# ಚನ್ನ ಬಸವೇಕವಿಜಯಂ (Fಾಂಡ9) [ಅಧ್ಯಾಯ ತ್ವಾಗಬಹುದು ; ಮುಂಗಾಣದ ಈ ನಿನ್ನ ಪರಿವಾರದ ಮದ್ಯಸಾಯಿಗಳ ಮಾತನ್ನು ನಂಬಿ, ಭಾಂತಿಯಿಂದ ಕೆಟ್ಟು ಹೋಗದೆ, ಶಿವಪಾದವನ್ನು ಮ ರೆಹೊಕ್ಕು ಬಾಳು ; ಎಂದು ಮೂರುವೇಳೆ ಸಾರಿ ಸಾರಿ ನುಡಿದನು. ಆ ಮಾತು ಕಿವಿಗೆ ಬಿದ್ದ ಕೂಡಲೇ ಅಂಧಕನು ಕಿಡಿಕಿಡಿಯಾಗಿ, ಎಲೋ ಸುಂಡನೆ ! ಮಹಾಪರಾಕ್ರಮಿ ದೂರಾಲೋಚನಪರ ಎಂದು ನಿನ್ನನ್ನು ಇ ಲ್ಲಿಗೆ ಮಂತ್ರಾಲೋಚನೆಗೆ ಕರೆದವರಾರು ? ನಿನ್ನ ಯೋಗ್ಯತೆಗೆ ತಕ್ಕಮಾ ತನ್ನಾಡಿದೆ ! ಸಾಕು ಬಾಯ್ತು 1ು, ಎಂದು ತಿರಸ್ಕರಿಸಿ, ಗಗನಮರ್ಧಿ ಗೆ ಸೇನಾಧಿಪತಿಪಟ್ಟವನ್ನು ಕಟ್ಟಿ, ಆತನು ಯೋಚಿಸಿದಂತೆಯೇ ಯುದ್ಧ ಕಾಠ್ಯವನ್ನಾಗಮಾಡುವುದಕ್ಕೆ ವೀಳಯವನ್ನು ಕೊಟ್ಟು ಕಳುಹಿದನು. ರಾ ಕಸಸೇನೆಯು ಆನೆಗಳ ಗಂಟೆಗಳನ್ನು ಕಿತ್ತು ಪಂಜಗಳನ್ನಾರಿಸಿ, ವಾದ್ಯ ಗಳನ್ನು ಬಿಸುಟು, ಸದ್ದು ಬೆಳಕಿಲ್ಲದಂತೆ ಗುಪ್ತವಾಗಿ ಸರಸನ್ನಾಹವನ್ನೂ ಮಾಡಿಕೊಂಡು, ಈದಿನ ಜಯಾಪಜಯಗಳೆರಡರಲ್ಲೊಂದನ್ನು ಸಂಪೂರ್ ವಾಗಿ ಪಡೆದುಕೊಂಡುಬರುವುದೇ ಖಂಡಿತವೆಂದು ನಿರ್ಧರಿಸಿ, ಈಶ್ವರನ ಪಾಳಯದ ಸುತ್ತಲೂ ಮುತ್ತಿಗೆ ಹಾಕಿತು. ಮತ್ತೂ ಕಾವಲಿನವರಮೇಲೆ ಮಂಕುಬೂದಿಯನ್ನೂ ದಿ, ಬೇಲಿಗಳನ್ನೂ ತಡೆಕಟ್ಟೆಗಳನ್ನೂ ಹಾದು, ಪಾಳಯದ ಒಳಹೊಕ್ಕರು, ದೇವತೆಗಳೆಲ್ಲರೂ ನಿದ್ರಾಪರವಶರಾಗಿದ್ದರು. ಆಗ ದೈತ್ಯರು ಮನಸ್ಸಿಗೆ ತೋರಿದಂತೆ ದೇವತೆಗಳನ್ನು ಕತ್ತರಿಸುತ್ತ ಹೋ ದರು. ಮಲಗಿದ್ದವರನ್ನು ಹಾಗೆಯೇ ಕೊರಲನ್ನು ಕೊಯ್ದ ರು. ಕೆಲರ ತಲೆಯಮೇಲೆ ಕಲ್ಲುಗುಂಡುಗಳನ್ನು ಹಾಕಿದರು. ಕೆಲರ ಹೊಟ್ಟೆಯನ್ನು ತುಳಿದು ಸಾಯಿಸಿದರು, ಕೆಲರ ಕತ್ತನ್ನು ಕಿವುಚಿದರು, ಕೆಲರ ಎದೆಗೆ ಶೂಲವನ್ನು ನಟ್ಟರು, ಕೆಲರ ಗೂಡಾರಗಳಿಗೆ ಬೆಂಕಿಯನ್ನಿಟ್ಟರು. ಮೇಲೆ ಬಿದ್ದವರನ್ನು ಮೆಟ್ಟಿ ತುಳಿದರು. ಓಡುವವರನ್ನು ಅಡ್ಡಕಾಲ್ಗೊಟ್ಟು ಕೆಡ ಹಿ ತರಿದರು. ಹೀಗೆ ಗಣನಾತೀತವಾದಷ್ಟು ಕೊಲೆಗಳನ್ನು ಪರಿಪರಿಯಾಗಿ ಮಾಡಿದರು, ಅದರಂತೆಯೇ ಆನೆ ಕುದುರೆ ರಥಗಳನ್ನೂ ಹಾಳಾಡಿದರು. ಈ ಬೊಬ್ಬಾಟವು ಶಿವನ ಪಾಳಯದಲ್ಲೆಲ್ಲ ತುಂಬಿತು. ಆ ಸೇನೆಯವರೆ ಲ್ಲರೂ ಎದ್ದು , ಹೋ ! ಹೋ ! ಹಿಡಿ, ಕಿಡಿ, ಶತ್ರುಗಳು ! ಶತ್ರುಗಳು ! ಎಂದು ಅಬ್ಬರಿಸಿ, ತಮ್ಮ ತಮ್ಮ ಮೇಲೆಯೇ ತಾವು ಬಿದ್ದು, ಕಡಹಿ, ತಲೆಗೆ
ಪುಟ:ಚೆನ್ನ ಬಸವೇಶವಿಜಯಂ.djvu/೩೦೯
ಗೋಚರ