ಅಂಧಕಸಙ್ಖಾರಯುಡು ೧೩# ಳನ್ನು ಹಿಡಿದು ಜೀವಿಸುವವರೂ ಆದ ನಾಲ್ಕು ವರ್ಣದವರೂ ಹದಿನೆಂಟು ಜಾತಿಯವರೂ ನೂರೊಂದು ಕುಲದವರೂ ತಮ್ಮ ತಮ್ಮ ಉದ್ಯೋಗಗ ಳನ್ನು ಮಾಡಿಕೊಂಡು ದಂಡಿನೊಡನೆ ನಡೆಗೊಂಡರು. ಬಂಡಿಗಳ ಮೇಲೆ ಮದ್ದುಗಳು, ಬಿಲ್ಲು ಬಾಣಗಳು, ಕವಚ ಕಿರೀಟಗಳು, ಜೇನುಹಲ್ಲಣ ಗಳು, ಕಡಿವಾಣ ಹಗ್ಗಗಳು, ಮೃಗ ಪಕ್ಷಿ ಪಶುಜಾತಿಯ ಮಾಂಸಗಳು, ನಾನಾಜಾತಿಯ ಮದ್ಭಗಳು, ಹುರಿದಭಂಗಿ, ಜಾಯಿಕಾಯಿಪತ್ರೆ ಲವಂಗ ಕಸ್ತೂರಿ ಕೇಸರ ಪಚ್ಚಕರ್ಪೂರಗಳನ್ನು ಹಾಕಿ ಅರೆದ ಗುಳಿಗೆಗಳು, ಮೊ ದಲಾದ ಸಂಬಾರಗಳನ್ನು ಹೇರಿಕೊಂಡು ಹೋಗುತ್ತಿದ್ದರು, ಚಾಪೆಗಳು ಗೂಡಾರಗಳು ದವಸಗಳು ಮೊದಲಾದ ಪರಿಕರಗಳನ್ನು ಆನೆಗಳು ಒಂಟಿ ಗಳು ಹೊತ್ತಿದ್ದುವು. ಮುಂಗಡೆಯ ಆಳುಗಳು ಮರಗಳನ್ನು ತರಿದು ಹಳ್ಳಕೊಳ್ಳಗಳನ್ನು ಮುಚ್ಚಿ ಮಾರ್ಗಗಳನ್ನು ಸರಿಪಡಿಸಿಕೊಂಡು ಹೋ ಗುತ್ತಿದ್ದರು. ಇಂಥ ಮಹಾಸೇನೆಯು ಮೂರು, ಜಾವದವರೆಗೂ ನಡೆದು, ಅಲ್ಲಿಗೆ ಬೀಡುಬಿಟ್ಟು, ಭೋಜನಗೊಂಡು ಸುಖಶಯನದಿಂದ ಮಾರ್ಗಾ ಯಾಸವನ್ನು ಪರಿಹರಿಸಿಕೊಂಡು, ಬೆಳಗಾದಕೂಡಲೇ ಎದ್ದು ಮುಂದೆ ನಡೆ ಯತ್ತ ಕೈಲಾಸದ ಕಡೆಗೆ ಸಾಗುತ್ತಲಿದ್ದಿತು. ಎಂದು ಚೆನ್ನಬಸವೇಶನ ನುಡಿದನೆಂಬಿಲ್ಲಿಗೆ ೭ನೆ ಆಧ್ಯಾಯವು ಸಂಪೂರ್ಣವು. -ಇಸಿ Vನೆ ಅಧ್ಯಾಯವು. ಅ೦ ಧ ಕ ಸ ಸ್ಮಾ ರ ಯಾ ತ್ರೆ ಯು ಎಲೆ ಸಿದ್ದರಾಮೇಶನೆ ! ಅಂಧಕಾಸುರನು ಶಿವಲೋಕದ ಎಲ್ಲೆಯ ನ್ನು ಸೇರಿದಕೂಡಲೇ ತನ್ನ ಕಡೆಯ ಬುದ್ದಿವಂತನಾದ ಚಾರನೊಬ್ಬನನ್ನು ಕರೆದು, ನೀನು ಶಿವನ ಬಳಿಗೆ ಹೋಗಿ, ನನ್ನ ಶತ್ರುವಾದ ವಿಷ್ಣುವನ್ನು ಬಿಟ್ಟು ಕೊಟ್ಟು ಬಾಳುವನೋ, ಅಥವಾ ಯುದ್ಧಕ್ಕೆ ನಿಲ್ಲುವನೋ ಎಂಬು ದನ್ನು ಕೇಳಿ ತಿಳಿದುಕೊಂಡುಬಾರೆಂದು ಹೇಳಿಕಳುಹಿದನು. ಆತನು “ ಅಪ್ಪಣೆ ” ಯೆಂದು ಹೇಳಿ, ಕುದುರೆಯನ್ನೇರಿ, ವಾಯುವೇಗದಿಂದ
ಪುಟ:ಚೆನ್ನ ಬಸವೇಶವಿಜಯಂ.djvu/೨೯೦
ಗೋಚರ