ಪುಟ:ಚೆನ್ನ ಬಸವೇಶವಿಜಯಂ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಂಧಕಾಸುರನಕ್ಕಾರವು ಅf? ದರಿ, ಭಾಂತರಾಗಿ ಓಡಾಡುತ್ತಿದ್ದರು. ಅವರವರಿಗೆ ಸಿಕ್ಕಿದ ವಾಹನ ಗಳನ್ನವರವರು ಹತ್ತಿ, ಸಿಕ್ಕಿದ ಆಯುಧಗಳನ್ನು ಹಿಡಿದು, “ ಎಲಎಲಾ, ಮೋಸಗಾರರಿರಾ ! ಇಂಥ ಅವೇಳೆಯನ್ನು ಸಾಧಿಸಿ, ಕೊಲ್ಲುವುದಕ್ಕೆ ಬಂ ದಿರಾ ? ಈ ಅಧರವು ನಿಮ್ಮನ್ನು ನಿಪಾತಗೊಳಿಸದೆ ಬಿಡುವುದೆ ? ” ಎಂ ದು ಮೊದಲಾಗಿ ಹೇಳುತ್ತ, ರಾಕ್ಷಸರಮೇಲೆ ಬೀಳುವ ಸಂಭ್ರಮದಲ್ಲಿ, ಕತ್ತಲೆಯಿಂದ ಕಣ್ಣಾಣದೆ ತನ್ನ ವರಮೇಲೆಯೇ ತಾವು ಕಾಯುತ್ತಿದ್ದರು. ಅಸ್ಟ್ರಲ್ಲಿ ಪ್ರಮಥಗಣರುದ್ರಗಣಾದಿಗಳೆಲ್ಲರೂ ಮಹಾಪ್ರಳಯಕಾಲದ ಮೇಘಗಳಂತೆ ಆರ್ಭಟಿಸಿಕೊಂಡಿದ್ದರು. ಚಾಮುಂಡಿ ವಾರಾಹಿ ಭೈರವಿ ದುರ್ಗಿ ಮೊದಲಾದ ಮಹಾಶಕ್ತಿಗಳೆಲ್ಲರೂ ಹುಲ್‌ ಡಿದು ಎದ್ದರು. ಎಲ್ಲಸೇನೆ ಯ ಕುಮಾರ ವಿರೇಶರ ಅಪ್ಪಣೆಯಮೇರೆ ಅತಿರೌದ್ರಾವೇಶದಿಂದ ದಾನವರಮೇಲೆ ಬಿದ್ದಿತು. ಹಿಡಿ, ಬಾಬು, ನುಂಗು, ಕತ್ತರಿಸು, ಕೋ ಯ, ನೂಕು, ಕಡಿ, ಕೊತ್ತು ಎಂದು ಮೊದಲಾಗಿ ಕೂಗುತ್ತ, ತರಿತರಿ ದು ರಕ್ಕಸರನ್ನುರುಳಿಸುತ್ತ, ರಕ್ತವನ್ನು ಹರಿಸುತ್ತ, ಹೆಣಗಳನ್ನೊಟ್ಟು ತುಬಿಕೊಂಡು ಹೋದರು. ರಾಕ್ಷಸರು ದೇವತೆಗಳ ಹೊಡೆತವನ್ನು ತಾ ಳಲಾರದೆ ಬೆನ್ನ ತೋರಿಸಿ ಓಡಹತ್ತಿದರು. ದೇವತೆಗಳು ಬಿಡದೆ ಅಟ್ಟಿಸಿ ಕೊಂಡುಹೋಗಿ, ಅಲ್ಲ ಕಡಿಕಡಿದು ಕೊಲ್ಲುತ್ಯ, ಮಹಾಲಯವನ್ನುಂಟು ಮಾಡಿದರು, ವೀರಭದ್ರನಸೇನೆಯ ಹಾವಳಿಯೂ, ಷಣ್ಮುಖನ ದಳದ ಈ ಪಟಲವೂ, ಗಣರಾಜನ ಬಲದ ಉಪದ್ರವವೂ, ಭೈರವನ ವಾಹಿನಿಯ ಕೋಲಾಹಲವೂ, ಶಕ್ತಿಗಳ ಅವಾಂತರವೂ, ದನುಜನರನ್ನು ಎದೆಗೆಡಿಸಿ ಪಾಳಯವನ್ನು ಹೊಕ್ಕಿಕೊಳ್ಳುವಂತೆ ಮಾಡಿದುವು. ಎತ್ತ ನೋಡಿದರೂ ರಾಕ್ಷಸರ ಭೀಕರರೋದನಧನಿಯೇ ಕೇಳಿಸುತ್ತಿದ್ದಿತು. ದೇವತೆಗಳು ದೈತ್ಯರ ಮಳಯವನ್ನು ಹೊಕ್ಕು, ಅಲ್ಲಿದ್ದ ಅವರ ಹೆಂಡಿರುಮಕ್ಕಳು ಮ ರಿಗಳ ನ್ನೆಲ್ಲ ಸೂರೆಮಾಡಿ, ಗೂಡಾರಗಳಿಗೆ ಬೆಂಕಿಯಿಕ್ಕಿ, ಕಟ್ಟಿದ್ದ ಆನೆ ಕು ದುರೆಗಳ ಹಗ್ಗಗಳನ್ನು ಕೊಯ್ದು , ಇದಿರುಬಿದ್ದವರನ್ನು ತರಿದು, ಕೋಲಾ ಹಲವಾಡುತ್ತಿದ್ದರು. ತಲೆಯುಳುಹಿಕೊಂಡುಹೋದ ರಾಕ್ಷಸರು ಅಂಧ ಕಾಸುರನೊಡನೆ ನಡೆದ ಸಂಗತಿಯನ್ನೆಲ್ಲ ಬಿನ್ನೆ ಸಿಕೊಂಡು ರೋದಿಸಿದ ರು, ಅವನ ಕಣ್ಣಿನಿಂದ ಕೋಪಾಗ್ನಿಯ ಕಿಡಿಗಳು ಸುರಿದುವು. ಮಾಡಿದ