ಪುಟ:ಚೆನ್ನ ಬಸವೇಶವಿಜಯಂ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

be ಚನ್ನಬಸತೇಕಏಜಯಂ (Fಂಡ೪) [ಅಧ್ಯಾಯ ಕೈಲಾಸಪುರಕ್ಕೆ ಹೋಗಿ, ಅರಮನೆಯ ಬಾಗಿಲಲ್ಲಿ ನಿಂತು, ತಮ್ಮ ರಾ ಜನ ಬಿರುದಾವಳಿಗಳನ್ನು ಹೇಳಿಕೊಂಡು, ತಾನು ಆತನ ಕಡೆಯ ದೂತ ನಂದು ತಿಳಿಸಲು, ಶಿವನಪ್ಪಣೆಯಮೇರೆ ದ್ವಾರಪಾಲಕನು ಈತನನ್ನು ಒಳಗೆ ಬಿಟ್ಟನು. ಚಾರನು ಶಂಕರನಿಗೆ ವಂದಿಸಿ,– “ ರಾಕ್ಷಸಾಧಿರಾಜ ನಾದ ಅಂಧಕಾಸುರಮಹಾರಾಜನು ದಿಗ್ವಿಜಯಕ್ಕಾಗಿ ಹೊರಟಿರುವನು, ಅವನ ಸೇನಾಗಮನವಾತ್ರದಿಂದಲೇ ಭೂಸಮುದ್ರಪರತವನಾದಿಗಳಲ್ಲ ಕಂವಿಸಿ ಒಣಗಿ ಧೂಳಿಯಾಗಿ ಉರಿದುಹೋಗಿರುವುವು. ದಿಗ್ಗ ಜಕೂರ ಶೇ ಮಾದಿಗಳು ಕೂಡ ತಲೆಬಗ್ಗಿ ನಿದುವು. ಆ ನಮ್ಮ ಪ್ರಭುವಿಗೆ ವೈರಿಯಾದ ವಿಷ್ಣುವನ್ನು ನೀವು ಮರೆಹಾಕಿಕೊಂಡಿರುವುದರಿಂದ ನಿಮ್ಮನ್ನೂ ಜೈಸು ವುದಕ್ಕಾಗಿ ಬರುತ್ತಿರುವನು, ನೀವು ವಿನಯದಿಂದ ಆ ಹರಿಯನ್ನು ಬಿಟ್ಟು ಕೊಡುವಿರೊ ? ಯುದ್ಧಕ್ಕೆ ನಿಲ್ಲುವಿರೋ ? ಎಂಬುದನ್ನು ಕೇಳಿ ತಿಳಿದು ಕೊಂಡುಬರುವುದಕ್ಕಾಗಿ ನನ್ನನ್ನು ಕಳುಹಿಕೊಟ್ಟಿರುವನು ?” ಎಂದು ವಿಜ್ಞಾಪಿಸಿದನು. ಇದನ್ನು ಕೇಳಿ ಹರಿಬ್ರಹ್ಮರ ಎದೆಯು ನಡುಗಿತು. ನಂದೀಶವೀರೇಶ್ವರಾದಿಗಳು ಕೇಳಿ ಕಿಡಿಕಿಡಿಯಾಗಿ ( ಇವನಾರು ಕುನ್ನಿ? ಬಗುಳುವ ಇವನ ನಾಲಿಗೆಯನ್ನು ಸೀಳಿ ಕರುಳನ್ನು ಬಗಿದು ಕಾಲಲ್ಲಿ ಹೊಸಗಿರಿ ?” ಎಂದು ಘುಡುಘುಡಿಸುತ್ತ ಎದ್ದು ಗರ್ಜಿಸಿದರು. ಆಗ ಶಿವನು- ಹೋ ಹೋ ನಿಲ್ಲಿರಿ; ಹೇಳಿದಂತೆ ಕೇಳಿ ನಡೆಯುವ ಬಂಟನ ಮೇಲೆ ನಿಮಗೇಕೆ ಸಾಹಸ ? ಅವನನ್ನು ಕೊಲ್ಲಬೇಡಿರಿ, ಎಂದು ತಡೆದು, ಬಳಿಕ ಚಾರನನ್ನು ಕುರಿತು ಎಲೋ ! ಹರಿಯತ್ತ ? ನಿನ್ನೊಡೆಯ ನೆತ್ತ ? ಅವನಿಗೆಷ್ಟು ಅಹಂಕಾರ ? ಧೈರವಿದ್ದರೆ ಅವನನ್ನೇ ಯುದ್ಧಕ್ಕೆ ಬರಹೇಳು, ಹೋಗು, ಎಂದು ಹೇಳಿ ಕಳುಹಿದನು, “ತನು ಬಂದು ರಾಕ್ಷಸರಾಜನೊಡನೆ ನಡೆದ ಸಂಗತಿಯನ್ನೆಲ್ಲ ಬಿನ್ನೈಸಿದನು. ಇದನ್ನು ಕೇ೪ ಅಂಧಕನ ರಕ್ತವು ಕಾದುಹೋಯಿತು. ಕಣ್ಣಿನಿಂದ ಕಿಡಿಗಳು ಸುರಿದುವು, ಕೈಲಾಸಗಿರಿಯನ್ನು ನಿಮಿಪಮಾತ್ರದಲ್ಲಿ ಸೂರೆಗೊಳ್ಳದೆ ಬಿಡು ವನೆ ? ಎಂದು ಗರ್ಜಿಸಿ, ತನ್ನ ಸೇನೆಗೆ ಹೊರಡಲಪ್ಪಣೆಕೊಟ್ಟನು. ಹಗಲುರಾತ್ರಿಯೆನ್ನದೆ ಮಹಾಸವು ನಡೆತರುತ್ತಿದ್ದಿತು, ಅರಲ್ಲಿ ಅಂಧಕನ ಹಾವಳಿಯಿಂದ ಸೂರೆಹೋದ ರಾಜ್ಯದ ಜನಗಳು ಓಡಿಬಂದು,