ಪುಟ:ಚೆನ್ನ ಬಸವೇಶವಿಜಯಂ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Qov ಚಿನ್ನ ಖಸಬೇಜಕವಿಯಂ (ಕಾಂಶ ೪) [ಅಧ್ಯಾಯ ಪ್ಲುವುದು ; ನನ್ನಂತಹ ಸೂಳೆಯರು ಸಾವಿರಾರು ಮಂದಿಗಳು ಸದಾ ನಿನ್ನ ಸೇವೆಮಾಡಿಕೊಂಡು ಕಾದು ಬಿದ್ದಿರುವಂತೆಯೂ ಆಗುವುದು ; ಅನಂತ ವಾದ ಸುಖವನ್ನು ನೀನು ಅನುಭವಿಸಿಕೊಂಡಿರಬಹುದು, ಎಂದಳು. ಆಗ ಶ್ರೇತನ ಮನಸ್ಸಿನಲ್ಲಿ ವಿವೇಕಾಂಕುರವು ಸ್ವಲ್ಪ ಮೂಡಿದಂತಾಯಿತು. ಅ ದರಿಂದ ರಂಭೆಯನ್ನು ಕುರಿತು... ಈ ಸಲ್ಪ ಕಾಲಗೊಳಗಾಗಿ ಅದು ಹೇ ಗೆ ಶಿವಾರಾಧನೆಯನ್ನು ಮಾಡಿ ಮೆಚ್ಚಿಸಿ ಮಹಾಫಲಗಳ ೩ ಪಡೆವುದಕ್ಕಾ ದೀತು ? ಎಂದು ಕೇಳಿದನು, ಅದಕ್ಕಾರಂಭೆಯು ದೊರೆಯೆ ! ಶಿವ ನೊಲಿವುದಕ್ಕೆ ಹೆಚ್ಚು ಕಾವು ಬೇಕಿಲ್ಲ ; ಅದಕ್ಕೊಂದು ಇತಿಹಾಸವನ್ನು ಹೇಳುತ್ತೇನೆ ಕೇಳು..~ ಪೂರದಲ್ಲಿ ಒಬ್ಬ ಪಾಪಿಯು ಅಂತ್ಯಾವಸ್ಥೆಯಿಂ ದ ನರಳುತ್ತ ಒಂದು ಪಾಳು ಡಿಯಲ್ಲಿ ಬಿದ್ದಿದ್ದನು ; ಅವನು ಸತ್ತರೆ ಹೆಣ ವನ್ನು ಕಿತ್ತು ತಿನ್ನಬೇಕೆಂದು ಬಂದು ನಾಯಿಯು ಕಾದುಕೊಂಡು ಮ ಈು ಲಲ್ಲಿ ತಿಪ್ಪೆಗುಂಡಿಯಲ್ಲಿ ಮಲಗಿದ್ದಿ ತು; ಜೀವವು ಹೋಯಿತೋ ಏನೋ ಎಂದು ನೋಡುವುದಕ್ಕಾಗಿ ನಾಯಿಯು ಬಂದು, ಅವನ ದೇಹದಮೇಲೆ ನಡೆದು, ಹಣೆಯಮೇಲೆ ಕಾಲಿಟ್ಟು, ಉಸುರಾಡುತ್ತಿರುವುದನ್ನು ಪರೀಕ್ಷಿಸಿ ನೋಡಿಕೊಂಡು ಹೋಯ್ತು. ಆಗ ಅದರ ಕಾಲಲ್ಲಿ ಹತ್ತಿದ್ದ ಬೂದಿಯು ಸಾ ಯುತ್ತಿದ್ದವನ ಹಣೆಗೆ ಹತ್ತಿತು. ಅಸ್ಟರಲ್ಲಿ ಅವನೂ ಸತ್ತನು. ಯಮದೂತರು ಬಂದರು, ಶಿವಮೂತರೂ ಬಂದರು. ಸಾಯುವಾಗ ಅವನ ಹಣೆಯಲ್ಲಿ ವಿಭೂ ತಿಯು ಕಾಣತ್ತಿದ್ದು ದರಿಂದ ಅವನನ್ನು ಹಿಡಿದುಕೊಂಡು ಹೋಗುವುದಕ್ಕೆ ನಿಮಗೆ ಅಧಿಕಾರವಿಲ್ಲವೆಂದು ಮನುದೂತರನ್ನು ತಳ್ಳಿ ಶಿವದೂತರು ಆತನನ್ನು ಕೈಲಾಸಕ್ಕೆ ತೆಗೆದುಕೊಂಡುಹೋದರು, ಮತ್ತೂ ಒಬ್ಬ ಬೇಡನು ಕಾಡಿನಲ್ಲಿ ಕ್ರೀಡಿಸುತ್ತಿದ್ದಾಗ, ರುದ್ರಾಕ್ಷಿಯ ಹಣ್ಣನ್ನು ಕಂಡು, ಅವನ್ನು ತಾನು ತಿಂದು, ಬೀಜಗಳನ್ನು ಬರಮಾಡಿ ತನ್ನ ನಾಯ ಕೊರಳಿಗೆ ಕಟ್ಟಿದ್ದನು. ಆ ನಾಯನ್ನು ಹಂದಿಯು ಕೊಲ್ಲಲು, ಶಿವದೂತರು ಬಂದು, ಕೊರಲಿನಲ್ಲಿ ರುದ್ರಾಕ್ಷಿಯು ಅದನ್ನು ಮುಟ್ಟುವುದಕ್ಕೆ ಯಮದೂತರಿಗೆ ಅಧಿಕಾರವಿಲ್ಲ ವೆಂದು ತಡೆದು, ತಾನೆ ಶಿವಪುರಿಗೆ ಎಳೆದೊಯ್ದು ರು. ಅದುಕಾರಣ, ವಿ ಭೂತಿ ರುದ್ರಾಕ್ಷಗಳೆಂಬ ಶಿವರಾಂಛನವನ್ನು ಒಂದುಬಾರಿ ಧರಿಸಿದರೂ ಅದರ ಫಲವು ಮಹತ್ತರವಾಗಿರುವುದು. ಇದಲ್ಲದೆ ಶಿವಮಂತ್ರ ಪ್ರಭಾವ