ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«ಳೆ ಚೆನ್ನಬಸವೇಶವಿಜಯಂ(ಕಾಂಡ ೫) [ಅಧ್ಯಾಯ ಚೆನ್ನಯ್ಯನ ಮನೆಗೆ ಕರೆದುಕೊಂಡು ಹೋಗಿ ತೋರಿಸಿದನು, ಕರಿಕಾಲ ನು ಆತನನ್ನು ಕಂಡು ಪಾದಕ್ಕೆ ನಮಸ್ಕರಿಸಿ ಪರಿಪರಿಯಾಗಿ ಸ್ತುತಿಸಿದನು. ಪರಮೇಶನು ಅವರಿರರಿಗೂ ಕೈಲಾಸವಾಸವನ್ನು ದಯಪಾಲಿಸಿದನು. - ಅತ್ರ ಕಳಚಂಗಪೆರುಮಾಳೆಯೆಂಬ ರಾಜನ ಹೆಂಡತಿಯಾದ ಜೊಲ್ಲ ಡಿನಾಚಿಯೆಂಬುವಳು ದೇವಾಲಯದಲ್ಲಿ ಶಿವಪೂಜೆಗಾಗಿ ಇಟ್ಟಿದ್ದ ಹೂವ ನ್ನು ಕಂಡು ತೆಗೆದುಕೊಂಡು ಮೂಸಿನೋಡಲು, ತಮ್ಮಡಿಯು ಆಕೆಯ ಅಪರಾಧಕ್ಕಾಗಿ ಅವಳ ಮೂಗನ್ನು ಕತ್ತರಿಸಿದನು. ದೊರೆಗೆ ಈ ಸುದ್ದಿ ಯು ಮುಟ್ಟಲು, ಮೊದಲು ಹೂವನ್ನು ತೆಗೆದುಕೊಂಡುದು ಹಸ್ತವಾದು ದರಿಂದ ಅದನ್ನು ಮೊದಲು ಶಿಕ್ಷಿಸದೆ, ೨ನೆ ಅಪರಾಧವನ್ನು ಮಾಡಿದ ಮೂ ಗನ್ನು ಕತ್ತರಿಸಿದುದು ಸರಿಯಲ್ಲವೆಂದು ಹೇಳಿ, ಆಕೆಯ ಕೈಯನ್ನು ತಾನು ಕತ್ತರಿಸಿದನು. ಆಗ ಚಂದ್ರಶೇಖರನು ಆ ಮೂವರಿಗೂ ಕೈಲಾಸಪದವಿ ಯನ್ನು ಕರುಣಿಸಿದನು. - ಸತೇಂದ್ರಚೋಳನೆಂಬ ರಾಜನಿಗೆ ಮಂತ್ರಲಕ್ಷ (ರಾಜಶೇಖರ) ನೆಂಬ ಮಗನಿದ್ದನು. ಅವನು ಮಂತ್ರಿಯ ಮಗನಾದ ಮಿತವಚನನೆಂಬ ತನ್ನ ಮಿತ್ರನೊಡನೆ ಹೊಸಕುದುರೆಯನ್ನೇರಿ, ರಾಜವಿಧಿಯಲ್ಲಿ ಉತ್ಸವ ಗೊಂಡು ಬರುತ್ತಿದ್ದನು. ಆಗ ತಿರುಕುಳನಾಚಿಯೆಂಬ ಭಕ್ತಿಯ ಮಗ ನಾದ ಶಂಕರನೆಂಬ ಸಣ್ಣ ಹುಡುಗನು ಬೀದಿಯಲ್ಲಾಡುತ್ತಿರಲು, ದೊರೆ ಮಗನ ಹಿಂದೆ ಬರುತ್ತಿದ್ದ ಮಂತ್ರಿಮಗನ ಕುದುರೆಯ ಕಾಲಿನ ಏಟಿನಿಂದ ಆ ಹುಡುಗನ ಕತ್ತು ಮುರಿದು ಹೋಗಲು, ಅವನು ಸತ್ತನು, ನೀರಿಗೆ ಹೋಗಿದ್ದ ತಾಯಿಯು ಬಂದು, ಮಗನ ಅಳಿವನ್ನು ನೋಡಿ ಪ್ರಲಾಪಿಸಿ, ಮುಂಡವನ್ನು ಹಿಡಿದು ದೊರೆಯಬಳಿಗೆ ಬಂದು ದೂರನ್ನು ಹೇಳಿಕೊಳ್ಳಲು, ರಾಜನು ಮಗನನ್ನೂ ಮಂತ್ರಿಸುತನನ್ನೂ ಕರೆಯಿಸಿ ನಿಜಸ್ಥಿತಿಯನ್ನು ವಿಚಾ ರಿಸುವಲ್ಲಿ, ಮಿತವಚನನನು ತನ್ನ ಅಪರಾಧವೆಂದು ಒಪ್ಪಿಕೊಂಡರೂ, ಮಂ ತಲಕನು ತನ್ನ ಮಾತಿನಮೇರೆಗೆ ಕುದುರೆಯ ಸಾರಿಗೆ ಬಲಾತ್ಕಾರದಿಂದ ಮಂತ್ರಪುತ್ರನು ಬಂದ ಕಾರಣದಿಂದಲೂ, ಅವನಿಗಾದ ತಪ್ಪು ತನ್ನದೆಂದು ಮೊದಲೇ ತಾನು ಮಾತುಕೊಟ್ಟಿದ್ದು ದರಿಂದಲೂ, ಈ ಅಪರಾಧದ ಶಿಕ್ಷೆಯು ತನಗಾಗಬೇಕೆಂದು ರಾಜಪುತ್ರನು ನುಡಿದನು. ಹಾಗಾದರೆ ಮಗನ ಶಿರಸ್ಸ