ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{L ಚನ್ನ ಬಸವೇಕವಿಜಯಂ (ಕಾಂಡ ೪) [ಅಧ್ಯಾಯ ಅರಿಯದೆ ಮಾಡಿದ ಶತಾಪರಾಧವನ್ನು ಕ್ಷಮಿಸು; ಮತ್ತನಾಗಿ ನಾನು ಆಚ ರಿಸಿದ ತಪ್ಪನ್ನು ಸೈರಿಸು, ಅಜ್ಞನಾದ ನನ್ನನ್ನು ಕಾಪಾಡು, ಭಕ್ತವತ್ಸ ಲಾ ! ದಯಾನಿಧೆ ! ಎಂದು ಬಗೆಬಗೆಯಾಗಿ ಕಣ್ಣೀರುಂಬಿ ದೀನಸರ ದಿಂದ ಬೇಡಿದನು, ಆಗ ಇದಿರಾಗಿದ್ದ ಕಿರಾತನೇ ಭಕ್ತನ ಮೇಲಣ ಪ್ರೀತಿ ಯಿಂದ ಪಂಚವದನ- ದಶಭುಜ ಚಂದ್ರರೇಖೆ- ಜಟಾಗಂಗೆ- ತ್ರಿಶೂ ಲ- ಮೃಗವರಾಭಯಹಸ್ಯ- ಭುಜಗಹಾರಕುಂಡಲ- ಮೊದಲಾದುವುಗಳ ನ್ನು ಧರಿಸಿ, ಪ್ರಸನ್ನವದನನಾಗಿ, ಪಾರತೀಸಮೇತನಾಗಿ, ವೃಷಭವನ್ನೇರಿ, ಪ್ರತ್ಯಕ್ಷನಾದನು, ನಂದಿ ಗುಹ ಗಣಪ ವೀರೇಶಾದಿಗಳು ನಿಜರೂಪನ್ನು ಧರಿಸಿದರು. ದೇವದುಂದುಭಿಯ ಶಬ್ದ ವಾಯಿತು, ಪುಷ್ಪವೃಷ್ಟಿಯು ಕರೆದಿತು, ಪಾರ್ಥನು ಮಹಾದೇವದೇವೋತವನ ನಿಜರೂಪನ್ನು ಕಂ ಡು, ಪರಮಾನಂದಗೊಂಡು, ಬಾಷ್ಪಗಳನ್ನು ಸುರಿಸುತ್ತ, ರೋಮಾಂಚ ನದಿ, ದೀರ್ಘವಾಗಿ ನಮಸ್ಕರಿಸಿ, ಭಯಭಕ್ತಿಯಿಂದ “ ರುದ್ರಾಯ ಗಿರಿಶಾಯು ಶರಾಯ ಕರುಣಾಸಮುದಾಯ ಸೇವಾಯ ಛೀಮಾಯ ಮೃತ್ಯುಂಜಯಾಯ ಪರಮೇಶಾಯ ತೇ ನಮೋನಮಃ ?” ಎಂದು ಮೊದ ಲಾಗಿ ಸ್ತುತಿಸುತ್ತಿದ್ದನು. ಶಿವನು ಪಾರ್ಥನನ್ನು ಪ್ರೇಮದಿಂದ ತೆಗೆದು ಬಿಗಿದಪ್ಪಿ, ಕುವರನ ! ನೀನು ಬಿಟ್ಟ ಬಾಣಗಳಲ್ಲವೂ ನನಗೆ ಪುಪ್ಪಾರ್ಚ ನೆಯು; ನಿನು ಆಡಿದ ಮೂದಲೆಗಳೆಲ್ಲ ನನ್ನ ಮಂತ್ರೋಚ್ಛಾರಣಗಳು. ನಿನ್ನ ಮುಷ್ಟಿಘಾತವು ನನ್ನ ಪಾದ ಪೂಜೆಯು, ಎಂದು ತಿಳಿದಿರುವೆನು; ಅದಕ್ಕಾಗಿ ನೀನು ಮನಸ್ಸಿನಲ್ಲಿ ಕೊರಗಬೇಡ, ಇದೊ ನೀನು ಕಳೆದು ಕೊಂಡ ಬಿಲ್ಲು ಬಾಣಗಳನ್ನು ತೆಗೆದುಕೊ ಎಂದು ಅವನ ಕೈಗೆ ಕೊಟ್ಟು, ನಿನ್ನಿಷ್ಟಾರ್ಥವೇನು ? ಬೇಡು, ಎಂದನು. ಅರ್ಜುನನಾದರೆ- “ದೇವಾ ! ಶತ್ರು ವಿಜಯಕನಾದ ಮಹಾಪಾಶುಪತಾಸ್ತ್ರವನ್ನು ಕರುಣಿಸಬೇಕು ? ಎಂದು ಬೇಡಿದನು, ಶಿವನು ಅವನಿದಂತೆಯೇ ಮಂತ್ರೋಪದೇಶಪೂ ರಕವಾಗಿ ಶಿವಾಸ್ಯವನ್ನು ದಯಪಾಲಿಸಿ, ಜಯಶೀಲನಾಗು ” ಎಂದು ಆಶೀರದಿಸಿದನು. ಬಳಿಕ ಪಾರ್ಥನು ಪಾರತಿಯ ಪಾದಾರವಿಂದಕ್ಕೆ ಮ ಣಿದು, ಜಗನ್ಮಾತೆ ! ಕರುಣಾಕರೆ ! ಭವಾನಿ ! ಸರಮಂಗಳ ! ಪರಾ ತೃರೆ ! ಶಾಹಿ ಎಂದು ಮೊದಲಾಗಿ ಸ್ತುತಿಸಲು, ಶಂಕರಿಯು ಅವನ ತಲೆ