ಪುಟ:ಚೆನ್ನ ಬಸವೇಶವಿಜಯಂ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, ] ಕೈವಶರಣರ ಕಥೆಗಳು 484 ನ್ನೇ ಕತ್ತರಿಸಿ ತಲೆಯನ್ನು ತಂದು ತೋರಿಸಬೇಕೆಂದು ಸತ್ಯೇಂದ್ರನು ಮಂ ತ್ರಿಗೆ ಅಪ್ಪಣೆಮಾಡಿದನು, ಅವನು ತನ್ನ ಮಗನು ಮಾಡಿದ ತಪ್ಪಿಗಾಗಿ ದೊ ರೆಯ ಮಗನನ್ನು ಕೊಲ್ಲಿಸಿ, ಅದನ್ನು ನೋಡಿಕೊಂಡಿರುವುದಕ್ಕಿಂತಲೂ ತನ್ನ ತಲೆಯನ್ನೇ ಮೊದಲು ತರಿದುಕೊಳ್ಳುವುದು ಲೇಸೆಂದು ಯೋಚಿಸಿ, ರಾಜಪುತ್ರನ ಶಿರಸ್ಸೇದನಕ್ಕಾಗಿ ಬೇರೊಬ್ಬ ದೂತನನ್ನು ನೇಮಿಸಿ, ತನ್ನ ಮನೆಯಲ್ಲಿ ತಾನು ಶಿರಚ್ಛೇದನವನ್ನು ಮಾಡಿಕೊಂಡನು. ಮಂತ್ರಲಕನು ಶಿವನುಂತ್ರಸ್ಮರಣಮಾಡುತ್ತಿರುವ ತನ್ನ ಕೊರಳನ್ನು ಕತ್ತರಿಸಿ ದೂತನ ಕೈಗೆ ಕೊಟ್ಟನು. ಅವನ ಮುಂಡವನ್ನು ದೊರೆಯ ಬಳಿಗೆ ತಂದು ಇಡಲು, ತನ್ನ ಮಗನು ಅದುಹೇಗೆ ಶಿರಸ್ಸನ್ನು ಕತ್ತರಿಸಿಕೊಂಡನೆಂದು ರಾಜನು ಕೇ ಳುವಲ್ಲಿ, ದೂತನು- ಇದೊ? ಹೀಗೆ ಕತ್ತರಿಸಿಕೊಂಡನೆಂದು ಹೇಳಿ ತೋ ರಿಸುತ್ತ, ತನ್ನ ಕತ್ತನ್ನೂ ಕತ್ತರಿಸಿ ಮುಂದಿಟ್ಟನು. ತನ್ನ ಮಗನ ೧ ತಲೆಗೆ ೨ ತಲೆಗಳು ಬಿದ್ದು ದನ್ನು ತಿರುಕುಳನಾಚಿಯು ಕಂಡು, ಹೆಚ್ಚಿನ ತಲೆಗೆ ತನ್ನ ತಲೆಯನ್ನು ಒಪ್ಪಿಸಬೇಕೆಂದು ಯೋಚಿಸಿ, ತಾನೂ ಕೊರನ್ನು ಕೊಯ್ಯು ರುಂಡವನ್ನು ಮುಂದಿಟ್ಟಳು. ಅಷ್ಟು ಹೊತ್ತಿಗೆ ಮಂತ್ರಿಯ ಶಿರ ಸ್ಪೂ ಅಲ್ಲಿಗೆ ಬಂದಿತು. H ರಸ್ಸುಗಳ ಸಂಚಾಕ್ಷರವನ್ನು ಜಪಿಸುತ್ತಿ ದ್ವು ವು, ಮಂತ್ರಿಯು ತನ್ನ ಕತ್ತನ್ನು ನಿಸ್ಸಾರಣವಾಗಿ ಕತ್ತರಿಸಿಕೊಂಡನಾ ದ ಕಾರಣ, ಅವನ ಶಿರಸ್ಸಿಗೆ ತನ್ನ ತಲೆಯ ಸನುವಾಗಲಿ ಎಂದು ಹೇಳಿ ದೊರೆಯು ತನ್ನ ಕೊರಳನ್ನು ಕತ್ತರಿಸಿ ಮುಂದಿಟ್ಟನು. ಅಸ್ಟ್ರಲ್ಲಿ ಮಿತ ವಚನನು ಅಲ್ಲಿಗೆ ಒಂದು, ಈ ಅನರ್ಥಕ್ಕೆಲ್ಲ ತನ್ನ ಕುದುರೆಯು ತುಳಿದುದೇ ಮಲವಾದುದರಿಂದ, ನಾನು ಮೊದಲೇ ಸಾಯದಿದ್ದುದು ತಪ್ಪು ಎಂದು ಯೋಚಿಸಿ, ತನ್ನ ತಿರಸ್ಸನ್ನೂ ಕಡಿದಿಕ್ಕಿದನು. ಈ ಸುದ್ದಿಯು ರಾಣಿವಾ ಸಕ್ಕೆ ಮುಟ್ಟಲು, ರಾಜನ ಹೆಂಡತಿ ಅಮೃತವ ತಿಯ, ಯುವರಾಜನ ಹೆಂಡತಿ ಸರ ಮಂಗಳೆಯೂ, ಸತಿಮೋ ಹಿಮಂತ್ರಿಯ ಪತ್ನಿಯ, ಅವಳ ಸೊಸೆಯ ಸಹ ಬಂದು ತಮ್ಮ ತಮ್ಮ ಗಂಡಂದಿರ ಶಿರಸ್ಸಿನ ಮುಂದೆ ನಿಂತು, ತಮ್ಮ ತಮ್ಮ ಕುತ್ತಿಗೆಗಳನ್ನು ಕತ್ತರಿಸುತ್ತಿರುವ ರಲ್ಲಿ, ಪರ ಶಿವನು ಪ್ರತ್ಯಕ್ಷನಾಗಿ, ಎಲ್ಲರಿಗೂ ಪ್ರಾಣದಾನಮಾಡಿ, ಕೈಲಾಸಕ್ಕೆ ಕರೆ ದುಕೊಂಡು ಹೋದನು.