ಬ ?) . ಚನ್ನಬಸವೇಕಾವತರಣವು ಹಾಸ್ಯಮಾಡುತ್ತಿದ್ದರು, ಅವರಲ್ಲೊಬ್ಬ ಚಾಡಿಕೋರನು ದೊರೆಗೆ ಈ ವತ್ರಮಾನವನ್ನು ತಿಳುಕಬೇಕೆಂದು ಹೋಗಿ, ಇದ್ದ ಸುದ್ದಿಯನ್ನು ತಿಳುಹಿ ದನು. ಇವನೆಲ್ಲೋ ಪಟಿಂಗ, ಇವನ ಮಾತು ನಂಬತಕ್ಕುದಲ್ಲವೆಂದು ದೊರೆಯು ತಿರಸ್ಕರಿಸಿದನು. ಚಾಡಿಕೋರನು--ಹಾಗಲ್ಲ, ತಾವು ಖಂಡಿ ತವಾಗಿ ಪರೀಕ್ಷಿಸಿ ನೋಡಿ, ಇದು ಸುಳ್ಳಲ್ಲ, ಆ ಗರ್ಭಿಣಿಯ ಬಸವರ ಸನೂ ಇತರ ಗಣಂಗಳ ಮನೆಯಲ್ಲಿ ಕುಳಿತಿರುವರು, ತಾನೇ ದಯಮಾ ಡಿಸಿದರೆ ತೋರಿಸಿಕೊಡುತ್ತೇನೆಂದು ಶಪಥದಿಂದ ನುಡಿದನು, ಆಗ ದೊರೆ ಯು ಆಶ್ಚಗಪಟ್ಟು, ತಾನೇ ನೋಡಬೇಕೆಂದು ಮಂತ್ರಿಗಳ ಸಮೇತ ನಾಗಿ ಸೇವಕಜನರೊಡನೆ ಹೊರಟನು. ಈ ಸುದ್ದಿ ಯನ್ನು ಕೇಳಿ ಬಸ ವೇಶನು ಶಿವಗಣಸಮೇತನಾಗಿ ಹೋಗಿ ದೊರೆಯನ್ನು ಇದಿರ್ಗೊಂಡು ಕರೆತಂದು ತನ್ನ ರಮನೆಯ ಉಚ್ಛಾಸನದಲ್ಲಿ ಕುಳ್ಳಿರಿಸಿದನು ಮತ್ತೂ-ಎ ಲೈ ರಾಜನೇ! ಈಗ ನಿನ್ನಾಯುಧಕ್ಕೆ ಇದಿರಾಗಿ ಪ್ರತಿಭಟಿಸತಕ್ಕ ಶತ್ರುರಾ ಜಗು ಯಾರೂ ಇಲ್ಲ; ನಿನ್ನ ಆಜ್ಞೆಗೆ ಭಂಗವಿಲ್ಲ; ಭೂಸಂಪತ್ತಿಗೆ ಚ್ಯುತಿ ಯಿಲ್ಲ; ಅಣ್ಣ ತಮ್ಮಂದಿರು ಮಕ್ಕಳು ಮೊದಲಾದವರಲ್ಲಿ ಭಿನ್ನ ಭಾವಗಳೇ ನೂ ಇಲ್ಲ; ಯಾವ ಬೊಕ್ಕಸದಲ್ಲಿ ಏನೊಂದರ ಕೊರತೆಯೂ ಇಲ್ಲ; ಚತುರಂಗಸೈನ್ಯದಲ್ಲಿ ಒಡಕೇನೂ ಹುಟ್ಟಿಲ್ಲ. ಹೀಗಿರುವಲ್ಲಿ ಅಕಸ್ಸಾ ತಾಗಿ ನೀನೇ ನನ್ನ ಬಳಿಗೆ ಬರುವುದಕ್ಕೆ ಕಾರಣವೇನು? ಎಂದು ಕೇಳಿ ದನು. ದೊರೆಯು ನಸುನಕ್ಕು -.ಎಲೈ ಬಸವದಂಡಾಧೀಶನೆ! ನೀನು ನನ್ನ ಮುಖ್ಯ ಪ್ರಧಾನಿಯಾಗಿದ್ದು ಕೊಂಡಿರುವವರೆಗೂ ನನ್ನ ಸೌಭಾಗ್ಯಕ್ಕೆ ಹಾನಿಯೆಂದರೇನು? ಎಂದು ಹೇಳಿ, ಅತ್ತಿತ್ತ ನೋಡುತ್ತ, ಅಲ್ಲಿ ಕುಳಿ ತಿದ್ದ ನಾಗಲಾಂಬಿಕೆಯ ಸಂದಥ್ಯವನ್ನು ತಿಳಿದುಕೊಂಡು, ಅಮ್ಮಾ ! ನಿನಾರು? ನಿನಗೆ ಈ ಗರ್ಭಧಾರಣೆಯು ಸುಮ್ಮನೆ ಹೇಗಾಯಿತು ? ಎಂದು ಕೇಳಲಾಗಿ, ಆ ಮಾತೆಯು ಪ್ರಭುವೇ! ಇದು ಶಿವನ ಚಿತ್ರ ೪ಾಪಸಾದದಿಂದುತ್ಪನ್ನವಾಗಿರುವುದು, ಎಂದಳು. ಆತನು.ಶಿವಭಕ್ಕರೆ ಲ್ಲರೂ ಪ್ರಸಾದಿಗಳೆ; ಆದರೆ ಅವರಾರಲ್ಲ ಈ ವಿಧವಾದ ಗರ್ಭಧಾರಣೆ ಯಾಗಿಲ್ಲವಲ್ಲ? ಎಂದನು. ನಾಗಲಾಂಬೆಯು.ನಾನು ಸುಳ್ಳನ್ನು ಹೇಳತ ಕವಳಲ್ಲ; ಪರಶಿವನು ದಯೆಯಿಂದ ತನ್ನ ಪ್ರಣಖಸ್ಥಿತವಾದ ಚಿತ್ಕಳಾ ಟಿ
ಪುಟ:ಚೆನ್ನ ಬಸವೇಶವಿಜಯಂ.djvu/೩೪
ಗೋಚರ