ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಂಧಕಾಸುರಸಾರವು Ro೧. ೪, ಶಕ್ಕಾಯುಧವನ್ನು ತೆಗೆದು, ಗರಗರನೆ ತಿರುಗಿಸಿ, ದೈತೇಂದ್ರನ ಎದೆಗೆ ಗುರಿಕಟ್ಟಿ ಹೊಡೆದನು. ಗಿರಿಯಿಂದ ಸುರಿವ ನಿರ್ಝರದಂತೆ ಅವ ನೆದೆಯಿಂದ ರಕ್ತಪ್ರವಾಹವು ಹೊರಟು ಧೀಂಕಿಡುತ್ತಿದ್ದಿತು. ರಕ್ಕಸನು ದೊಪ್ಪನೆ ಭೂಮಿಯಮೇಲೆ ಬಿದ್ದು ಮೂರ್ಛಗೊಂಡನು, ಅಂಧಕನ ಪ್ರಾಣವು ಶಿವನ ಬಾಣಕ್ಕೆ ಈಡಾಗಬೇಕಾಗಿರುವುದರಿಂದ, ನಾನು ಇವ ನನ್ನು ಕೊಂದು ಶಿವಾಗ್ರಹಕ್ಕೆ ಪಾತ್ರನಾಗಬಾರದೆಂದು ವೀರೇಶನು ಯೋ ಚಿಸಿ, ಹಾಗೆಯೇ ಅವನನ್ನುಳಿದು, ಉಳಿದ ರಾಕ್ಷಸರಮೇಲೆ ಬಿದ್ದು ತರಿ ತರಿದು ಕೆಡಹುತ್ತಿದ್ದನು, ಅತ್ತ ಗುಹನು ಗಗನಮೂಧಿಯನ್ನು ಅರಗಳಿಗೆ ಯೊಳಗಾಗಿ ತರಿದು ಪರಲೋಕಕ್ಕೆ ಕಳುಹಿದನು. ಈರರೂ ಶಾತಿ ರೇಕದಿಂದ ರಾಕ್ಷಸರ ಪಾಳಯವನ್ನೆಲ್ಲ ಕಲಕಾಡುತ್ತ ಲಯಗೊಳಿಸು ದ್ದ ರು. ಅಷ್ಮರಲ್ಲಿ ಅಂಧಕಾಸುರನು ಮೂರ್ಛತಿಳಿದೆದ್ದು , ವೀರೇಶನನ್ನು ಹುಡುಕಿಕೊಂಡು ಹಲ್ಲ ಡಿಯುತ್ತ ಹೊರಟನು, ಇದಿರಿಗೆ ಪರಶಿವನು ಕಾ ಣಿಸಿಕೊಂಡನು. ಒಡನೆಯೇ ಅಂಧಕನು ಶಿವನ ರಥದ ಮೇಲೆ ಬಾಣಜಾ ಲವನ್ನು ತುಂಬಿದನು. ಅದನ್ನು ಕಂಡು ಶಿವನು ಮಂದಹಾಸಗೊಂಡು, ವಿನಾಕವೆಂಬ ಧನುಸ್ಸನ್ನು ಕೈಗೆ ತೆಗೆದುಕೊಂಡು, ಇಂಜಿನಿಯನ್ನು ಸೆಳೆ ದು ಧ್ವನಿ ಮಾಡಿ, ಒಂದೇ ಒಂದು ಬಾಣವನ್ನು ತೆಗೆದು ಹೂಡಿ ಬಿಟ್ಟನು. ಅದು ದೈತನ ಬಾಣಗಳೆಲ್ಲವನ್ನೂ ಕಡಿದು ಕೆಡಹಿತು, ದೈತನು ಮತ್ತೆ ರೋಷವೇರಿ, ಕೊಟ್ಯನುಕೋಟಿ ಬಾಣಗಳನ್ನು ಶಿವನಮೇಲೆ ಕರೆದನು. ಅವನ್ನೂ ಶಿವನು ಲೀಲಾಮಾತ್ರದಿಂದ ಖಂಡಿಸಿದನು. ದಾನವೇಂದ್ರನು ಮತ್ತೂ ಕೋಪಗೊಂಡು, ನಿಶಿತವಾದ ಅಗಣಿತಬಾಣಗಳನ್ನು ಸೆಳೆಸಳ ದು ಪ್ರಯೋಗಿಸಿದನು, ಅವುಗಳು ಕೆಂಪಗೆ ಕಾದು ಕಿಡಿಗಳನ್ನು ಸುರಿ ಸುತ್ತ ಲೋಕಭೀಕರವಾಗಿ ಶಿವನ ರಥದ ಬಳಿಗೆ ಬರುವುದರೊಳಗಾಗಿ, ಸಾವಿರ ಮಡಕೆಗಳಿಗೆ ಒಂದು ದೊಣ್ಣೆಯ ಪೆಟ್ಟನ್ನು ಹಾಕಿದಂತ, ಶಂಕ ರನು ಪ್ರಯೋಗಿಸಿದ ಒಂದೇ ಒಂದು ಬಾಣವು ರಕ್ಕಸನ ಬಾಣಗಳನ್ನೆಲ್ಲ ಖಂಡಿಸಿ, ಅವನ ಕೈಬಿಲ್ಲನ್ನೂ ಕವಚ ಕುಂಡಲ ಬತ್ತಳಿಕೆಗಳನ್ನೂ ಕತ್ತ ರಿನಿಹಾಕಿತು. ಆಗ ದೈತ್ಯನು ಹಲಗೆ ಕತ್ತಿಗಳನ್ನು ಹಿಡಿದು ಭೂಮಿಗೆ ದುಮಿಕಿ, ಶಿವನಮೇಲೆ ಬೀಳುವುದಕ್ಕೆ ಬರುತ್ತಿರಲು, ಹರನು ತ್ರಿಶೂಲ