ಕುಂಬಾರರು, ಓಜೆಗಳು, ಕಮ್ಮಾರರು, ಚಿಂಪಿಗರು, ಮುಚ್ಚಿಗರು, ಅಕ್ಕಸಾಲಿಗರು, ಸಾಣೆಗಾರರು, ಕಸ ಗುಡಿಸುವವರು, ನೀರನ್ನು ಹೊರುವವರು, ಗುದ್ದಲಿ ಕೊಡಲಿ ಹಾರೆಯವರು, ದೋಸೆ ಕಜ್ಜಾಯ ಕಡುಬು ರೊಟ್ಟಿ ಉಪ್ಪಿನ ಕಾಯಿ ಚಕ್ಕುಲಿ ಕಡಲೆ ಪುರಿ ಕಬ್ಬು ಮೊದಲಾದುವುಗಳನ್ನು ಸಾರಿ ಮಾ ರುವವರು, ಕವಿಗಳು, ವಿದ್ವಾಂಸರು, ಹಾಸ್ಯಗಾರರು, ವಾಗ್ನಿಗಳು, ಜ್ಯೋ ತಿಪ್ಪರು, ನಟರು, ಗಾಯಕರು, ವಿಟರು, ವಿದೂಷಕರು ಮೊದಲಾದ 48 ವಿದ್ಧಗಳನ್ನು ಬಲ್ಲವರೂ, ಬರವಣಿಗೆ, ವ್ಯಾಪಾರ, ಬೇಸಾಯ, ಆ ಯುಧಧಾರಣೆ, ಪಾಲನೆ, ಯಾಚನೆ, ಎಂಬ ಆರುವಿಧದ ವೃತ್ತಿಗ
ಪುಟ:ಚೆನ್ನ ಬಸವೇಶವಿಜಯಂ.djvu/೨೮೯
ಗೋಚರ