ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಕಪುಪ್ಪಕೋತ್ಸವವು 44 ದೇವತಾಸ್ತ್ರೀಯರ ಸಾಂದಾತಿಶಯವನ್ನು ತಿರಸ್ಕರಿಸುತ್ತಿರುವ ಮೌನಾ ರಿಯರು ನಾನಾವಿಧವಾಗಿ ಅಲಂಕಾರಗೊಂಡು ಮನೆಬಾಗಿಲುಗಳಲ್ಲಿ ಮಾ ಡಗಳಲ್ಲೂ ಜಗುಲಿಗಳಲ್ಲಿ ನಿಂತು ನೋಡುತ್ತಿದ್ದರು. ಅಷ್ಮೆ ಸರಸ್ವತಿ ಯರನ್ನೂ ಕೂಡ ತಮ್ಮ ಲಾವಣ್ಯಸೌಂದ‌ಮಾಂಗಲ್ಯಾತಿಶಯದಿಂದ ಧಿಕ್ಕರಿಸುತ್ತಿರುವ ಸುವಾಸಿನಿಯರು ಅಲ್ಲಲ್ಲಿಗೆ ಆರತಿಗಳನ್ನೆತ್ತಿ ಸೇಸೆಯ ನ್ನು ತಳಿಯುತ್ತಿದ್ದರು. ರಾಜನು ಅವರೆಲ್ಲರಿಗೂ ರತ್ನ ಹಾರ ತಾಂಬೂಲ ಹೊನ್ನು ಮೊದಲಾದುವುಗಳನ್ನು ಬಸವರಾಜನ ಹಸ್ತದಿಂದ ಕೊಡಿಸುತ್ತಿ ದ್ದನು. ದಾರಿಯುದ್ದಕ್ಕೂ ಭೂರಿ ದಕ್ಷಿಣೆಗಳನ್ನು ಹಂಚಿಸುತ್ತಿದ್ದನು. ಈ ಅತಿಯಾದ ವೈಭವದಿಂದ ರಾಜನರಮನೆಯಿಂದ ಉತ್ಸವವನ್ನು ಹೊರಡಿಸಿ ಕಂಡು ಬಸವೇಶ್ವರನರಮನೆಗೆ ಕರೆದುಕೊಂಡುಬಂದು, ಅಲ್ಲಿಳಸಿ, ಆ ಮಹಿಮಶಾಲಿಗೆ ನಾನಾವಸ್ತ್ರಾಭರಣಗಳನ್ನು ಉಡುಗೊರೆಯಾಗಿ ಕೊಟ್ಟು ವಂದಿಸಿ, ರಾಜನು ತನ್ನರಮನೆಗೆ ಹಿಂತಿರುಗಿದನು. ಇತ್ತ ಬಸವೇಶನು ಸಕಲಗಣಸನಹದೊಡನೆ ಕೂಡಿ ಸಂತೋಷದಿಂದ ಇರುತ್ತಿದ್ದನು. ಬಸ ವೇಶನ ಪತ್ನಿಯಾದ ನೀಲಲೋಚನೆಯು ಅಂತಃಪುರದ ಸ್ತ್ರೀಯರನ್ನೆಲ್ಲ ಕರಸಿ, ಕುವರನಿಗೆ ಚಿನ್ನದ ಹರಿವಾಣಗಳಲ್ಲಿ ನಾನಾಬಣ್ಣದಾರತಿಗಳನ್ನೆತ್ತಿ ನಿವಾಳಿಸಿ, ಹರಸಿ, ಸೇಸೆಯನ್ನಿಕ್ಕಿನಿವಳು, ಅಷ್ಟು ಹೊತ್ತಿಗೆ ಸಂಧ್ಯಾಕಾ ಲವಾಯಿತು. ಬಸವೇಶನೂ ಅತ್ತಿಗೆ ನಾದಿನಿಯರೂ ಕೂಡ ಸ್ಪಾನಶಿವಾ ರ್ತನೆಗಳು ಮಾಡಿ ಸಂಗಮವಾದವಂ ಸೇವಿಸಿ, ಭಕ್ತರ ಪಟ್ಟಿಯಲ್ಲಿ ಕು ಕೌತು, ಪ್ರಸಾದ ಕಾರವಂ ಮಾಡಿದರು. ಬಳಿಕ ಸಕಲ ಭಕ್ತರಿಗೂ ವಸ್ತ್ರಾಭರಣದುಡುಗೊರೆಗಳನ್ನೂ ದಕ್ಷಿಣೆಗಳನ್ನೂ ಕೊಟ್ಟು ಸಂತೋಷ ದಿಂದ ಕಳುಹಿಕೊಟ್ಟರು. ಬಸವೇಶನು ಸತಿಯಾದ ನೀಲಲೋಚನೆಯೊ ಡನೆ ಶಯ್ಯಾಗೃಹವನ್ನು ಸೇರಿದನು. ನಾಂಗಲಾಂಬಿಕೆಯು ಮೃದುತಲ್ಪ ದಲ್ಲಿ ಸುಕುಮಾರನನ್ನು ಮಲಗಿಸಿಕೊಂಡು ಸುಖನಿದ್ರೆಗೈದಳು. ಅತ್ತ ಕೈಲಾಸದಲ್ಲಿ ಭಾರತೀಪರಮೇಶ್ವರರು ಭೂಲೋಕದಲ್ಲಿ ತಮ್ಮ ಚಿತ್ಕಳಾ ಕುಮಾರನು ಪವಾಡವನ್ನು ಮೆರೆದು ಜನಿಸಿರುವುದನ್ನು ನೋಡಬೇಕೆಂಬ ಅಪೇಕ್ಷೆಯಿಂದ ವೃಷಭನನ್ನು ಹತ್ತಿ ರುದ್ರಕವೃಕೆಯರೊಡನೆ ಭೂಲೋಕ ಕ್ಕೆ ಬಂದು, ನಾಗಲಾಂಬಿಕೆಯ ಶಯ್ಯಾಗೃಹವನ್ನು ಹೊಕ್ಕರು. ಗಂಗಾನ