ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸಪೇಕಏಜಯಂ, [ಅಧ್ಯಾಯ ದಿಯ ದಡದಲ್ಲಿ ಶುದ್ಧ ಸ್ಪಟಿಕಲಿಂಗವಿರುವಂತೆಯೂ, ಕ್ಷೀರಸಮುದ್ರದ ಪ ಕ್ಯದಲ್ಲಿ ಸೂಕ್ಲಚಂದ್ರನಿರುವಂತೆಯೂ, ಸರೋವರದ ಮಗ್ಗುಲಲ್ಲಿ ರಾಜ ಹಂಸಪಕ್ಷಿಯು ಮೆರೆಯುವಂತೆಯೂ, ಮಂಗಳಾಂಗಿಯಾದ ನಾಗಲಾಂಬಿ ಕೆಯ ಮಗ್ಗುಲಲ್ಲಿ ರಂಜಿಸುತ್ತಿರುವ ಶಿಶುವನ್ನು ಕಂಡು ಏಾರತಿಯ ಕಣ್ಣಿ ನಲ್ಲಿ ಆನಂದಬಾಷ್ಯಗಳು ತುಂಬಿಕೊಳ್ಳಲು, ಆ ಪ್ರೇಮಪುತ್ರನನ್ನು ಪ್ರೀ ತಿಯಿಂದೆತ್ತಿ ತಬ್ಬಿಕೊಂಡಳು. ಆಗ ಪರಶಿವನು ಪಾರತೀಸಮೇತನಾಗಿ ಕುಳಿತು ಪಂಚಕಲಶಸ್ಥಾಪನವನ್ನು ಮಾಡಿ, ಆ ಕುಮಾರನಿಗೆ ವೇಧಾ ಮನು ಕ್ರಿಯೆ ಯೆಂಬ ತ್ರಿವಿಧದೀಕ್ಷೆಗಳನ್ನು ಮಾಡಿ, ಆತನ ಸ್ಕೂಲ ಹೂ ಕಾರಣಶರೀರಗಳಲ್ಲಿ ಇದ್ಮಪ್ರಾಣಭಾವವೆಂಬ ತ್ರಿವಿಧಲಿಂಗಗಳನ್ನು ಸ್ಥಾಪಿಸಿ, ಶಿವಶರಣರಿಗೆಲ್ಲ ಇದೇರೀತಿಯಾಗಿ ನೀನು ದೀಕ್ಷೆಯನ್ನು ನಾ ಡೆಂದು ಬೋಧಿಸುವನೋ ಎಂಬಂತೆ ಶಿವದೀಕ್ಷಾಸಂಸ್ಕಾರವನ್ನು ಮಾಡಿದ ನು, ಮತ್ತೂ ಈ ಪುತ್ರನು ತೇಜಿಸ್ಸಿನಲ್ಲೂ, ರೂಮಿನಲ್ಲೂ, ಶೈವವಿದ್ಯೆ ಲ್ಲೂ, ಶಿವಜ್ಞಾನದಲ್ಲೂ, ನೈರಣ್ಯದಲ್ಲೂ, ಪವಾಡಗಳಲ್ಲೂ ಬಸವೇಶ ನಿಗಿಂತಲೂ ಚೆನ್ನಾಗಿ ತೋರುವನಾದುದರಿಂದ ಇವನಿಗೆ ಚೆನ್ನ ಬಸವೇಶ?” ನೆಂಬ ಹೆಸರು ಒಪ್ಪತಕ್ಕುದು ಎಂದು ಮಾರುತಿಯೊಡನೆ ಹೇಳಿ, ನಾನು ಕರಣವನ್ನು ಮಾಡಿದನು. ಬಕ ಪಾಗತಿ ಪರಮೇಶ್ವರರಿಬ್ಬರೂ ಆ ಮುದ್ದು ಮಗನನ್ನ ನೋಡುವರು, ಸಂತೊಸದಿಂದ ತಲೆಯನ್ನು ತೂಗುವ ರು, ಎತ್ತಿ ಮುದ್ದಾಡುವರು, ಅಪ್ಪಿ ಹಾಡುವರು, ತೊಡೆಯಲ್ಲಿ ಮಲಗಿಸಿ ತಟ್ಟುವರು, ಕೈಯಲ್ಲಿ ಮಲಗಿಸಿ ನಂಬಿಸುವರು, ನಗಿಸುವರು, ಅಂಗಾಂಗಗ ಇಲ್ಲೂ ಮುತ್ತನ್ನು ಕೊಡುವರು, ಕೈಚಾಚಿ ಕರೆಯುವರು, ಹೀಗೆ ನಾ ನಾವಿಧವಾಗಿ ಪುತ್ತಮೋಹದಿಂದ ಪ್ರೀತಿಸುತ್ತಿರುವಲ್ಲಿ ಪಾರತಿಗೆ ಸ್ತನಗಳ ಲ್ಲಿ ಹಾಲು ತುಂಬಿ ಬಿಗಿಯಲು, ಕೂಡಲೇ ಕುವರನನ್ನೆತ್ತಿ ತೊಡೆಯಲ್ಲಿ ವ ಲಗಿಸಿ, ಮೊಲೆಯನ್ನುಣಿಸಿ, ಹಾಲನ್ನು ಕುಡಿಸಿ, ಮುಂಡಾಡಿ, ಹರಸಿ, ಚಿನ್ನದ ತೊಟ್ಟಿಲಲ್ಲಿ ಮಲಗಿಸಿ, ಅಮ್ಮ ವೈ, ತೊಳೆಯಕ್ಕ, ಚೆಂಗಳ, ನಿಂಬಿಯಕ್ಕೆ ಮೊದಲಾದ ರುದ್ರಕಸ್ಯೆಯರೊಡನೆ ಕೂಡಿ, ಹಣೆಗೆ ಪಾದ ಧೂಳಿಯ ರಕ್ಷೆಯ ಬಟ್ಟನ್ನಿಟ್ಟು, ಜೋ ಜೋ ಎಂದು ಜೋಗುಳ ಹಾ ಡನ್ನು ಹಾಡಿ ತೂಗಿದಳು, ಬಳಿಕ ನಾಗಲಾಂಬಿಕೆಯನ್ನು ಕುರಿತು