ಪುಟ:ಚೆನ್ನ ಬಸವೇಶವಿಜಯಂ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈವಶರಣರ ಕಥೆಗಳು 4೪ ಳನು ದೇವಸೇನೆಯನ್ನೆಲ್ಲ ಸೋಲಿಸಿದನು. ಇಂದ್ರನು ನಾಚಿ, ಎಂದಿನಂತೆ ಅವನ ರಾಜ್ಯದಲ್ಲಿ ಮಳೆ ಹುಯ್ದು ಕೊಂಡಿರುವಂತೆ ನಕ್ಷತ್ರಗಳಿಗೆ ಬೆಸಸಿ ದನು. ಇದೇ ರಾಜೇಂದ್ರಚೋಳನು ರೇವಣಸಿದ್ದ ಶನಿಗೆ ತನ್ನ ಕುಮಾ ರಿಯನ್ನು ಕೊಟ್ಟು, ಶಿವಭಕ್ತರಿಗೆ ತನ್ನ ರಾಜ್ಯ ಸಂಪತ್ತನ್ನೆಲ್ಲ ದಾನಮಾಡಿ, ಕೈಲಾಸವನ್ನು ಹೊಂದಿದನು, ಪಾಂಡ್ಯಭೂಪನು ತನ್ನ ರಾಷ್ಟ್ರವನ್ನು ಚೊಕ್ಕನೈನಾರರ ಸೇವೆಗಾಗಿ ಒಪ್ಪಿಸಿ, ಶಿವಲೋಕವನ್ನು ಹೊಕ್ಕನು. ತಿರುನೀಲಕಂಠನೆಂಬ ಶರಣನು ಜಡೆಯನೈನಾರರಿಗೂ ಯಸ್ಥಜ್ಞಾ ನಿದೇವಿಗೂ ಮಗನಾಗಿ ಹುಟ್ಟಿ, ನರಸಿಂಗಮೊನೆಯಾರರಿಗೂ ನಂಬಿದೇವಿ ಗೂ ಸಾಕುಮಗನಾಗಿ, ಸಂಕಿಲೆ ಪರವೆ ಯೆಂಬ ಭಕ್ಕೆಯರನ್ನು ವರಿಸಿ, ಆ ಪರವೆಯೆಂಬ ಮೋಹಪತ್ನಿಯ ಕುಚಕಲಶದಲ್ಲಿ ಶಿವನನ್ನು ನೆನೆದು ಮಾ ತನಾಡಿಸಿ, ದಿನವೊಂದಕ್ಕೆ ಒಂದು ಬೊಗಸೆಯ ಹೊನ್ನನ್ನು ಶಂಕರನಿಂದ ಪಡೆಯುತ್ತ, ಸೋಮಾಸಿಮಾರಯ್ಯನ ಪೂಜಾಕಾರಕ್ಕಾಗಿ ಶಿವನನ್ನು ಅ ವನ ಮನೆಗೆ ಕಳುಹಿಕೊಟ್ಟು, ಪೆರುಮಾಳಿ ಯಕುರುಂಬರನ್ನು ಜತೆಯಲ್ಲಿ ಕೂಡಿಕೊಂಡು ಕೈಲಾಸವನ್ನು ಸೇರಿದನು. ಚೆರಮರಾ ಸನು, ಶರಣರಲ್ಲಿ ವಿಧೇಯತೆಯಿಲ್ಲದ ನಂಬೈಣ್ಣನನ್ನು ಶಿವನು ಕೈಲಾಸಕ್ಕೆ ಕರೆದುಕೊಂಡು ಹೋದ ಕೊಂಬ ಸುದ್ದಿಯನ್ನು ಕೇಳಿ, ತನ್ನ ಬೊಕ್ಕಸವನ್ನೆಲ್ಲ ತಿರುನೀಲಕಂಠರಿಗೆ ಒಪ್ಪಿಸಿ, ಕೈಲಾಸಕ್ಕೆ ದಾಳಿಯಿ ಟ್ಟು ನಡೆದು ಶಿವನನ್ನ ನೆಚ್ಚಿನ ಸಾಲೋಕ್ಯವನ್ನು ಪಡೆದನು. ಮೊನೆಯವರನೆಂಬ ಚೋಳನು ರಾಜ್ಯವನ್ನಾಳಕೊಂಡಿರುವಾಗ, ಒಬ್ಬ ಜ೦ಗವನು ತನ್ನ ಪತ್ನಿಯು ಅಳಿದ ಕೋಕದಿಂದ ತಾನೂ ಮೃತ ನಾಗುವುದಕ್ಕೆ ಸಿದ್ಧನಾಗಿರಲು, ದೊರೆಯು ಆ ವಾರೆಯನ್ನು ಕೇಳಿ ಮರು ಗಿ, ತನ್ನ ಸತಿಯನ್ನೇ ಆ ಜಂಗಮನಿಗೆ ಒಪ್ಪಿಸಿ, ವಸ್ತ್ರಾಭರಣಾದಿಗಳ ೩ ತ್ತು, ಸೇವಿಸಿ, ಶಿವಾನುಗ್ರಹದಿಂದ ಕೈಲಾಸವನ್ನು ಸೇರಿದನು.

  • ಕೈವಲ್ಯಚೋಳನೆಂಬ ಛಪತಿಯು ಶತ್ರುಗಳ ಮೇಲೆ ದಂಡೆತ್ತಿ ಹೋಗಿ ಮೂರುವರ್ಷ ಕಾದಾಡುತ್ತಿರಲು, ತನ್ನ ದೇಶಕ್ಕೆ ಕ್ಷಾಮವು ತಟ್ಟಿತು. ಆಗ ಅವನ ಪ್ರಜೆಯಾದ ಶ್ರೀಮಂತಶೆಟ್ಟಿಯೊಬ್ಬನು ತನ್ನಲ್ಲಿದ್ದ ದ್ರವ್ಯವನ್ನೆಲ್ಲ ಪ್ರಜೆಗಳಿಗೆ ಕೊಟ್ಟು ಕಾಪಾಡಲು, ಅದನ್ನು ದೊರೆಯು