Aj ಕಿರಾತರುದ್ರತೀತಿ. ky ವಿಚಿತ್ರ ! ಎಂದು ಪರಿಪರಿಯಾಗಿ ಹಂಬಲಿಸುತ್ತ, ಕಡೆಗೆ, ನಾನು ಮಾಡು ತಿದ್ದ ತಪಶ್ರಣವನ್ನು ಬಿಟ್ಟು ಈ ದುರ್ವಾಕ್ಕೆ ಮನಸ್ಸನ್ನು ಕೊಟ್ಟ ಶಿವಾಪರಾಧದಿಂದಲೇ ಇಂತಹ ಕೇಡುಂಟಾಯ್ಲೆಂದು ಯೋಚಿಸಿ, ತಪ್ಪೇರಿ ಹಾರಕ್ಕಾಗಿ ಶಿವಕಟಾಕ್ಷವನ್ನು ಪಡೆದು ಬಳಿಕ ಬೇಡನನ್ನು ಸೋಲಿಸ ಬೇಕೆಂದು ನಿರ್ಧರಿಸಿದನು. ಅಲ್ಲೇ ಮಳಲಿನಲ್ಲಿ ಒಂದು ಲಿಂಗವನ್ನು ಮಾ ಡಿದನು, ಪರಿಪರಿಯ ಹೂವುಗಳನ್ನೆತ್ತಿ ತಂದು ಭಕ್ತಿಯಿಂದರ್ಚಿಸಿದನು. ಶಿವಮಂತ್ರೋಚ್ಛಾರಣೆಯಿಂದ ಪ್ರದಕ್ಷಿಣವಾಡಿ ನಮಸ್ಕರಿಸಿ, ಜಯ ಮೃತ್ಯುಂಜಯ : ಜಯ ಭವಭಂಜನ ! ಜಯ ಕರುಣಾಕರ ! ಜಯ ಶಿವಶಂಕರ ! ಎಂದು ಮೊದಲಾಗಿ ಸ್ಫೂತನಾಡಿ, ಹರನೇ ! ನಿನ್ನ ಪಾದಸೇವಕನಾದ ನನ್ನನ್ನು ಹುಲುಬೇಡನೊಬ್ಬನು ಗೆಲ್ಲಬಹುದೆ ? ನನ ಗಾದ ಪರಾಭವವು ಒಡೆಯನಾದ ನಿನಗಲ್ಲವೆ ? ಅದು ಕಾರಣ, ಈತನನ್ನು. ಸೋಲಿಸುವ ಶೌರವನ್ನು ನನಗೆ ಕೊಟ್ಟು ಕಾಪಾಡು ” ಎಂದು ಪ್ರಾ) ರ್ಥಿನಿ, ಬೇಡನ ಕಡೆಗೆ ತಿರುಗಿನೋಡಿ, ಎಲೋ ನೀಚನೆ ! ಇನ್ನು ನಿನ್ನ ಪರುಷವನ್ನು ತೋರಿಸು ನೋಡುತ್ತೇನೆ ! ಈಗ ನಡೆಯನ ಅನು ಗ್ರಹವು ಉಂಟಾಗಿರುವುದು; ನೀನಲ್ಲ, ನಿನ್ನ ಮೇಲಣ ಯಾವ ದೈವವನ್ನು ಕರೆದುಕೊಂಡುಬಂದರೂ ಎಲ್ಲರನ್ನೂ ಕ್ಷಣಾರ್ಧದಲ್ಲಿ ಸಹ್ಮರಿಸುವೆನು; ಇತ್ತ ಬಾ, ಎಂದು ತೋಳಟ್ಟಿ ಗರ್ಜಿಸುತ್ತಿರುವಲ್ಲಿ, ಬೇಡನ ತಲೆಯ ಮೇಲಿರುವ ಪುಷ್ಪಗುಚ್ಚವನ್ನು ನೋಡಿದನು. ತಾನು ಮಳಲಲಿಂಗದ ಶಿರ ನಮೇಲೆ ಧರಿಸಿದ ಕುಸುಮಗುಚ್ಚದಂತೆಯೇ ಅದು ಕಂಡಿತು. ಇದೇ ನೆಂದು ಅರ್ಜುನನು ಆಶ್ಚರೈಗೊಂಡನು, ಪರೀಕ್ಷಿಸಬೇಕೆಂದು ಮತ್ತೆ ಬೇ ರೆಬೇರೆ ಜಾತಿಯ ಹೂವುಗಳನ್ನು ಲಿಂಗಕ್ಕೆ ಅಲಂಕರಿಸಿದನು. ಕಣ್ಣು ಮುಚ್ಚಿ ಬಿಡುವುದರೊಳಗೆ ಅವೆ: ಕಿರಾತನ ಮಂಡೆಯ ಮೇಲೆಯೇ ತೋರುತ್ತ, ಲಿಂಗಶಿರಸ್ಸು ಶೂನ್ಯವಾಗಿರುತ್ತಿದ್ದಿತು. ಆಗ ಅರ್ಜುನನು, ಓಹೊ ! ಇವನೇ ಶಿವನೆಂದು ತಿಳಿದು, ದಿಗಿಲುಬಿದ್ದನು. ಶಿವನನ್ನು ಮೇ ಚೈಸಿಕೊಳ್ಳುವುದಕ್ಕಾಗಿ ಬಂದ ನಾನು ಅವನಿಗೇ ವಿರುದ್ಧವಾಗಿ ನಿಂತು ಕಾದಾಡಿದನಲ್ಲ ! ಎಂದು ಪರಿತನಿಸಿದನು, ಗಡಗಡನೆ ನಡುಗುತ್ತ ಅಡ್ಡಬಿ ದು, ಎದ್ದು , ಕೈಮುಗಿದು ನಿಂತು,-ಮುದ್ದು ರುವೆ ! ಪ್ರಭುವೆ ! ನಾನು
ಪುಟ:ಚೆನ್ನ ಬಸವೇಶವಿಜಯಂ.djvu/೩೪೪
ಗೋಚರ