ಪುಟ:ಚೆನ್ನ ಬಸವೇಶವಿಜಯಂ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

n ಕಿರಕದಲೀಲೆ 144 ವೇನೋ ಬೇಡರೆಂಬುದು ನಿಜ; ಲೋಕವೆಲ್ಲಾ ಕಾಣುವಂತೆ ಕಾಡಿನಲ್ಲಿ ನಿಂ ತು ತಪಸ್ಸನ್ನು ಮಾಡಿ ಬೇಡುತ್ತಿರುವ ಸೀನು ಬೇಡನಲ್ಲವೋ ? ಲೆಕ್ಕಕ್ಕೆ ಒಂದು ಬಾಣವಾದರೂ ಬತ್ತಳಿಕೆಯಲ್ಲಿಲ್ಲದಿರುವ ಸೀನು ಅದೆಂತದ ಕ್ಷತ್ರಿ ಯು ? ಅದೆಂತಹ ವೀರ ? ಎಂದು ಜರೆಯಲು, ಅರ್ಜನನು ಕಡುಸಿಟ್ಟು ಗೊಂಡು, ಕೈಯಲ್ಲಿದ್ದ ಬಿಲ್ಲಿನಿಂದಲೇ ಕಿರಾತನನ್ನಪ್ಪಳಿಸಿದನು. ಅದನ್ನು ಬೇಡನು ಹಾಗೆಯೇ ಹಿಡಿದು ಕಿತ್ತುಕೊಂಡನು. ನಾರ್ಥನು ಕತ್ತಿಯಿಂ ದ ಶಿವನನ್ನು ಹೊಡೆಯುವುದಕ್ಕೆ ಕೈಯೆತ್ತಿದನು, ಪು೪ಂದನು ಅದನ್ನೂ ಸಳೆದುಕೊಂಡನು. ಬಳಿಕ ಕಲ್ಲುಗಳಿಂದಲೂ ಗುಂಡುಗಳಿಂದಲೂ ಮರದ ಕೊಂಬುಗಳಿಂದಲೂ ವ್ಯಾಧನನ್ನು ಹೊಡೆಯಲುಪಕ್ರಮಿಸಿದನು, ಅವನ್ನೆಲ್ಲ ಕೈದೊಣ್ಣೆಯಿಂದಲೇ ಶಿವನು ಓರೆನೂಕಿ, ತಪಸಿಯೆ! ಇನ್ನಾವ ಆಯುಧಗ ೪ನೆಯೋ ಎಲ್ಲವನ್ನೂ ತೆಗೆ, ಎಂದು ಹಾಸ್ಯಮಾಡಿದನು.. ಸಲ್ಲು ನನು ಧೈ ರೈವಿದ್ದರೆ ಮಲ್ಲಯುದ್ಧಕ್ಕೆ ನಿಲ್ಲು ' ಎಂದು ತೊಡೆತಟ್ಟಿ ನಿಂತನು. ಶಿವನು ಪಾರತಿಯ ಮುಖವನ್ನು ನೋಡಿ ನಗುತ್ತ,-ದೇವಿಯೆ ! ಇವನು ತರಗೆಲೆ ಗಾಳಿಗಳನ್ನಾಪಾರಮಾಡಿಕೊಂಡು ಎಷ್ಟೊಕಾಲವಿದ್ದು ಒ೪ಕ ನಿರಾ ಹಾರಿಯಾಗಿಯೂ ತಪಸ್ಸನ್ನು ಮಾಡುತ್ತಿದ್ದನು. ಈ ಹಂದಿಯ ಸಂಬಂಧ ದಿಂದ ನನ್ನ ಮೇಲೆ ಕಾದಾಡಬೇಕಾಯಿತು, ಆದರೂ ದೇಹಶಕ್ತಿಗುಂದದೆ ನನೆ ೧ಡತೆ ಇವವರೆಗೆ ಹೋರಾಡಿದುದನ್ನು ನೋಡು, ಇಂತಹ ಕಲಿತನವು ಜಗತ್ತಿನಲ್ಲಿ ಈ ಲೋಕೈಕವೀರನೊಬ್ಬನಿಗಲ್ಲದೆ ಮತ್ತಿನ್ನಾರಿಗಿರುವುದು ? ಇನ್ನೂ ಇವನ ಶೌಗ್ಯವನ್ನು ನೋಡುತ್ತಿರು, ಎಂದು ಹೇಳಿ, ಬಿಲ್ಲು ಬಾಣ ಗಳನ್ನು ಒಬ್ಬನ ಕೈಗೆ ಕೊಟ್ಟು, ಭುಜಗಳನ್ನು ತಟ್ಟಿ, ಪಾರ್ಥನಿಗೆ ಎದೆ ಗೊಟ್ಟು ನಿಂತನು, ಇಬ್ಬರಿಗೂ ಕೈ ಕೈ ಕೂಡಿತು, ಎದೆಗಳು ಸೇರಿದು ವು, ಹಾವುಗಳಂತೆ ಸರಿ ಹೆಣಗಾಡಿದರು. ಗರಗರನೆ ತಿರುಗಿದರು. ಮಂಡಿ ಯೂರಿ ಬೆನ್ನಿಗೆ ಕೈಕೊಟ್ಟು ಜಗ್ಗಿಸಿದರು, ಕೊರಲನ್ನು ಸೆಳೆದು ರಟ್ಟೆಯ ನ್ನು ತೊಡೆಗೆ ಸೇರಿಸಿದರು. ಎತ್ತಿ ಕುಸುರಿದರು. ಒಬ್ಬರನ್ನೊಬ್ಬರು ಮೇ ಟ್ಕಳು ಮಾಡಿದರು. ಪಟ್ಟನ್ನು ಬಿಡಿಸಿಕೊಂಡು ದೂರವಾಗಿ ಹಿಡಿದು, ತೊಡೆತಟ್ಟಿ ಮತ್ತೆ ನಡುವಿಗೆ ನುಗ್ಗಿದರು. ಅಪ್ಪಳಿಸಿದರು. ಒಬ್ಬರನ್ನೊ ಬ್ಬರು ಮುಮ್ಮಿಗಳಿಂದ ಹೊಡೆದು, ಬೆವರು ಹರಿದಾಡಿತು, ತಲೆಯು